/newsfirstlive-kannada/media/post_attachments/wp-content/uploads/2025/07/ramya6.jpg)
ಸ್ಯಾಂಡಲ್ವುಡ್ ನಟಿ ರಮ್ಯಾ ಸದ್ಯ ಹಾಟ್ ಟಾಪಿಕ್ನಲ್ಲಿದ್ದಾರೆ. ಅಶ್ಮೀಲವಾಗಿ ಕಾಮೆಂಟ್ಸ್ ಮಾಡಿದವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಇದರ ಮಧ್ಯೆ ನಟ ಪ್ರಥಮ್ ನಟಿ ರಮ್ಯಾ ಅವರನ್ನು ಬೆಂಬಲಿಸಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್ ಸದ್ಯದ ಬೆಳವಣಿಗೆ ಬಗ್ಗೆ ಮೌನವಾಗಿರುವ ಕಲಾವಿದರಿಗೆ ಟಾಂಗ್ ಕೊಟ್ಟಂತೆ ಇದೆ.
ಇದನ್ನೂ ಓದಿ:ರಮ್ಯಾ ಆಕ್ರೋಶಕ್ಕೆ ನಟಿ ರಕ್ಷಿತಾ ಕೌಂಟರ್? ದರ್ಶನ್ ಫ್ಯಾನ್ಸ್ ವಾರ್ಗೆ ಹೊಸ ಟ್ವಿಸ್ಟ್..!
ನಟ ಪ್ರಥಮ್ ಪೋಸ್ಟ್ನಲ್ಲಿ ಏನಿದೆ?
I stand with @divyaspandana madam dignity! ಎಲ್ಲರೂ ನಟಿ ರಮ್ಯ ಪರ ನಿಲ್ಲೋಣ! ಈಗಲೂ ನಾವು ರಮ್ಯರವರ ಆತ್ಮಗೌರವದ ಪರ ನಿಲ್ಲದೇ ಹೋದರೆ ನಾವು ಕಲಾವಿದರಾಗೋಕೆ ನಾಚಿಕೆಯಾಗಬೇಕು. ಕನ್ನಡ ಚಿತ್ರರಂಗವನ್ನ ಭಯದಿಂದ ಮುಕ್ತಗೊಳಿಸೋಣ. ಇಷ್ಟೆಲ್ಲಾ ಆದ್ರೂ ಜಾಣಕಿವುಡರಾಗಿರೋ ಪುಣ್ಯಾತ್ಮ ಕಲಾವಿದರಿಗೆ ದೇವರು ನೂರ್ಕಾಲ ಆಯಸ್ಸು ನೀಡಲೆಂದು ಪ್ರಾರ್ಥನೆ ಎಂದಿದ್ದಾರೆ.
ಕಾನೂನು ಸಮರಕ್ಕೆ ಮುಂದಾದ ನಟಿ ರಮ್ಯಾ
ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಬಗ್ಗೆ ಖುದ್ದು ರಮ್ಯಾ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋಸ್ ಶೇರ್ ಮಾಡಿಕೊಂಡಿದ್ದರು. ದರ್ಶನ್ ಫ್ಯಾನ್ಸ್ ವಿರುದ್ಧ ನಟಿ ರಮ್ಯಾ ಕಾನೂನಾತ್ಮಕವಾಗಿ ಪಾಠ ಕಲಿಸಲು ತೀರ್ಮಾನಿಸಿದ್ದಾರೆ. ಅಶ್ಲೀಲವಾಗಿ ನಿಂದಿಸುತ್ತಿರೋರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಲು ನಟಿ ನಿರ್ಧರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ