/newsfirstlive-kannada/media/post_attachments/wp-content/uploads/2023/06/Ollre-hudga-Pratham.jpg)
ಒಳ್ಳೆ ಹುಡುಗ ಪ್ರಥಮ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಾಗಾಗಿ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಕುಟುಂಬದವರ ಮೆಚ್ಚಿದ ಹುಡುಗಿಯ ಜೊತೆಗೆ ಪ್ರಥಮ್ ಉಂಗುರ ಬದಲಾಯಿಸಿಕೊಂಡಿದ್ದಾರೆ. ಈ ವಿಚಾರವನ್ನು ಅಭಿಮಾನಿಗಳೆದುರು ಹಂಚಿಕೊಂಡಿದ್ದಾರೆ.
ಪ್ರಥಮ್ ಏನೇ ಮಾಡಿದರು ಸದ್ದು ಆಗುತ್ತೆ. ಆದರೆ ಸದ್ದಿಲ್ಲದೆ ಎಂಗೇಜ್ ಮಾಡಿಕೊಂಡಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಒಂದು ಸುಂದರ ಕ್ಷಣ. ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರವಿಲ್ಲದೆ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗಿರೋಕೆ ಇಷ್ಟ. ಮದುವೆ ಎಷ್ಟು ಅದ್ಧೂರಿ ಅನ್ನೋಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹಾಗೇ ಇರ್ತೀನಿ. ಹರಸುವವರು ಅಲ್ಲಿಂದಲೇ ಹರಸಿ ಎಂದು ಹೇಳಿದ್ದಾರೆ.
ಸದ್ಯ ಪ್ರಥಮ್ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿಯಾಗಿದೆ. ಯಾಕಂದ್ರೆ ಈ ಸಮಯದಲ್ಲಿ ಸಿಂಪಲ್ಲಾಗಿ ಪ್ರಥಮ್ ಎಂಗೇಜ್ ಆಗಿದ್ದಾರೆ. ಆದರೆ ಈ ವಿಚಾರ ತಿಳಿದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಶುಭಾಶಯ ತಿಳಿಸಿದ್ದಾರೆ.
ಹುಡುಗಿ ಯಾರು?
ಪ್ರಥಮ್ ತಾನು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಹುಡುಗಿ ಯಾರು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಅಭಿಮಾನಿಗಳು ಹೇಳುವಂತೆ ಪ್ರಥಮ್ ಸಿನಿ ತಾರೆಯರನ್ನು ಬಿಟ್ಟು ಸಾಮಾನ್ಯ ಯುವತಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಮದುವೆ ಯಾವಾಗ?
ಇನ್ನು ಪ್ರಥಮ್ ಮದುವೆ ಯಾವಾಗ? ಎಲ್ಲಿ? ಎಂಬ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಸದ್ಯ ಎಂಗೇಜ್ಮೆಂಟ್ ಮಾಡಿಕೊಂಡಿರುವ ಸುದ್ದಿ ಮಾತ್ರ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ