ಐಶ್ವರ್ಯಾ ಸಿಂಧೋಗಿ ಮುಂದೆ ಶಿಶಿರ್​ಗೆ ವಾರ್ನಿಂಗ್​ ಕೊಟ್ಟ ಒಳ್ಳೆ ಹುಡುಗ ಪ್ರಥಮ್; ಏನದು?

author-image
Veena Gangani
Updated On
ಐಶ್ವರ್ಯಾ ಸಿಂಧೋಗಿ ಮುಂದೆ ಶಿಶಿರ್​ಗೆ ವಾರ್ನಿಂಗ್​ ಕೊಟ್ಟ ಒಳ್ಳೆ ಹುಡುಗ ಪ್ರಥಮ್; ಏನದು?
Advertisment
  • ಬಿಗ್​ಬಾಸ್​ನಿಂದ ಆಚೆ ಬರುತ್ತಿದ್ದಂತೆ ಮತ್ತೆ ಒಂದಾದ ಈ ಜೋಡಿ
  • ಬಿಗ್​ಬಾಸ್​ ಮೂಲಕ ಖ್ಯಾತಿ ಪಡೆದುಕೊಂಡ ಐಶ್ವರ್ಯಾ, ಶಿಶಿರ್
  • ಐಶ್ವರ್ಯಾ ಮುಂದೆಯೇ ಗೆಳೆಯ ಶಿಶಿರ್​ಗೆ ವಾರ್ನಿಂಗ್​ ಕೊಟ್ಟಿದ್ದೇಕೆ?

ಸೋಷಿಯಲ್ ಮೀಡಿಯಾ ಬಿಗ್​ಬಾಸ್​ ಸೀಸನ್ 11ರ ಈ ಜೋಡಿ ಸಖತ್ ಸೌಂಡ್ ಮಾಡುತ್ತಿದೆ. ಬಿಗ್​ಬಾಸ್​ನಿಂದ ಆಚೆ ಬಂದ ಮೇಲೆ ಈ ಇಬ್ಬರು ಮತ್ತಷ್ಟೂ ಕ್ಲೋಸ್​ ಆಗಿದ್ದಾರೆ. ಅವರು ಬೇರೆ ಯಾರೂ ಅಲ್ಲ.. ಅವರೇ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯ ಸಿಂಧೋಗಿ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ಗೆ ಕಾಡಿದ ಅನಾರೋಗ್ಯ ಸಮಸ್ಯೆ; ಸವಾಲುಗಳು ಏನೇನು..?

publive-image

ಹೌದು, ಬಿಗ್​ಬಾಸ್​ಗೆ ಬರುವ ಮುನ್ನ ಶಿಶಿರ್ ಹಾಗೂ ಐಶ್ವರ್ಯಾ  ಒಳ್ಳೆಯ ​ಸ್ನೇಹಿತರಾಗಿದ್ದರು. ಈ ಇಬ್ಬರು ಒಟ್ಟಿಗೆ ಒಂದು ಸಿನಿಮಾ ಕೂಡ ಮಾಡಿದ್ದರು. ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಈ ಇಬ್ಬರು ಮತ್ತಷ್ಟೂ ಕ್ಲೋಸ್​ ಆಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಿರೋ ವಿಡಿಯೋಗಳು. ನಿನ್ನೆ ಹೋಳಿ ಹಬ್ಬದ ಪ್ರಯುಕ್ತ ಶಿಶರ್ ಹಾಗೂ ಐಶ್ವರ್ಯಾ ಅವರು ರಾಜಾ ರಾಣಿ ಹಾಗೇ ಸಖತ್ ಮಿಂಚಿದ್ದರು. ಇದೇ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಅಲ್ಲದೇ ನೀವಿಬ್ಬರು ಬಹಳ ಒಳ್ಳೆಯ ಸ್ನೇಹಿತರು ಅಂತ ಕೂಡ ಹಾಡಿ ಹೊಗಳಿದ್ದರು.

ಆದ್ರೆ, ಇದರ ಮಧ್ಯೆ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಒಳ್ಳೆ ಹುಡುಗ ಪ್ರಥಮ್ ಐಶ್ವರ್ಯ ಸಿಂಧೋಗಿ ಮುಂದೆನೇ ಶಿಶಿರ್ ಶಾಸ್ತ್ರಿಗೆ ವಾರ್ನಿಂಗ್​ ಕೊಟ್ಟಿದ್ದಾರೆ. ಹೌದು, ಪಕ್ಕದಲ್ಲೇ ಐಶ್ವರ್ಯಾ ಅವರನ್ನು ನಿಲ್ಲಿಸಿಕೊಂಡು, ನಾನು ಹಾಗೂ ಐಶ್ವರ್ಯಾ ಅವರು ಮುಂದೆ ಒಟ್ಟಿಗೆ ಸಿನಿಮಾ ಮಾಡೇ ಮಾಡ್ತೀವಿ. ಯಾವುದೇ ಕಾರಣಕ್ಕೂ ಶಿಶಿರ್​ ಅನ್ನೇ ಸಿನಿಮಾದಲ್ಲಿ ವಿಲನ್​ ಪಾತ್ರ ಕೊಟ್ಟು ಹಾಕಿ ಹೊಡೆಯುತ್ತೇವೆ. ಅವ್ನು ಏನಾದ್ರೂ ಕಾಫಿ ಕುಡಿಸೋಕೆ ಬಂದ್ರೆ ಮುಖಕ್ಕೆ ಕೊಡ್ತೀನಿ. ಶಶಿರ್ ನೆನಪಿನಲ್ಲಿ ಇಟ್ಟುಕೋ ನಾನು ಇವರು ಸಿನಿಮಾ ಮಾಡ್ತಾ ಇದ್ದೀವಿ. ಅದಕ್ಕೆ ತೊಂದರೆ ಕೊಡೋದೆಲ್ಲಾ ಮಾಡೋಕೆ ಹೋಗಬೇಡ ಇದು ವಾರ್ನಿಂಗ್​ ಅಂತ ಇಟ್ಟುಕೋ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment