/newsfirstlive-kannada/media/post_attachments/wp-content/uploads/2025/03/DOLPHINS-WELCOME.jpg)
ಗಗನಯಾನಿಗಳಾದ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ನಿರಂತರ 17 ದಿನಗಳ ಸತತ ಪ್ರಯತ್ನದಿಂದ 9 ತಿಂಗಳ ಬಾಹ್ಯಾಕಾಶದ ವಾಸವನ್ನು ತೊರೆದು ಭೂಮಿಗೆ ಬಂದಿಳಿದಿದ್ದಾರೆ. ಇಂದು ಅವರು ಸುರಕ್ಷಿತವಾಗಿ ಹಿಂದಿರುಗಿದ್ದಕ್ಕೆ ಇಡೀ ವಿಶ್ವಕ್ಕೆ ವಿಶ್ವವೇ ಸಂಭ್ರಮದಲ್ಲಿದೆ. 9 ತಿಂಗಳಿನಿಂದ ಇದ್ದ ದೊಡ್ಡದೊಂದು ಆತಂಕ ಮಂಜುಗಡ್ಡೆಯಂತೆ ಕರಗಿ ಹೋಗಿದೆ. ನಿಮಗೆಲ್ಲಾ ಈಗಾಗಲೇ ಗೊತ್ತೆ ಇದೆ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 3.27ರ ಸಮಯಕ್ಕೆ ನಿಕ್ ಹಾಗ್ಯೂ ಹಾಗೂ ಅಲೆಕ್ಸಾಂಡರ್ ಗೊರ್ಬುನೋವ್ ಜೊತೆಗೆ ಸುನೀತಾ ಹಾಗೂ ವಿಲ್ಮೋರ್ ಫ್ಲೋರಿಡಾದ ಕರಾವಳಿ ತೀರ ಗಲ್ಫ ಆಫ್ ಅಮೆರಿಕಾದಲ್ಲಿ ಬಂದಿಳಿದರು.
ಇದನ್ನೂ ಓದಿ: 900 ಗಂಟೆ ಸಂಶೋಧನೆ, 150ಕ್ಕೂ ಹೆಚ್ಚು ಪ್ರಯೋಗ.. 9 ತಿಂಗಳ ಸುನಿತಾ ವಿಲಿಯಮ್ಸ್ ಏನು ಮಾಡಿದರು?
ಇವರ ಆಗಮನಕ್ಕೆ ಜಗತ್ತು ಕಾದಂತೆ ನಿಸರ್ಗವೂ ಕಾದಿತ್ತೋ ಏನೋ ಎನ್ನುವಂತಹ ಘಟನೆಯೊಂದು ನಡೆದಿದೆ. 9 ತಿಂಗಳ ಬಳಿಕ ಸಾಗರದಲ್ಲಿ ಬಂದಿಳಿದ ಸಾಹಸಿಗಳನ್ನು ಅಲ್ಲಿನ ಡಾಲ್ಫಿನ್ಗಳು ಕೂಡ ಸ್ವಾಗತಕೋರಿವೆ. ಅಚ್ಚರಿ ಅನಿಸಿದರು ಕೂಡ ಇದು ನಿಜ. ಅವರಿಗಾಗಿಯೇ ಕಾಯುತ್ತಿದ್ದವು ಏನೋ ಎನ್ನುವ ರೀತಿಯಲ್ಲಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ಕ್ಯಾಪ್ಸೂಲ್ ಸಾಗರಕ್ಕೆ ಬಂದಿಳಿದಾಗ ಅದರ ಸುತ್ತ ಡಾಲ್ಫಿನ್ಗಳು ಹರಿದಾಡಿದವು. ಮೇಲೆದ್ದು ಕುಣಿದವು.
There are a bunch of dolphins swimming around SpaceX's Dragon capsule. They want to say hi to the Astronauts too! lol pic.twitter.com/sE9bVhgIi1
— Sawyer Merritt (@SawyerMerritt)
There are a bunch of dolphins swimming around SpaceX's Dragon capsule. They want to say hi to the Astronauts too! lol pic.twitter.com/sE9bVhgIi1
— Sawyer Merritt (@SawyerMerritt) March 18, 2025
">March 18, 2025
ಕ್ಯಾಪ್ಸೂಲ್ನಲ್ಲಿದ್ದ ಗಗನಯಾನಿಗಳನ್ನು ರಕ್ಷಣೆ ಮಾಡಲು ಹಡಗು ಬರುವ ವೇಳೆ ಡಾಲ್ಫಿನ್ಗಳ ಗುಂಪು ಕ್ಯಾಪ್ಸೂಲ್ ಸುತ್ತ ಈಜಾಡುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಸುನೀತಾರ ಸ್ವಾಗತಕ್ಕಾಗಿ ಅವು ಕೂಡ ಕಾದು ಕುಳಿತಿದ್ದವು ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ