Advertisment

ಮೊಟ್ಟ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನೆಯಾದ ಒಲಿಂಪಿಕ್ಸ್‌​.. ಅದ್ಧೂರಿ ಕ್ರೀಡಾಜಾತ್ರೆಗೆ ವರ್ಣರಂಜಿತ ಚಾಲನೆ

author-image
Bheemappa
Updated On
ಮೊಟ್ಟ ಮೊದಲ ಬಾರಿಗೆ ನೀರಿನ ಮೇಲೆ ಉದ್ಘಾಟನೆಯಾದ ಒಲಿಂಪಿಕ್ಸ್‌​.. ಅದ್ಧೂರಿ ಕ್ರೀಡಾಜಾತ್ರೆಗೆ ವರ್ಣರಂಜಿತ ಚಾಲನೆ
Advertisment
  • 85 ದೋಣಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಪ್ರವೇಶ ಪಡೆದ ಸ್ಪರ್ಧಿಗಳು
  • ಕ್ರೀಡಾಭಿಮಾನಿಗಳನ್ನ ಪುಳಕಿಸಿದ ಸಿಂಗರ್‌ ಲೇಡಿ ಗಾಗಾ ಗಾಯನ!
  • ಕಾರ್ಯಕ್ರಮದಲ್ಲಿ ಭಾರತ ತಂಡ ಮುನ್ನಡೆಸಿದವ್ರು ಯಾರು, ಯಾರು?

ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್‌ಗೆ ಪ್ಯಾರಿಸ್‌ನಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ವರುಣನ ಆರ್ಭಟದ ನಡುವೆಯು ಫ್ರಾನ್ಸ್‌ ಯಶಸ್ವಿಯಾಗಿ ಉದ್ಘಾಟನಾ ಸಮಾರಂಭ ನಡೆಸಿದೆ. ಇದೇ ಮೊದಲ ಬಾರಿಗೆ ಮೈದಾನದ ಹೊರಗೆ, ನದಿ ಮೇಲೆ ಉದ್ಘಾಟನೆಗೊಂಡ ಒಲಿಂಪಿಕ್ಸ್‌ ಕಾರ್ಯಕ್ರಮವಾಗಿದೆ.

Advertisment

ಇದನ್ನೂ ಓದಿ: ಧಾರಾಕಾರ ಮಳೆಗೆ ಸೋರುತ್ತಿರೋ ತಹಶೀಲ್ದಾರ್ ಕಚೇರಿ.. ಅಪಾಯದ ಮಟ್ಟ ಮೀರಿದ ರಾಜ್ಯದ ನದಿಗಳು, ಆತಂಕ

ಒಲಿಂಪಿಕ್ಸ್‌ ಕಾರ್ಯಕ್ರಮ ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಣ್ಣ ಬಣ್ಣದ ಲೈಟ್​ಗಳು ಆಕರ್ಷಣೆಯಾಗಿದ್ದವು. ಸ್ಪರ್ಧಿಗಳ ಸಂಭ್ರಮ, ಸಡಗರ.. ಸಿಡಿಮದ್ದುಗಳ ಸದ್ದುಗದ್ದಲ. ಡ್ಯಾನ್ಸ್​.. ಖ್ಯಾತ ಸೆಲೆಬ್ರೆಟಿಗಳ ಅಪೂರ್ವ ಸಮಾಗಮ ಸಮಾರಂಭದಲ್ಲಿ ಕಂಡುಬಂದವು.

ಇದನ್ನೂ ಓದಿ: ಮೊಬೈಲ್ ಬಳಸುವವರೇ ಎಚ್ಚರ.. ಒಂದು ಕಾಲ್ ರಿಸೀವ್ ಮಾಡಿದ್ದಕ್ಕೆ ₹1 ಕೋಟಿ ಮಾಯ; ಆಗಿದ್ದೇನು?

Advertisment

publive-image

ಪ್ಯಾರಿಸ್​ ಒಲಂಪಿಕ್​ನ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಸಿಟಿ ಆಫ್​ ಲವ್​ ಅಂತಾನೇ ಕರೆಯುವ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್‌​ನ ಉದ್ಘಾಟನಾ ಸಮಾರಂಭದ ಸಂಭ್ರಮ ಕಳೆಗಟ್ಟಿತ್ತು.. ಬಣ್ಣ ಬಣ್ಣದ ಬೆಳಕು, ಸಿಡಿಮದ್ದುಗಳ ಸದ್ದುಗದ್ದಲ, ಹಾಡು, ನೃತ್ಯಗಳು ಪ್ಯಾರಿಸ್​ನಲ್ಲಿ ಪುಳಕ ಹುಟ್ಟಿಸಿತ್ತು.

ಇತಿಹಾಸದಲ್ಲೇ ಮೊದಲಬಾರಿ ನೀರಿನ ಮೇಲೆ ಉದ್ಘಾಟನೆ!

ಜಗತ್ತಿನ ಅತಿ ದೊಡ್ಡ ಹಾಗೂ ಅದ್ಧೂರಿ ಕ್ರೀಡಾಜಾತ್ರೆ ಒಲಂಪಿಕ್ಸ್‌ಗೆ ನಿನ್ನೆ ವರ್ಣರಂಜಿತ ಚಾಲನೆ ಸಿಕ್ಕಿದೆ.. ಫ್ರಾನ್ಸ್‌ನ ರಾಜಧಾನಿ, ಪ್ರೇಮನಗರಿ ಪ್ಯಾರಿಸ್‌ ನಗರದ​ಲ್ಲಿ 33ನೇ ಆವೃತ್ತಿಯ ಒಲಿಂಪಿಕ್ಸ್‌ ಉದ್ಘಾಟನೆಗೊಂಡಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯಿಂದ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭವಾಗಿದೆ. 3ನೇ ಬಾರಿಗೆ ಪ್ಯಾರಿಸ್‌ ನಗರದಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯುತ್ತಿದ್ದು, ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ಆರಂಭೋತ್ಸವ ನಡೆದಿದೆ.

85 ದೋಣಿಗಳಲ್ಲಿ 7,000ಕ್ಕೂ ಹೆಚ್ಚು ಕ್ರೀಡಾಪಟುಗಳ ಎಂಟ್ರಿ!

ಪ್ಯಾರಿಸ್‌ ಜೀವನದಿ ಸೀನ್​ ಮೇಲೆ ವಿವಿಧ ದೇಶ ಹಾಗೂ ಒಲಿಂಪಿಕ್‌ ಅಸೋಸಿಯೇಷನ್‌ಗಳನ್ನು ಪ್ರತಿನಿಧಿಸುವ 7,000ಕ್ಕೂ ಹೆಚ್ಚು ಕ್ರೀಡಾಪಟುಗಳು 85 ದೋಣಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿ ಟೂರ್ನಿಗೆ ಅಧಿಕೃತ ಪ್ರವೇಶ ಪಡೆದಿದ್ದಾರೆ.. ಸೀನ್‌ ನದಿಯ ಎರಡೂ ದಂಡೆಗಳ ಮೇಲೆ ಸಿಡಿಮದ್ದು ಪ್ರದರ್ಶನ ಹಾಗೂ ಸಾಲುಗಟ್ಟಿ ನಿಂತ ಪ್ರೇಕ್ಷಕರ ಚಪ್ಪಾಳೆಗಳ ನಡುವೆ, ಒಲಿಂಪಿಕ್ ಜ್ಯೋತಿ ತರಲಾಯ್ತು.. ಸಿಡಿಮದ್ದುಗಳ ನಡುವೆ ಕ್ರೀಡಾಪಟುಗಳು ಸೀನ್ ನದಿಯಲ್ಲಿ ದೋಣಿಗಳ ಮೂಲಕ ಮೆರವಣಿಗೆಯಲ್ಲಿ ಎಂಟ್ರಿಕೊಟ್ರು.

Advertisment

ಇದನ್ನೂ ಓದಿ: ನೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?

publive-image

ಫ್ರೆಂಚ್ ಭಾಷೆಯಲ್ಲಿ ಹಾಡಿ ಗಮನ ಸೆಳೆದ ಸಿಂಗರ್‌ ಲೇಡಿ ಗಾಗಾ

ಸಂಪ್ರದಾಯದ ಪ್ರಕಾರ, ಆಧುನಿಕ ಒಲಿಂಪಿಕ್ಸ್‌ನ ಆತಿಥೇಯ ದೇಶ ಗ್ರೀಸ್‌ ಮೊದಲನೆಯವರಾಗಿ ಮೆರವಣಿಗೆಯಲ್ಲಿ ಸಾಗಿ ಬಂದ್ರು.. ಈ ಬಳಿಕ ಒಂದೊಂದೇ ತಂಡಗಳು ಕ್ರೀಡಾಕೂಟಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ವು.. ಈ ನಡುವೆ ಸಿಂಗರ್‌ ಲೇಡಿ ಗಾಗಾ, ಫ್ರೆಂಚ್ ಭಾಷೆಯಲ್ಲಿ ಹಾಡಿ ಗಮನ ಸೆಳೆದರು.. ಭಾರತ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಜರ್ಮನಿ, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ ಸೇರಿದಂತೆ 388 ಅಥ್ಲೀಟ್‌ಗಳ ತಂಡ ಮೆರವಣಿಗೆಯಲ್ಲಿ ಸಾಗಿತ್ತು. ನೃತ್ಯ ಪ್ರದರ್ಶನಗಳ ಮೂಲಕ 1789-1799ರವರೆಗೆ ನಡೆದ ಫ್ರೆಂಚ್ ಕ್ರಾಂತಿಯ ರೂಪಕ ಪ್ರದರ್ಶಿಸಲಾಯ್ತು.. ಈ ನಡುವೆ ನಿಗೂಢ ವ್ಯಕ್ತಿಗಳು ಒಲಿಂಪಿಕ್ ಜ್ಯೋತಿಯನ್ನ ಹಿಡಿದುಕೊಂಡು ಸಾಗಿದ್ರು.

ಭಾರತ ತಂಡ ಮುನ್ನಡೆಸಿದ ಪಿವಿ ಸಿಂಧು & ಶರತ್ ಕಮಲ್

ಪಿವಿ ಸಿಂಧು ಮತ್ತು ಶರತ್ ಕಮಲ್ ನೇತೃತ್ವದ ಭಾರತೀಯ ತಂಡ ಕೂಡಾ ದೋಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿತು.. ಬ್ಯಾಡ್ಮಿಂಟನ್‌ ತಾರೆ ಸಿಂಧು ಹಾಗೂ ದಿಗ್ಗಜ ಟೇಬಲ್‌ ಟೆನಿಸ್ ಆಟಗಾರ‌ ಶರತ್‌ ಭಾರತದ ಧ್ವಜಧಾರಿಗಳಾಗಿದ್ದರು. ಈ ವೇಳೆ ಭಾರತೀಯ ಕ್ರೀಡಾಪಟುಗಳ ಉತ್ಸಾಹ ಇಮ್ಮಡಿಗೊಂಡಿತ್ತು. ಭಾರತದಿಂದ 117 ಆಟಗಾರರು ಒಲಿಂಪಿಕ್ಸ್‌ ಕೂಟದಲ್ಲಿ ಪಾಲ್ಗೊಂಡಿದ್ದು, ಪದಕಗೆಲ್ಲುವ ಉತ್ಸಾಹದಲ್ಲಿದ್ರು.

Advertisment

[caption id="attachment_77053" align="alignnone" width="800"]publive-image ಒಲಿಂಪಿಕ್ಸ್​​ನಲ್ಲಿ ಭಾಗವಹಿಸೋ ಭಾರತದ ಸ್ಪರ್ಧಿಗಳು[/caption]

ಇನ್ನು ಪ್ಯಾರಿಸ್ ಒಲಂಪಿಕ್ಸ್​ ಮೇಲೆ ಉಗ್ರರ ಕರಿನೆರಳು ಆವರಿಸಿರುವುದರ ನಡುವೆ ಸುಸೂತ್ರವಾಗಿ ಕ್ರೀಡಾಕೂಡ ನಡೆಸಲು ಫ್ರೆಂಚ್​ ಸರ್ಕಾರ ಕ್ರಮ ಕೈಗೊಂಡಿದೆ.​​ ಉದ್ಘಾಟನೆಗೂ ಮುನ್ನ ಗಲಭೆ ನಡೆಸಿದ್ದ ಗಲಭೆಕೋರರನ್ನ ಬಲವಂತವಾಗಿ ಬಸ್​ ಹತ್ತಿಸಿ ಬೇರೆ ಬೇರೆ ನಗರಗಳಿಗೆ ಕಳಿಸಲಾಗಿದೆ. ಸ್ವರ್ಗದ ಬೀಡು, ಪ್ರವಾಸಿಗರ ಸುಂದರ ಜಾಡಾಗಿರೋ ಪ್ಯಾರಿಸ್​​ನಲ್ಲಿ ಸ್ವರ್ಗವೇ ಧರೆಗಿಳಿದಂತಾಗಿತ್ತು. ಬಣ್ಣ-ಬಣ್ಣದ ಬೆಳಕು ಕ್ರೀಡಾಭಿಮಾನಿಗಳ ಹೃದಯದಲ್ಲಿ ಪುಳಕದ ಬೆಳಕು ಚೆಲ್ಲಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment