ಓಂ ಪ್ರಕಾಶ್ ಪ್ರಕರಣದಲ್ಲಿ ಆರೋಪಿ ಪಲ್ಲವಿಗೆ ಪ್ಲಸ್ ಆಗುತ್ತಾ ಖಿನ್ನತೆ ಕಾಯಿಲೆ..?

author-image
Ganesh
Updated On
ಪತಿಯ ಮೇಲೆ ಏನಿತ್ತು ದ್ವೇಷ? ನಿವೃತ್ತ DGP ಓಂ ಪ್ರಕಾಶ್‌ ಸಾಯಿಸಿ ವಿಕೃತ ಕೇಕೆ ಹಾಕಿದ್ರಾ ಪಲ್ಲವಿ?
Advertisment
  • ಓಂ ಪ್ರಕಾಶ್ ಪ್ರಕರಣದಲ್ಲಿ ಆರೋಪಿ ಪಲ್ಲವಿ ಅರೆಸ್ಟ್
  • ಪರಪ್ಪನ ಅಗ್ರಹಾರ ಜೈಲು ಸೇರಿರುವ ಓಂ ಪ್ರಕಾಶ್ ಪತ್ನಿ
  • ನ್ಯಾಯಾಂಗ ಬಂಧನದಲ್ಲಿರುವ ಓಂ ಪ್ರಕಾಶ್ ಪತ್ನಿ ಪಲ್ಲವಿ

ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಪ್ರಕರಣದ ಆರೋಪಿ ಪಲ್ಲವಿಗೆ ಖಿನ್ನತೆ ಕಾಯಿಲೆ ಪ್ಲಸ್ ಆಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಆರೋಪಿ ಪಲ್ಲವಿ ಸುಮಾರು 12 ವರ್ಷದಿಂದ ಸ್ಕಿಜೋಫ್ರೇನಿಯಾ (Schizophrenia) ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಕೋರ್ಟ್​ನಲ್ಲಿ ಕಾಯಿಲೆಯಿಂದ ದುಡುಕಿನ ನಿರ್ಧಾರ ಕೈಗೊಂಡೆ ಅಂದರೆ, ಮೆಡಿಕಲ್ ಬೋರ್ಡ್​ನಿಂದ ಪಲ್ಲವಿ ಅವರನ್ನು ಚೆಕಪ್ ಮಾಡಿಸಲಾಗುತ್ತದೆ. ಒಂದು ವೇಳೆ ಈಕೆಗೆ ಕಾಯಿಲೆ ಇರೋದು ಸಾಬೀತಾದ್ರೆ ಪಬ್ಲಿಕ್ ಲೈಫ್ ಲೀಡ್ ಮಾಡೋಕೆ ಕಷ್ಟ ಆಗಲಿದೆ. ಜೊತೆಗೆ ರಿಹ್ಯಾಬ್ ಸೆಂಟರ್​​ನಲ್ಲಿ ಚಿಕಿತ್ಸೆ ನೀಡಲು ಕೋರ್ಟ್ ಆದೇಶಿಸುವ ಸಾಧ್ಯತೆ ಇದೆ.

ಸದ್ಯ ಪಲ್ಲವಿಯನ್ನು ಬಂಧಿಸಿರುವ ಹೆಚ್​​ಎಸ್​ಆರ್​ ಲೇಔಟ್ ಠಾಣೆ ಪೊಲೀಸರು, ಕೋರ್ಟ್​ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿರುವ ಪಲ್ಲವಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆ ತನಿಖೆಯಲ್ಲಿ ಮಹತ್ವದ ಸುಳಿವು.. FSL ತಂಡಕ್ಕೆ ಸಿಕ್ಕ ಕ್ಲೂ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment