/newsfirstlive-kannada/media/post_attachments/wp-content/uploads/2024/11/Ibrahim.jpg)
ಚಿಕ್ಕಬಳ್ಳಾಪುರ: ಓಮ್ನಿ ಕಾರಿಗೆ ಬೆಂಕಿ ತಗುಲಿ ಓರ್ವ ವ್ಯಕ್ತಿ ಸಜೀವ ದಹನವಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಲ್ಲಿನ ಚಿಂತಾಮಣಿ -ಮುರುಗಮಲ್ಲ ರಸ್ತೆಯ ಬಚ್ಚವಾರಹಳ್ಳಿ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಚಾಲಕ ಇಬ್ರಾಹಿಂ (48) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಇಬ್ರಾಹಿಂ ಚಲಾಯಿಸುತ್ತಿದ್ದ ಓಮ್ನಿ ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡಂತೆ ಒಳಗಡೆ ಸಿಲುಕಿದ್ದ ಇಬ್ರಾಹಿಂ ಅಲ್ಲೇ ಬೆಂಕಿಗೆ ಆಹುತಿಯಾಗಿದ್ದಾರೆ.
ಇದನ್ನೂ ಓದಿ: PHOTOS: ಕಾಲಲ್ಲಿ ಸರಪಳಿ.. ಪೊಲೀಸರು ನಿದ್ರೆಗೆ ಜಾರಿದ್ದಾಗ ವಿಚಾರಣಾಧೀನ ಕೈದಿ ಎಸ್ಕೇಪ್!
ಇಬ್ರಾಹಿಂ ವ್ಯಾಪಾರ ಮುಗಿಸಿಕೊಂಡು ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಓಮ್ನಿ ಕಾರು ಹಳ್ಳಕ್ಕೆ ಬಿದ್ದಿದೆ. ಕಾರಿನ ಬೆಂಕಿ ಹತ್ತಿಕೊಂಡಿರುವ ದೃಶ್ಯ ಕ್ಯಾಮೆರಾದಲ್ಲೂ ಸೆರೆಯಾಗಿದೆ.
ಇದನ್ನೂ ಓದಿ: ರಸ್ತೆ ದಾಟುವಾಗ ಟೆಕ್ಕಿಗೆ ಡಿಕ್ಕಿ ಹೊಡೆದ ಬೆನ್ಜ್ ಕಾರು.. ಯುವತಿ ಸ್ಥಳದಲ್ಲೇ ಸಾ*ವು
ಕೆಂಚಾರ್ಲಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ