/newsfirstlive-kannada/media/post_attachments/wp-content/uploads/2024/11/OMKAR-SELVI.jpg)
IPL 2025ರ ಮೆಗಾ ಹರಾಜಿನ ಮೊದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೊಡ್ಡ ಹೆಜ್ಜೆಯನ್ನಿಟ್ಟಿದೆ. ತಂಡದ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಲ್ವಿ (Omkar Salvi) ಅವರನ್ನು ನೇಮಿಸಿದೆ.
ಓಂಕಾರ್ ಅವರು ಈ ಮೊದಲ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಕೆಲಸ ಮಾಡಿದ ಅನುಭವ ಇದೆ. ವಿಶೇಷ ಅಂದರೆ ಅವರೊಬ್ಬ ಉತ್ತಮ ಟ್ರೈನರ್​. ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ಮುಖ್ಯ ಕೋಚ್ ಆಗಿದ್ದಾರೆ. 2023-24ರ ರಣಜಿ ಟ್ರೋಫಿಯಲ್ಲಿ ಅವರ ನೇತೃತ್ವದ ಮುಂಬೈ ತಂಡ ಒಳ್ಳೆಯ ಸಾಧನೆ ಮಾಡಿತ್ತು. ಆರ್‌ಸಿಬಿಗೆ ಅವರ ಆಗಮನದಿಂದ ಬೌಲರ್‌ಗಳಿಗೆ ಹೆಚ್ಚಿನ ಲಾಭವಾಗಲಿದೆ.
ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಕೇವಲ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. 21 ಕೋಟಿ ಸಂಭಾವನೆ ನೀಡಿ ಕೊಹ್ಲಿಯನ್ನು, 11 ಕೋಟಿ ನೀಡಿ ರಜತ್ ಪಾಟಿದಾರ್ ಅವರನ್ನು ಹಾಗೂ 5 ಕೋಟಿ ರೂಪಾಯಿ ನೀಡಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ. ನವೆಂಬರ್ 24-25 ರಂದು ನಡೆಯುವ ಮೆಗಾ ಹರಾಜಿಗಾಗಿ ಮ್ಯಾನೇಜ್ಮೆಂಟ್ ಕಾಯುತ್ತಿದೆ.
ಮೆಗಾ ಹರಾಜಿನಲ್ಲಿ 574 ಆಟಗಾರರನ್ನು ಅಂತಿಮಗೊಳಿಸಲಾಗಿದೆ. ಒಟ್ಟು 204 ಆಟಗಾರರನ್ನು ಖರೀದಿಸಬೇಕಿದೆ. ಇದರಲ್ಲಿ 70 ವಿದೇಶಿ ಆಟಗಾರರಿರುವುದು ಅಗತ್ಯವಾಗಿದೆ. 10 ತಂಡಗಳು ಒಟ್ಟು 46 ಆಟಗಾರರನ್ನು ಉಳಿಸಿಕೊಂಡಿವೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us