/newsfirstlive-kannada/media/post_attachments/wp-content/uploads/2024/11/Omkar.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಕೇವಲ 4 ದಿನಗಳ ಮಾತ್ರ ಬಾಕಿ ಇದೆ. ಈ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ಮುಂದಿನ ಸೀಸನ್ಗಾಗಿ ಬಲಿಷ್ಠ ತಂಡ ಕಟ್ಟಲು ಎಲ್ಲಾ ತಂಡಗಳು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ಆರ್‌ಸಿಬಿ ತಂಡ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಯಶ್ ದಯಾಳ್ ಅವರನ್ನು ಮಾತ್ರ ರಿಟೈನ್ ಮಾಡಿಕೊಂಡು ಉಳಿದ ಎಲ್ಲರನ್ನು ರಿಲೀಸ್ ಮಾಡಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿಗೆ ಆರ್‌ಸಿಬಿ ಸಜ್ಜಾಗಿದೆ. ಇದಕ್ಕೂ ಮುನ್ನ ಆರ್‌ಸಿಬಿ ತಂಡಕ್ಕೆ ಹೊಸ ಬೌಲಿಂಗ್ ಕೋಚ್ ನೇಮಕ ಆಗಿದ್ದಾರೆ.
ಹೊಸ ಬೌಲಿಂಗ್ ಕೋಚ್ ಯಾರು?
ಆರ್‌ಸಿಬಿ ತಂಡದ ಅಧಿಕೃತ ಖಾತೆಯಿಂದಲೇ ಆರ್‌ಸಿಬಿ ಹೊಸ ಬೌಲಿಂಗ್ ಕೋಚ್ ಹೆಸರು ಘೋಷಣೆ ಮಾಡಲಾಗಿದೆ. ಈ ಮೂಲಕ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್‌ಸಿಬಿ ಭಾರೀ ಸ್ಟ್ರಾಟರ್ಜಿ ಮಾಡಿಕೊಂಡಿದೆ.
ಇದರ ಭಾಗವಾಗಿ ಆರ್‌ಸಿಬಿ ಹೊಸ ಬೌಲಿಂಗ್ ಕೋಚ್ ನೇಮಕ ಮಾಡಿಕೊಂಡಿದೆ. ಈ ಬೌಲಿಂಗ್ ಕೋಚ್ ಬೇರೆ ಯಾರು ಅಲ್ಲ, ಓಂಕಾರ್ ಸಾಲ್ವಿ. ಮುಂಬೈ ರಣಜಿ ತಂಡದ ಕೋಚ್ ಆಗಿದ್ದ ಓಂಕಾರ್ ಸಾಲ್ವಿ ಅವರು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಕೆಕೆಆರ್ ತಂಡದ ಜತೆಗೂ ಸಾಲ್ವಿ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ರು.
ಯಾರು ಈ ಓಂಕಾರ್ ಸಾಲ್ವಿ?
ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಅವಿಷ್ಕರ್ ಸಾಲ್ವಿ. ಇವರ ಸಹೋದರ ಓಂಕಾರ್ ಸಾಲ್ವಿ. ಓಂಕಾರ್ ಸಾಲ್ವಿ ಕೋಚ್ ಆಗಿದ್ದಾಗ ಮುಂಬೈ ತಂಡ ರಣಜಿ ಟ್ರೋಫಿ ಗೆದ್ದಿತ್ತು. ಸಾಲ್ವಿ 2005ರಲ್ಲಿ ಮಧ್ಯಪ್ರದೇಶ ವಿರುದ್ಧ ರೈಲ್ವೇಸ್‌ಗಾಗಿ ಲಿಸ್ಟ್ ಎ ಆಟ ಆಡಿದ್ರು.
ಒಂದೇ ಒಂದು ವಿಕೆಟ್ ಪಡೆದ ಈತ ಬೌಲಿಂಗ್ ಕೋಚ್
ತಮ್ಮ ವೃತ್ತಿಜೀವನದಲ್ಲಿ ಓಂಕಾರ್ ಸಾಲ್ವಿ ಪಡೆದಿರುವುದು ಒಂದೇ ಒಂದು ವಿಕೆಟ್ ಮಾತ್ರ. ಕೆಕೆಆರ್ ಜೊತೆಗೆ ಒಪ್ಪಂದ ಮುಗಿದ ನಂತರ ಸಾಲ್ವಿ ಅವರನ್ನು ಮುಂಬೈ ರಾಜ್ಯ ತಂಡದ ಕೋಚ್ ಆಗಿ ನೇಮಿಸಲಾಯಿತು. ಈ ಒಪ್ಪಂದ 2025ರ ಮಾರ್ಚ್ಗೆ ಅಂತ್ಯವಾಗಲಿದೆ.
ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್ ಆಕ್ರೋಶ
ಈಗಾಗಲೇ ಆರ್‌ಸಿಬಿ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಮೆಗಾ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಭರ್ಜರಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈಗ ನೂತನ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಓಂಕಾರ್ ಸಾಲ್ವಿ ಅವರು ದಿನೇಶ್ ಕಾರ್ತಿಕ್ ಅವರೊಂದಿಗೆ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡಲು ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಒಂದೇ ಒಂದು ವಿಕೆಟ್ ಪಡೆದ ಈತ ಕ್ವಾಲಿಟಿ ಬೌಲರ್ಗಳನ್ನು ಹೇಗೆ ಆಯ್ಕೆ ಮಾಡಲಿದ್ದಾರೆ ಎಂದು ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: RCB ಹಿಂದಿನ ಮಾಸ್ಟರ್ ಮೈಂಡ್ DK; ಹರಾಜಿಗೆ ಮುನ್ನ ಮಹತ್ವದ ಹೆಜ್ಜೆ ಇಟ್ಟ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ