ಟ್ರಂಪ್ ಅಧಿಕಾರಕ್ಕೂ ಮುನ್ನವೇ ದೊಡ್ಡ ಬೆಳವಣಿಗೆ; ಹೆದರಿದ ಹಮಾಸ್, 15 ತಿಂಗಳದ ಯುದ್ಧಕ್ಕೆ ಫುಲ್​ಸ್ಟಾಪ್

author-image
Ganesh
Updated On
ಟ್ರಂಪ್ ಅಧಿಕಾರಕ್ಕೂ ಮುನ್ನವೇ ದೊಡ್ಡ ಬೆಳವಣಿಗೆ; ಹೆದರಿದ ಹಮಾಸ್, 15 ತಿಂಗಳದ ಯುದ್ಧಕ್ಕೆ ಫುಲ್​ಸ್ಟಾಪ್
Advertisment
  • ಮೂವರು ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್
  • ಇಸ್ರೇಲ್​ನಿಂದ 90 ಪ್ಯಾಲಿಸ್ಟೈನಿ ಪ್ರಜೆಗಳ ಬಿಡುಗಡೆ
  • ಕದನ ವಿರಾಮವನ್ನು ಸ್ವಾಗತಿಸಿದ ಜೋ ಬೈಡನ್

ಕಳೆದ 15 ತಿಂಗಳಿನಿಂದ ಗಾಜಾದಲ್ಲಿ ನಡೆಯುತ್ತಿದ್ದ ಘೋರ ಯುದ್ಧಕ್ಕೆ ವಿರಾಮ ಸಿಕ್ಕಿದೆ. ಇಸ್ರೇಲ್ ಮತ್ತು ಪ್ಯಾಲಿಸ್ಟೈನ್ ಕದನ ವಿರಾಮ ಘೋಷಣೆ ಮಾಡಿವೆ. ಇನ್ನೊಂದು ವಿಚಾರ ಏನೆಂದರೆ ಇವತ್ತು ಡೊನಾಲ್ಡ್​ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡ್ತಿದ್ದಾರೆ. ಟ್ರಂಪ್ ಅಧಿಕಾರಕ್ಕೆ ಬರುತ್ತಿರುವ ಹೊಸ್ತಿಲಲ್ಲಿ ಇಡೀ ವಿಶ್ವ ಅನೇಕ ಬದಲಾವಣೆಯನ್ನು ನಿರೀಕ್ಷೆ ಮಾಡಿದೆ.

ಇದನ್ನೂ ಓದಿ:ಅಮೆರಿಕದಲ್ಲಿ ಇಂದಿನಿಂದ ಟ್ರಂಪ್ ದರ್ಬಾರ್.. 40 ವರ್ಷಗಳ ಇತಿಹಾಸದಲ್ಲೇ ಒಂದು ದೊಡ್ಡ ಬದಲಾವಣೆ

publive-image

ಚುನಾವಣಾ ಅವಧಿಯಲ್ಲಿ ಇಸ್ರೇಲ್-ಪ್ಯಾಲಿಸ್ಟೈನ್ ನಡುವಿನ ಯುದ್ಧ ನಿಲ್ಲಿಸುವಂತೆ ಹೇಳಿದ್ದರು. ಅಲ್ಲದೇ ಯುದ್ಧ ನಿಲ್ಲಿಸದಿದ್ದರೆ ಹಮಾಸ್​ ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಟ್ರಂಪ್ ಅವರು ಅಧಿಕಾರ ಸ್ವೀಕರಿಸುವ ಒಂದು ದಿನ ಬಾಕಿ ಇರುವಾಗಲೇ ಕದನ ವಿರಾಮ ಘೋಷಣೆ ಆಗಿದೆ. ಇದನ್ನು ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಸ್ವಾಗತಿಸಿದ್ದಾರೆ.

ಪ್ರಮುಖ ವಿಚಾರಗಳು..

  • ಇಸ್ರೇಲ್-ಪ್ಯಾಲಿಸ್ಟೈನ್ ಮಧ್ಯೆ ಅ. 7, 2023ರಲ್ಲಿ ಯುದ್ಧ ಶುರುವಾಗಿತ್ತು
  • ಹಮಾಸ್ ಉಗ್ರರು ಇಸ್ರೇಲ್ ಮೇಲೆ ಲಗ್ಗೆ ಇಟ್ಟು ದಾಳಿ ಮಾಡಿದ್ದರು
  • ಭೂ, ಜಲ ಹಾಗೂ ವಾಯು ಮಾರ್ಗಗಳ ಮೂಲಕ ಅಟ್ಯಾಕ್ ಮಾಡಿದ್ದರು
  • 1200 ಮಂದಿ ಹಮಾಸ್​​ಗೆ ಜೀವ ಕಳೆದುಕೊಂಡಿರುವ ಬಗ್ಗೆ ಮಾಹಿತಿ
  • 250ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಹಮಾಸ್
  • ಇದಕ್ಕೆ ಪ್ರತಿಯಾಗಿ ಇಸ್ರೇಲ್ ಪ್ಯಾಲಿಸ್ಟೈನ್ ಮೇಲೆ ದಾಳಿ ಮಾಡಿತ್ತು
  • ಇಸ್ರೇಲ್ ದಾಳಿಗೆ 47 ಸಾವಿರ ಮಂದಿ ಪ್ರಾಣ ಕಳೆದುಕೊಂಡಿರುವ ವರದಿ
  • ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಮನೆಯನ್ನು ಕಳೆದುಕೊಂಡಿದ್ದಾರೆ
  • 15 ತಿಂಗಳಿನಿಂದ ನಡೆಯುತ್ತಿದ್ದ ಗಾಜಾ ಯುದ್ಧಕ್ಕೆ ತೆರೆ ಬಿದ್ದಿದೆ

ಕದನ ವಿರಾಮ

  • 100 ಮಂದಿ ಇಸ್ರೇಲಿಗರನ್ನು ಬಿಡುಗೆ ಮಾಡಿರುವ ಪ್ಯಾಲಿಸ್ಟೈನ್
  • ಇಸ್ರೇಲ್​​ ಬೆಂಬಲಿತ 33 ವಿದೇಶಿ ಪ್ರಜೆಗಳೂ ರಿಲೀಸ್ ಆಗಿದ್ದಾರೆ
  • 2000 ಪ್ಯಾಲಿಸ್ಟೈನ್​​ ಪ್ರಜೆಗಳನ್ನು ರಿಲೀಸ್ ಮಾಡಿರುವ ಇಸ್ರೇಲ್
  • 90 ಪ್ಯಾಲಿಸ್ಟೈನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದೆ
  • ಮೂವರು ಒತ್ತೆಯಾಳುಗಳನ್ನ ರಿಲೀಸ್ ಮಾಡಿದ ಹಮಾಸ್
  • ಬಿಡುಗಡೆ ಆಗಿರುವ ಒತ್ತೆಯಾಳುಗಳ ಆರೋಗ್ಯ ಚೆನ್ನಾಗಿದೆ
  • ಕದನ ವಿರಾಮದ ವೇಳೆ 630 ಟ್ರಕ್​ಗಳು ಗಾಜಾ ಪಟ್ಟಿಗೆ ಪ್ರವೇಶ
  • ಟ್ರಕ್​ಗಳು ಮಾನವೀಯ ನೆರವಿಗೆ ಬಂದಿವೆಯೆಂದು ವಿಶ್ವಸಂಸ್ಥೆ ಹೇಳಿದೆ

ಇದನ್ನೂ ಓದಿ: ವಿಶ್ವದ ಕಣ್ಣು ಡೊನಾಲ್ಡ್ ಟ್ರಂಪ್ ಮೇಲೆ.. ಅಧಿಕಾರ ಸ್ವೀಕರಿಸ್ತಿದ್ದಂತೆ ಮೊದಲ ಅಜೆಂಡಾ ಏನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment