ಫಸ್ಟ್‌ನೈಟ್‌ನಲ್ಲೇ ಮಚ್ಚಿನಿಂದ ನವಜೋಡಿಯ ಹೊಡೆದಾಟ!
24 ಗಂಟೆಯಲ್ಲೇ ವಧು-ವರರ ಜೀವನ ಘೋರ ಅಂತ್ಯ!
ಲವ್ ಕಮ್ ಅರೇಂಜ್ಡ್ ಮ್ಯಾರೇಜ್‌ನಲ್ಲಿ ಅಂಥಾದ್ದೇನಾಯ್ತು?
ಕೋಲಾರ: ದುನಿಯಾ ಸೂಪರ್ ಫಾಸ್ಟ್‌ನಲ್ಲಿ ನಡೀತಾ ಇದೆ ಅನ್ನೋದು ಎಲ್ಲರಿಗೊ ಗೊತ್ತು. ಆದ್ರೆ, 10 ಎಕ್ಸ್ ಸ್ಪೀಡ್‌ನಲ್ಲಿ ದುನಿಯಾ ನಡೀತಿದೆ ಅಂದ್ರೆ ನಿಜಕ್ಕೂ ನಂಬೋಕೆ ಆಗ್ತಿಲ್ಲ. ಅಂದ್ರೆ ಯಾವ ರೀತಿ ಸ್ಪೀಡ್ ಅಂದ್ರೆ, ರಪಕ್ ಸಪಕ್ ಚಪಕ್ ಥರಾ. ಅರ್ಥ ಆಗ್ಲಿಲ್ವಾ? ಫಟಾ ಫಟಾ ಅಂತಾ ಮುಗಿಯುತ್ತೆ ಅಂತಾ ಹೇಳ್ತಿವೆಲ್ಲಾ ಅದಕ್ಕೂ ಡಬಲ್ ಸ್ಪೀಡ್. ಯಾಕೆ ಈ ಮಾತು ಹೇಳ್ತಿದ್ದೀವಿ ಅಂದ್ರೆ, ಕೋಲಾರದಲ್ಲಿ ಬೆಳಗ್ಗೆ ಮದ್ವೆಯಾಗಿ, ಫಸ್ಟ್ ನೈಟ್‌ನಲ್ಲಿ ನವಜೋಡಿಯ ಹೊಡೆದಾಡಿಕೊಂಡು ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್‌ನಲ್ಲಿ ಡ್ಯಾಮೇಜ್ ಆಗಿದ್ದೇನು ಅನ್ನೋ ಅತ್ಯಂತ ಕುತೂಹಲಕಾರಿ ವಿಚಾರ ಇಲ್ಲಿದೆ.
ನೀವು ಪುನಿತ್ ರಾಜ್ಕುಮಾರ್ ಅಭಿನಯದ ಮಿಲನ ಸಿನಿಮಾ ನೋಡಿರಬಹುದು ಅದರಲ್ಲಿ ನಾಯಕ ನಾಯಕಿಗೆ ಮದುವೆಯಾಗಿ ಮೊದಲ ರಾತ್ರಿಯಂದೇ ನಾಯಕನಿಂದ ಡಿವೋರ್ಸ್ ಕೇಳುತ್ತಾಳೆ. ಸೇಮ್ ಅದೇ ತರಹದ ಕಥೆಯೊಂದು ಕೋಲಾರದಲ್ಲಿ ನಡೆದಿದೆ ಆದ್ರೆ ಅದು ಕೊಲೆಯಲ್ಲಿ ಅಂತ್ಯವಾಗಿದೆ. ಬೆಳಗ್ಗೆ ಮದ್ವೆಯಾಗಿ, ಅದೇ ದಿನದ ಫಸ್ಟ್‌ನೈಟ್‌ನಲ್ಲಿ ನವಜೋಡಿಯೇ ಮಚ್ಚಿನಲ್ಲಿ ಹೊಡೆದಾಡಿಕೊಂಡು ಅಸುನೀಗಿದ್ದಾರೆ.
ಅವನ ಹೆಸರು ನವೀನ್. ವಯಸ್ಸು 28. ಕೆಜಿಎಫ್ ತಾಲ್ಲೂಕಿನ ಚಂಬರಸನಹಳ್ಳಿ ಗ್ರಾಮದವನು. ನಿಜಕ್ಕೂ ಇವನಿಗೆ ಮದುವೆ ವಯಸ್ಸೇ. ಇವನಿಗೆ ಯಾವುದೇ ಲವ್ ಆಗಿರಲಿಲ್ಲವೇನೋ ಹಾಗಾಗಿಯೇ ಮನೆಯವರೇ ಸೇರಿ, ಹುಡುಗಿ ಹುಡುಕೋಕೆ ಶುರು ಮಾಡಿದರು. ಅಂದಾಜು ನಾಲ್ಕೈದು ತಿಂಗಳ ಹಿಂದೆ ಆಂಧ್ರಪ್ರದೇಶದ ಬೈನಪಲ್ಲಿ ಗ್ರಾಮಕ್ಕೆ ವಧು ನೋಡೆಲೆಂದು ಮನೆಯವರೆಲ್ಲಾ ಹೋಗ್ತಾರೆ. ಆಗಲೇ ಈ ನವೀನ್ ಈ ಹುಡುಗಿಯನ್ನ ಮೀಟ್ ಮಾಡೋದು. ಆಕೆಯ ಹೆಸರು ಲಿಖಿತಾಶ್ರೀ. ವಯಸ್ಸು ಜಸ್ಟ್ 19
ಇದನ್ನೂ ಓದಿ: ಮದ್ವೆಯಾದ ಕೆಲವೇ ಗಂಟೆಯಲ್ಲಿ ರೂಂಗೆ ಹೋಗಿದ್ದ ನವಜೋಡಿ.. ನಿನ್ನೆ ಮದುಮಗಳು, ಇಂದು ಮದುಮಗ ಸಾವು
ನೋಡೋಕೆ ಈಡು ಜೋಡು ಚೆನ್ನಾಗಿಯೇ ಇತ್ತು. ಇವತ್ತಿನ ಕಾಲದಲ್ಲಿ ಹತ್ತು ವರ್ಷ ಗ್ಯಾಪ್ ಅಂದ್ರೆ ಹುಡುಗಿರು ನಾನ್ ಮದ್ವೆಯಾಗೋದೇ ಇಲ್ಲ. ನಾನ್ ಮದ್ವೆಯಾಗದ್ದಿದ್ರೂ ಪರವಾಗಿಲ್ಲ. 10 ವರ್ಷ ಗ್ಯಾಪ್ ಇರೋ ಇವನನ್ನ ಮದ್ವಯಾಗೋಲ್ಲ ಅಂತಾರೆ. ಅದಕ್ಕಿಂತಲೂ ಮುಖ್ಯವಾಗಿ, ಓದೋ ವಯಸ್ಸಿನಲ್ಲಿ ಮೊದಲೇ ಮದ್ವೆಗೇ ಒಪ್ಪೋದಿಲ್ಲ. ಆದ್ರೆ, ಸೆಕೆಂಡ್ ಪಿಯು ಓದ್ತಿದ್ದ, ಲಿಖಿತಾ ಕೇಸ್‌ನಲ್ಲಿ ಎಲ್ಲವೂ ಉಲ್ಟಾ ಆಗಿದೆ. ಬಹುಶಃ ಮನೆಯವರೇ ಒತ್ತಡವೇನೋ.
ವಧುವನ್ನ ನೋಡಲು ಹೋದಾಗ ಕಣ್ ಕಣ್ಣ ಸಲಿಗೆ!
ಅದೇಕೋ ಏನೋ, ನವೀನ್‌ಗೆ ಈ ಹುಡುಗಿ ಸಿಕ್ಕಾಪಟ್ಟ ಇಷ್ಟವಾಗಿ ಬಿಡ್ತಾಳೆ. ಲಿಖಿತಾಗೂ ಆಗಿರಬೇಕೇನೋ. ಆದ್ರೆ, ಇಬ್ಬರು ಮನೆಯವರಿಗೆ ಬಿಲ್‌ಖುಲ್ ಇಷ್ಟವಿರೋದಿಲ್ಲ. ಮುಖ್ಯವಾಗಿ ಹುಡುಗಿ ಮನೆಯವರಿಗೆ ಇಷ್ಟವೇ ಇರೋದಿಲ್ಲ. ಹಾಗಾಗಿ, ಈ ಸಂಬಂಧ ಕೂಡಿ ಬರೋದಿಲ್ಲ. ಹೀಗಾಗಿ ನವೀನ್ ಮತ್ತು ಲಿಖಿತಾಗೆ ಸ್ವಲ್ಪ ಬೇಜಾರಾಗುತ್ತೆ. ದೊಡ್ಡವರೂ ಒಪ್ಪುದ್ರೆ ಮಾತ್ರ ಮದ್ವೆಯಾಗೋ ಕಾಲವಲ್ಲ ಇದು. ಜೋಡಿಗಳು ಒಪ್ಪಿದ್ರೆ ಮಾತ್ರ ಮದ್ವೆ.
ಹೀಗಾಗಿ, ಅದ್ಹೇಗೋ ಏನೋ.. ಇಬ್ಬರ ಫೋನ್ ನಂಬರ್ ಎಕ್ಸ್‌ಚೇಂಜ್ ಆಗಿಬಿಟ್ಟಿದೆ. ಇಬ್ಬರ ನಡುವೆ ಸ್ನೇಹ ಬೆಸೆದು, ಆ ಸ್ನೇಹ ಪ್ರೇಮವಾಗಿಯೂ ಕನ್ವರ್ಟ್ ಆಗಿಬಿಟ್ಟಿದೆ. ಇಬ್ಬರ ನಡುವೆ ಪ್ರೇಮಾಂಕರುವಾಗಿರೋದು ಖಂಡಿತಾ ಸತ್ಯ. ಹಾಗಾಗಿ ಇಬ್ಬರ ಮಧ್ಯೆ ಬಿಟ್ಟಿರಲಾರದಷ್ಟು ಬಂಧ ಗಟ್ಟಿಯಾಗಿದೆ. ಈ ವಿಚಾರ ಮನೆಯವರಿಗೂ ಗೊತ್ತಾಗಿದೆ. ನವೀನ್ ಅಂತೂ ನಾನು ಮದ್ವೆಯಾದರೇ ಈ ಹುಡುಗಿಯನ್ನೇ ಮುದವೆಯಾಗೋದು ಅಂತಾ ಹೇಳಿಬಿಡ್ತಾನೆ. ಹೀಗಾಗಿ ವಿಧಿಯಿಲ್ಲದೇ ಇವನ ಮನೆಯವರು ಮತ್ತು ಹುಡುಗಿ ಮನೆಯವರು ಮಾತುಕತೆ ನಡೆಸಿ, ಹೇಗೋ ಏನೋ ಮದ್ವೆ ಮಾಡಿಬಿಡ್ತಾರೆ.
ಇದನ್ನೂ ಓದಿ: ಹೆಸರು ಹೊಟ್ಟೆ ಮಂಜು.. ಕೇಸ್ಗಳು 40ಕ್ಕೂ ಹೆಚ್ಚು; ಈತನ ಬಂಧಿಸಿದ್ದೇ ಒಂದು ಸಾಹಸ..!
ಇಂಟರೆಸ್ಟಿಂಗ್ ಅಂದ್ರೆ, ಹುಡುಗಿಗೆ ತಾಳಿ ಮತ್ತು ಕಾಲುಂಗರವನ್ನ ಸ್ವತಃ ನವೀನೇ ತರ್ತಾನೆ. ನವೀನ್‌ನ ಸಂಬಂಧಿಕರ ಮನೆಯಲ್ಲಿ ದೇವರ ಫೋಟೋದ ಮುಂದೆ, ತಾಳಿ ಕಟ್ಟಲಾಗಿದೆ. ನವೀನ್ ಸಂಬಂಧಿಕರ ಮನೆಯಲ್ಲಿಯೇ ಎಲ್ಲವೂ ನಡೆದುಬಿಟ್ಟಿದೆ.
ಇದಿಷ್ಟು ಆದ್ಮೇಲೆನೇ ರಿಯಲ್ ಸ್ಟೋರಿ ಶುರುವಾಗೋದು.
ಮದ್ವೆಯಲ್ಲಿ ಎರಡು ಕುಟುಂಬದವರು ಸಾಕ್ಷಿಯಾಗಿದ್ದರು ಅಂತಾ ಹೇಳಲಾಗ್ತಿದೆ. ಆದರೂ ಇದು ಒಮ್ಮತದ ಮದುವೆ ಅನ್ನೋದಕ್ಕೆ ನಿಜಕ್ಕೂ ಸದ್ಯದ ಮಟ್ಟಿಗೆ ಯಾವುದೇ ಸಾಕ್ಷಿಗಳಿಲ್ಲ. ಇದ್ದಿದ್ರೆ, ಇಂತಹದೊಂದು ದುರಂತ ನಡೆಯುತ್ತಿರಲಿಲ್ಲ. ಅಂದ್ಹಾಗೇ, ಬೆಳಗ್ಗೆ ಬೆಳಗ್ಗೆಯೇ ಸಂಬಂಧಿಕರೆಲ್ಲಾ ಸೇರ್ಕೊಂಡು ಮದ್ವೆ ಮಾಡಿಸ್ತಾರೆ. ಆದಾದ ನಂತರ ಇಬ್ಬರನ್ನ ಕರೆದುಕೊಂಡು ಹೋಗಿ, ಊಟ ಉಪಚಾರ ಮಾಡಿಸ್ತಾರೆ. ಸಂಜೆ ಇಬ್ಬರ ಫಸ್ಟ್‌ನೈಟ್‌ಗೆ ಅರೇಂಜ್ ಕೂಡ ಮಾಡ್ತಾರೆ. ಅದು ನವೀನ್‌ನ ಚಿಕ್ಕಮ್ಮನ ಮನೆಯಲ್ಲಿ. ಸಂಜೆ ಟೀಯನ್ನೂ ಕೂಡ ಕುಡಿಯುತ್ತಾರೆ. ಆ ನಂತರ ನವ ಜೋಡಿ ರೂಮಿಗೆ ಸೇರಿಕೊಳ್ತಾರೆ ಅಷ್ಟೇ.
ಇದನ್ನೂ ಓದಿ: ಮುಖಕ್ಕೆ ಆಕ್ಸಿಜನ್.. ನಿಧಿಗಾಗಿ 40 ಮೀಟರ್ ಆಳದ ಗುಹೆ ಇಳಿದ ಕಿಡಿಗೇಡಿಗಳು.. ಮುಂದೇನಾಯ್ತು..?
ಕೆಲವೇ ನಿಮಿಷಗಳಲ್ಲಿ ರೂಮಿನಿಂದ ಕೀರುಚುವ ಸದ್ದು ಕೇಳುತ್ತೆ. ಏನೋ ಆಗಿರಬೇಕು ಅಂತಾ ಸಂಬಂಧಿಕರು ಹೋದಾಗ, ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರೋದು ಗೊತ್ತಾಗುತ್ತೆ. ಕೂಡಲೇ ಇಬ್ಬರನ್ನ ಕೆಜಿಎಫ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡುತ್ತಾರೆ. ಆದ್ರೆ, ತೀವ್ರ ರಕ್ತಸ್ರಾವದಿಂದ ಲಿಖಿತಾಶ್ರೀ ಬುಧವಾರ ಸಂಜೆಯೇ ಸಾವನ್ನಪ್ಪುತ್ತಾಳೆ. ವೈದ್ಯರು ನವೀನ್‌ಗೆ ಚಿಕಿತ್ಸೆ ಮುಂದುವರೆಸುತ್ತಾರೆ. ದುರದೃಷ್ಟವಶಾತ್, ಚಿಕಿತ್ಸೆ ಫಲಕಾರಿಯಾಗದೇ ನವೀನ್ ಇಂದು ಬೆಳಗ್ಗೆ ಮೃತಪಡುತ್ತಾನೆ. ನಿಜಕ್ಕೂ ಇದು ಊಹಿಸಲು ಅಸಾಧ್ಯವಾಗಿರೋ ಘಟನೆ ಅಂದ್ರೆ ಅತಿಶಯೋಕ್ತಿ ಆಗೋದಿಲ್ಲ. ಅಷ್ಟೇಲ್ಲಾ ಒದ್ದಾಡಿಕೊಂಡು ಮದ್ವೆಯಾದವನೂ, ಹೀಗೇ ಸಾವನ್ನಪ್ಪಿದ್ದು ನಿಜಕ್ಕೂ ದುರಂತ. ಆದ್ರೆ, ಕಾರಣವಿಲ್ಲದೇ ಏನೂ ನಡೆಯೋದಿಲ್ಲ. ಇದಕ್ಕೂ ಬಲವಾದ ಕಾರಣಗಳಿವೆ.
ಹುಡುಗನ ಆತುರವೇ ದುರಂತಕ್ಕೆ ಕಾರಣವಾಯ್ತಾ?
ಲಿಖಿತಶ್ರೀ ಮತ್ತು ನವೀನ್ ಒಬ್ಬರನ್ನೊಬ್ಬರು ಇಷ್ಟ ಪಟ್ಟೆ ಮದುವೆಯಾಗಿದ್ರು. ಲಿಖಿತಾಳನ್ನೆ ಹೆಂಡತಿಯಾಗಿ ಪಡೀಬೇಕು ಅಂತ ಒಂದೇ ದಿನದಲ್ಲಿ ನವೀನ್ ಲಿಖಿತಾಗೆ ತಾಳಿ ಕಟ್ಟಿದ್ದ. ಆತುರ ಆತುರದಿಂದಲೇ ಎರಡು ಕುಟುಂಬದ ಸಮ್ಮುಖದಲ್ಲೇ ಈ ಮದುವೆ ನಡೆದು ಹೋಗಿತ್ತು. ಈ ಆತುರವೇ ಇಬ್ಬರ ಸಾವಿಗೆ ಕಾರಣವಾಯ್ತಾ? ಅನ್ನೋದು ಕುಟುಂಬಸ್ಥರ ಆರೋಪ. ಯಾಕಂದ್ರೆ ನವೀನ್ ಲಿಖಿತಾಳನ್ನ ಮದುವೆಯಾಗ್ಬೇಕು ಅಂತ ಏಕಾಏಕಿ ನಿರ್ಧಾರ ಮಾಡಿ ಬುಧವಾರ ಲಿಖಿತಾಳನ್ನ ತಾಳಿ ಕಟ್ಟಿಬಿಟ್ಟಿದ್ದ. ಆದ್ರೆ ಈ ವೇಳೆ ಎರಡು ಕುಟುಂಬವಿದ್ರೂ ಅಲ್ಲಿ ಇಬ್ಬರ ಮಧ್ಯೆ ಕೊಂಚ ಅಸಮಾಧಾನವಿತ್ತು ಅನ್ನೋದು ತಿಳಿದು ಬಂದಿರುವ ಮಾಹಿತಿ. ಯಾಕಂದ್ರೆ ಒಂದು ಮದುವೆ ಬಗ್ಗೆ ಪೋಷಕರು ನೂರಾರು ಕನಸುಗಳನ್ನ ಕಟ್ಕೊಂಡಿರ್ತಾರೆ. ಮಗಳನ್ನ ತುಂಬಾ ಚೆನ್ನಾಗಿ ಗಂಡನ ಮನೆಗೆ ಕಳಿಸಿಕೊಡ್ಬೇಕು ಅಂತ ಆಸೆ ಹೊಂದಿರ್ತಾರೆ. ಆದ್ರೆ ಲಿಖಿತಾಳ ವಿಚಾರದಲ್ಲಿ ಅದು ಆಗಿರಲಿಲ್ಲ. ನವೀನ್ ಮಾಡಿದ್ದ ಆತುರದಿಂದ ಸೂರ್ಯ ಮೂಡುವ ಮೊದಲೇ ಮದುವೆ ನಡೆದು ಹೋಗಿತ್ತು.
ಇದೇ ವಿಚಾರ ನವೀನ್ ಮತ್ತು ಲಿಖಿತಾಳ ನಡುವೆ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.ಬೆಳಗ್ಗೆ ಮದುವೆಯಾಗಿ ಸಂಜೆ 5 ಗಂಟೆಗೆ ಮನೆಗೆ ಬಂದಿದ್ದ ನವೀನ್ ಮತ್ತು ಲಿಖಿತಾ ಚಿಕ್ಕಮ್ಮನ ಮನೆಯಲ್ಲಿ ಟೀ ಕುಡಿದು ರೂಮ್ ಸೇರಿದ್ರು. ಹೊರಗಡೆ ಇದ್ದವರು ನವಜೋಡಿಗಳು ಸ್ವಲ್ಪ ಟೈಮ್ ಕಳೆಯಲಿ ಅಂತ ಅಂದುಕೊಂಡಿದ್ರು. ಆದ್ರೆ ಕೆಲ ನಿಮಿಷಗಳಲ್ಲೇ ಕೋಣೆಯೊಳಗೆ ನೆತ್ತರೋಕಳಿ ಹರಿದು ಹೋಗಿತ್ತು. ಹೋಗಿ ನೋಡಿದ್ರೆ ಇಬ್ಬರ ದೇಹಗಳು ರಕ್ತಸಿಕ್ತವಾಗಿದ್ದವು. ಮಾಹಿತಿ ಪ್ರಕಾರ ಲಿಖಿತಶ್ರೀ ಮತ್ತು ನವೀನ್ ಇಬ್ಬರ ಮಧ್ಯೆ ಮದುವೆಯ ವಿಚಾರಕ್ಕೆ ಮಾತುಕತೆ ನಡೆದಿದೆಯಂತೆ. ಇಷ್ಟೊಂದು ಆತುರ ಆತುರವಾಗಿ ಮದುವೆ ನಡೆದಿರೋದಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆಯಂತೆ. ಬಳಿಕ ಒಬ್ಬರಿಗೊಬ್ಬರು ಮಚ್ಚು ಬೀಸಿಕೊಂಡು ಕೋಣೆಯ ತುಂಬ ರಕ್ತ ಹರಿಸಿದ್ದಾರೆ ಅನ್ನೋದು ಒಂದು ವಾದ.. ಆದ್ರೆ ಈ ಘಟನೆಗೆ ಇದೇ ಕಾರಣ ಅಂತಲೂ ಹೇಳಲೂ ಸಾಧ್ಯವಿಲ್ಲ. ಯಾಕಂದ್ರೆ ಇಬ್ಬರು ಇಷ್ಟ ಪಟ್ಟು ಮದುವೆಯಾಗಿದ್ರೂ.. ಈ ಮದುವೆಗೆ ಕುಟುಂಬಸ್ಥರು ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ್ರು. ಹೀಗಾಗಿ ಬೇರೆ ಯಾರಾದ್ರೂ ಕೊಚ್ಚಿ ಹಾಕಿದ್ರಾ ಅನ್ನೋ ಅನುಮಾನವನ್ನು ಅಲ್ಲಗಳೆಯುವಂತಿಲ್ಲ.
ಹೊರಗಿನವರು ಬಂದು ನವಜೋಡಿಯ ಹತ್ಯೆ ಮಾಡಿದ್ರಾ?
ಮದುವೆಯಾದ ದಿನವೇ ಜಗಳ ಆಡೋದು.. ಅದ್ರಲ್ಲೂ ಮಚ್ಚಿನಿಂದ ಹೊಡೆದಾಡಿಕೊಳ್ಳುವ ಮಟ್ಟಿಗೆ ಅಂದ್ರೆ ಇದು ನಂಬೋ ಮಾತಾ.. ಹಾಗಾಗಿ ಈ ಕೇಸ್‌ನಲ್ಲಿ ಹಿಂಗೆ ಆಗಿದೆ ಅಂತ ಹೇಳೋದಿಕ್ಕೆ ಆಗಲ್ಲ. ಒಬ್ಬರನೊಬ್ಬರು ಇಷ್ಟಪಟ್ಟು ಪ್ರೀತಿ ಮಾಡಿ ಮದುವೆಯಾದ ಜೋಡಿ ಹಿಂಗೆಲ್ಲ ಮಾಡೋಕೆ ಸಾಧ್ಯಾನಾ? ಅನ್ನೋ ಪ್ರಶ್ನೆಯನ್ನ ತಳ್ಳಿ ಹಾಕುವಂತಿಲ್ಲ. ಹುಡುಗ ಹುಡುಗಿ ಇಷ್ಟ ಪಟ್ಟಿದ್ರೂ ಮನೆಯವರು ಮಾತ್ರ ಕಾಟಾಚರಕ್ಕೆ ಅಂತ ಹೂಂ ಅಂದಿದ್ರು.
ಹೀಗಾಗಿ ಹೊರಗಿನವರು ಯಾರಾದ್ರೂ ಬಂದು ಇಬ್ಬರನ್ನ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ರಾ? ಮೂರನೇ ವ್ಯಕ್ತಿ ಬಂದು ಇಬ್ಬರ ಜೀವವನ್ನ ತೆಗೆದ್ನಾ? ಅನ್ನೋ ಹಲವು ಅನುಮಾನಗಳು ಕೂಡ ಈಗ ಪೊಲೀಸರನ್ನ ಕಾಡ್ತಿವೆ. ಹಾಗಾಗಿ ಪೊಲೀಸರು ಎಲ್ಲ ಆಯಾಮಾಗಳಿಂದ ತನಿಖೆ ನಡೆಸ್ತಿದ್ದಾರೆ.ಈ ಘಟನೆ ಮಾತ್ರ ನಿಜಕ್ಕೂ ವಿಲಕ್ಷಣ.. ಮದುವೆಯಾಗಿ ನವ ಜೀವನ ಶುರು ಮಾಡಬೇಕಿದ್ದವರು ಈಗ ಮಸಣ ಸೇರಿದ್ದಾರೆ. ಆದ್ರೆ ಇಲ್ಲಿ ನಡೆದಿದ್ದೇನು ಅನ್ನೋದು ಮಾತ್ರ ನಿಗೂಢವಾಗಿ ಉಳಿದಿದೆ. ಈ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಪೊಲೀಸರ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ