ಬ್ರೆಡ್​, ಬಿಸ್ಕತ್, ಚಿಪ್ಸ್ ಸೇರಿ ಇತರೆ​​ ಪ್ಯಾಕೆಟ್​ಗಳ ಮೇಲೆ ಈ ಕಲರ್​ ಚಿಹ್ನೆ, ಡಾಟ್​ ಇದ್ರೆ ಏನ್ ಅರ್ಥ?

author-image
Bheemappa
Updated On
ಬ್ರೆಡ್​, ಬಿಸ್ಕತ್, ಚಿಪ್ಸ್ ಸೇರಿ ಇತರೆ​​ ಪ್ಯಾಕೆಟ್​ಗಳ ಮೇಲೆ ಈ ಕಲರ್​ ಚಿಹ್ನೆ, ಡಾಟ್​ ಇದ್ರೆ ಏನ್ ಅರ್ಥ?
Advertisment
  • ಸಾಮಾನ್ಯವಾಗಿ ಕೆಂಪು, ಹಸಿರು ಡಾಟ್​ಗಳು ಏನನ್ನು ಸೂಚಿಸುತ್ತವೆ?
  • ಈ ಬಣ್ಣದ ಡಾಟ್​ ಇದ್ದರೇ ತಪ್ಪದೇ ಎಚ್ಚರಿಕೆಯಿಂದ ಆಯ್ಕೆ ಮಾಡಿ
  • ಆಹಾರದಲ್ಲಿ ಮೊಟ್ಟೆ ಬಳಕೆ ಮಾಡಿದ್ರೆ ಯಾವ ಬಣ್ಣದ ಚಿಹ್ನೆ ಇರುತ್ತೆ?

ಚಿಪ್ಸ್​, ಕುರುಕರೇ, ಬನ್, ಬ್ರೆಡ್​, ಬಿಸ್ಕತ್​ ಪ್ಯಾಕೆಟ್​ ಹೀಗೆ ಅಂಗಡಿಯಿಂದ ಯಾವುದಾದರೂ ತಿನಿಸನ್ನು ನಾವು ಖರೀದಿ ಮಾಡಿದಾಗ ಅವುಗಳ ಮೇಲೆ ಕಾಮಾನ್​ ಆಗಿ ಕೆಂಪು ಹಾಗೂ ಹಸಿರು ಬಣ್ಣದ ಡಾಟ್ ಅಥವಾ ಚಿಹ್ನೆಗಳು​ ಇದ್ದೇ ಇರುತ್ತವೆ. ಇದರ ಬಗ್ಗೆ ಹಲವು ಜನರಿಗೆ ತಿಳಿದಿರಬಹುದು. ಈ ಎರಡು ಬಣ್ಣ ಅಲ್ಲದೇ ಇನ್ನು ಕೆಲವು ತಿನಿಸುಗಳ ಪ್ಯಾಕೆಟ್​ ಮೇಲೆ ನೀಲಿ, ಹಳದಿ, ಕಪ್ಪು ಡಾಟ್​ಗಳು ಇರುತ್ತವೆ ಇವುಗಳ ಅರ್ಥ ಏನು?.

ಆರೋಗ್ಯ ಹಾಗೂ ಆಹಾರ ಪದ್ಧತಿಗೆ ಅನುಗುಣವಾಗಿ ಈ ಬಣ್ಣದ ಚಿಹ್ನೆಗಳು ಸಲಹೆ, ಸೂಚನೆಗಳನ್ನು ನೀಡುತ್ತವೆ. ಅಂದರೆ ಆರೋಗ್ಯದ ಸಮಸ್ಯೆ ಇರುವವರು ಇದನ್ನು ತಿನ್ನಬಾರದು ಎಂದು. ಇದರಿಂದ ನೀವು ಸರಿಯಾದ ಆಹಾರ ತಿನಿಸನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. ಇದು ಅಲ್ಲದೇ ಸಸ್ಯಾಹಾರಿ ಹಾಗೂ ಮಾಂಸಹಾರಿ ಸೇವಿಸುವವರು ಇದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಂಪು, ಹಸಿರು ಡಾಟ್ಸ್​ ಸೂಚಿಸುತ್ತವೆ. ಉಳಿದ ಡಾಟ್ಸ್​ ಅಥವಾ ಚಿಹ್ನೆಗಳು ಏನೇನು ಸೂಚಿಸುತ್ತವೆ?.

ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​​.. 70 ವರ್ಷ ಮೇಲ್ಪಟ್ಟ ಎಲ್ಲರಿಗೂ 5 ಲಕ್ಷ ರೂ ಆರೋಗ್ಯ ವಿಮೆ

publive-image

ಕೆಂಪು ಡಾಟ್​: ತಿನಿಸಿನ ಪ್ಯಾಕೆಟ್​ ಮೇಲೆ ಕೆಂಪು ಬಣ್ಣದ ವೃತ್ತಾಕಾರದ ಚಿಹ್ನೆ ಇದ್ದರೆ ಅದು ಮಾಂಸಾಹಾರಿ ಎಂದು ಅರ್ಥ. ಇದರಲ್ಲಿ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸಹಾರಿ ವಸ್ತುವನ್ನು ಉಪಯೋಗ ಮಾಡಿರುತ್ತಾರೆ. ಇಂಥ ಪಾಕೆಟ್​ಗಳಿಂದ ಸಸ್ಯಾಹಾರಿಗಳು ಎಚ್ಚರಿಕೆಯಿಂದ ಇರಬೇಕು.

ಹಸಿರು ಚಿಹ್ನೆ:ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚಿಹ್ನೆ ಇದ್ದರೇ ಅದು ಸಂಪೂರ್ಣವಾಗಿ ಸಸ್ಯಾಹಾರಿ ಎಂದರ್ಥ. ಇದರಲ್ಲಿ ಯಾವುದೇ ಮಾಂಸ ಅಥವಾ ಮೊಟ್ಟೆಗಳನ್ನು ಬಳಕೆ ಮಾಡಿರಲ್ಲ. ಧಾರ್ಮಿಕ ಅಥವಾ ಸಸ್ಯಾಹಾರಿಗಳಿಗೆ ಸೂಕ್ತವಾದ ಆಹಾರವಾಗಿರುತ್ತದೆ.

ನೀಲಿ ಚಿಹ್ನೆ: ಪಾಕೆಟ್ ಮೇಲೆ ನೀಲಿ ಬಣ್ಣದ ಚಿಹ್ನೆ ಕಂಡುಬಂದರೆ ಅದನ್ನು ನಾವು ವೈದ್ಯಕೀಯ ಪ್ರಾಡಕ್ಟ್​ ಎಂದು ತಿಳಿದುಕೊಳ್ಳಬೇಕು. ಇಂಥವುಗಳನ್ನು ಯಾರಾದರೂ ತೆಗೆದುಕೊಳ್ಳಬೇಕು ಎಂದರೆ ಮೊದಲು ವೈದ್ಯರಿಂದ ಸಲಹೆ, ಸೂಚನೆ ತೆಗೆದುಕೊಂಡಿರಬೇಕು. ಇದು ಸಾಮಾನ್ಯ ಆಹಾರವಾಗಿರುವುದಿಲ್ಲ.

publive-image

ಹಳದಿ ಡಾಟ್: ಈ ಆಹಾರದಲ್ಲಿ ಮೊಟ್ಟೆ ಉಪಯೋಗ ಮಾಡಲಾಗಿದೆ ಎಂದು ತಿಳಿಸುತ್ತದೆ. ಕೆಲವು ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಅಂಥವರು ಪಾಕೆಟ್​ ಮೇಲೆ ಹಳದಿ ಬಣ್ಣದ ಚಿಹ್ನೆ ಇದ್ದರೇ ಅದನ್ನು ಖರೀದಿ ಮಾಡದೇ ಇರಬಹುದು. ಏಕೆಂದರೆ ಮೊಟ್ಟೆ ಬಳಸಿ ತಿನಿಸು ಮಾಡಲಾಗಿದೆ ಎಂದುಬು ಇದು ಹೇಳುತ್ತದೆ.

ಕಪ್ಪು ಚಿಹ್ನೆ: ಈ ಪ್ಯಾಕೆಟ್​ನಲ್ಲಿ ಕೆಮಿಕಲ್ಸ್​ (Chemicals) ಬಳಕೆ ಮಾಡಲಾಗಿದೆ ಎಂದು ಹೇಳುತ್ತದೆ. ಪ್ರಾಡಕ್ಟ್​ನಲ್ಲಿ ರಾಸಾಯನಿಕ ಪ್ರಮಾಣವನ್ನು ಅಧಿಕವಾಗಿ ಬಳಕೆ ಮಾಡಲಾಗಿರುತ್ತದೆ. ಏಕೆಂದರೆ ದೀರ್ಘಕಾಲ ಉಳಿಯುವಿಕೆಗಾಗಿ ಆಹಾರವನ್ನ ಸಂಸ್ಕರಣೆ ಮಾಡಲಾಗಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment