ಭಾರತದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಸೇತುವೆ ರೆಡಿ! ರಾಮನವಮಿಯಂದೇ ಸೇತುವೆ ಉದ್ಘಾಟಿಸಲಿರುವ ಮೋದಿ

author-image
Gopal Kulkarni
Updated On
ಭಾರತದ ಮೊದಲ ವರ್ಟಿಕಲ್ ಪಂಬನ್ ರೈಲ್ವೆ ಸೇತುವೆ ರೆಡಿ! ರಾಮನವಮಿಯಂದೇ ಸೇತುವೆ ಉದ್ಘಾಟಿಸಲಿರುವ ಮೋದಿ
Advertisment
  • 535 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆ
  • ಬ್ರಿಡ್ಜ್​ನಲ್ಲಿ ಚಲಿಸುವ ರೈಲಿನ ವೇಗದ ಮಿತಿ ಗಂಟೆಗೆ 75 ಕಿ.ಮೀ
  • ಬ್ರಿಡ್ಜ್‌ಗೆ ತುಕ್ಕು ಹಿಡಿಯದಂತೆ ಡಬಲ್ ಕೋರ್ಟ್ ಪೇಂಟ್ ಬಳಕೆ

ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜಾಗಿದೆ. ರಾಮೇಶ್ವರಂಗೆ ತೆರಳುವ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ರಿಡ್ಜ್‌ ಅನ್ನು ನಿರ್ಮಿಸಲಾಗಿದೆ. ಇಂದು ರಾಮನವಮಿಯಂದೇ ಪ್ರಧಾನಿ ಮೋದಿ ಈ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಅಷ್ಟಕ್ಕೂ ಇದರ ವಿಶೇಷತೆಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತೆ ಅನ್ನೋ ಒಂದು ವರದಿ ಇಲ್ಲಿದೆ.

ಈ ರೀತಿಯ ಬ್ರಿಡ್ಜ್‌ ಅನ್ನ ಭಾರತದಲ್ಲಿ ಹಿಂದೆದೂ ನಿರ್ಮಿಸಿಲ್ಲ. ರಾಮೇಶ್ವರಕ್ಕೆ ಹೋಗಿ ಬರೋ ಅಷ್ಟೂ ಜನ ರಸ್ತೆ ಬ್ರಿಡ್ಜ್‌ ಮೇಲೆ ವಾಹನ ನಿಲ್ಲಿಸಿದ ಪಂಬನ್ ರೈಲ್ವೆ ಸೇತುವೆ ನೋಡಿ. ಸೆಲ್ಫಿ ತೆಗೆದುಕೊಳ್ತಿದ್ರೂ. ಇದೀಗ ಆ ಹಳೇ ಬ್ರಿಡ್ಜ್ ಪಕ್ಕದಲ್ಲೇ ಹೊಸ ಬ್ರಿಡ್ಜ್ ರೆಡಿಯಾಗಿದೆ. ಇವತ್ತು ಲೋಕಾರ್ಪಣೆಗೊಳ್ಳೋದಕ್ಕೆ ರೆಡಿಯಾಗಿದೆ.
ಇವತ್ತು ರಾಮ ನವಮಿ. ವಿಶೇಷ ದಿನವಾದ ಇಂದೇ ತಮಿಳುನಾಡಿನ ಪಂಬನ್‌ನಲ್ಲಿ ನಿರ್ಮಿಸಲಾದ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಂಬನ್ ಮತ್ತು ರಾಮೇಶ್ವರಂ ನಡುವಿನ ದೇಶದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನ ಉದ್ಘಾಟಿಸಲಿದ್ದಾರೆ. ಇದರೊಂದಿಗೆ, ಅವರು ರಸ್ತೆ ಸೇತುವೆಯಿಂದ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು ಸೇತುವೆಯ ಕಾರ್ಯಾಚರಣೆಯನ್ನ ವೀಕ್ಷಿಸಲಿದ್ದಾರೆ.

publive-image

ಇದನ್ನೂ ಓದಿ:140 ಅಲ್ಲ 180 ಕಿ.ಮೀ ಪಾದಯಾತ್ರೆಗೆ ಮುಂದಾದ ಅಂಬಾನಿ ಮಗ; ಅನಂತ್ ಆರೋಗ್ಯದ ಬಗ್ಗೆ ರಿಲಯನ್ಸ್‌ ಹೇಳಿದ್ದೇನು?

ಅಂದಾಗೆ ಈ ಹಳೇ ಪಂಬನ್ ರೈಲು ಸೇತುವೆಯನ್ನ 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದು, ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೇ ಬ್ರಿಡ್ಜ್‌ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ನೂತನ ಬ್ರಿಡ್ಜ್‌ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತೆ. ಇದು ಎಲೆಕ್ಟ್ರಿಕಲ್ ಆಟೋ‌ಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿದೆ.

ಇದನ್ನೂ ಓದಿ:ಅತ್ತೆಗೆ ಹಿಗ್ಗಾಮುಗ್ಗ ಥಳಿಸಿದ ರಾಕ್ಷಸಿ ಸೊಸೆ.. ವಿಡಿಯೋ ವೈರಲ್! ಆಮೇಲೆ ಏನಾಯ್ತು?

ಸುಮಾರು 2.5 ಕಿಲೋ ಮೀಟರ್​ ಉದ್ದದ ದೇಶದ ಮೊದಲ ವರ್ಟಿಕಲ್‌ ಲಿಫ್ಟ್‌ ರೈಲು ಸೇತುವೆ ಇದಾಗಿದ್ದು, ಇದು ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ. ಹಡಗು ಸಂಚಾರ ವೇಳೆ ಮೇಲಕ್ಕೆತ್ತಲ್ಪಟ್ಟು ಮತ್ತೆ ಅದೇ ಸ್ಥಾನಕ್ಕೆ ಮರಳುವ ತಂತ್ರಜ್ಞಾನ ಇದರಲ್ಲಿ ಅಳವಡಿಸಲಾಗಿದೆ. ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಯಾತ್ರಾರ್ಥಿಗಳಿಗೆ ಅನುಕೂಲ ವಾಗಲಿದ್ದು, ಮುಖ್ಯಭೂಮಿಯಿಂದ ರಾಮೇಶ್ವರಂಗೆ 5 ನಿಮಿಷದ ಪ್ರಯಾಣಿಸಬುಹುದಾಗಿದೆ. ಒಟ್ಟು 535 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವರ್ಟಿಕಲ್‌ ಲಿಫ್ಟ್‌ ಸೇತುವೆಯನ್ನ ನಿರ್ಮಾಣ ಮಾಡಲಾಗಿದೆ. ಸೇತುವೆಯಲ್ಲಿ ಚಲಿಸುವ ರೈಲಿನ ವೇಗದ ಮಿತಿ ಗಂಟೆಗೆ 75 ಕಿಲೋ ಮೀಟರ್​ ಇರಲಿದ್ದು, ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನದ ಬಳಕೆ ಮಾಡಲಾಗಿದೆ. ತುಕ್ಕು ಹಿಡಿಯದಂತೆ ತುಕ್ಕು ರಹಿತ ಡಬಲ್ ಕೋರ್ಟ್ ಪೇಯಿಂಟ್ ಬಳಸಲಾಗಿದ್ದು, ಸೇತುವೆಯನ್ನು ಮೇಲೆ ಎತ್ತಲು 120 ಕಿಲೋ ವ್ಯಾಟ್ ವಿದ್ಯುತ್ ಬೇಕಾಗುತ್ತೆ.


">April 5, 2025

ವೇಗವಾಗಿ ಚಲಿಸೋ ರೈಲುಗಳು. ಹೆಚ್ಚಿದ ಜನದಟ್ಟಣೆಯನ್ನೂ ಕೂಡ ನಿರ್ವಹಿಸುವಂತೆ ಈ ಸೇತುವೆಯ ನಿರ್ಮಾಣ ಮಾಡಲಾಗಿದೆ. ಹೊಸ ಪಂಬನ್ ಸೇತುವೆ ಪ್ರಗತಿಯ ಸಂಕೇತವಾಗಿದೆ. ಇಂಜಿನಿಯರ್​ಗಳ ಕೈಚಳಕ ಇಡೀ ಭಾರತ ಹುಬ್ಬೇರಿಸುವಂತೆ ಮಾಡಿದೆ.

Advertisment