Advertisment

ಬರೋಬ್ಬರಿ ₹25 ಕೋಟಿ.. ಕೇರಳದ ಓಣಂ ಬಂಪರ್ ಲಾಟರಿ ಗೆದ್ದ ಕನ್ನಡಿಗ; ಅದೃಷ್ಟಶಾಲಿ ಯಾರು ಗೊತ್ತಾ?

author-image
admin
Updated On
ಬರೋಬ್ಬರಿ ₹25 ಕೋಟಿ.. ಕೇರಳದ ಓಣಂ ಬಂಪರ್ ಲಾಟರಿ ಗೆದ್ದ ಕನ್ನಡಿಗ; ಅದೃಷ್ಟಶಾಲಿ ಯಾರು ಗೊತ್ತಾ?
Advertisment
  • ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿ
  • ಕೇರಳದಲ್ಲಿ ಈ ಬಾರಿ 72 ಲಕ್ಷ ಲಾಟರಿ ಟಿಕೆಟ್‌ಗಳು ಮಾರಾಟ
  • ಒಟ್ಟು 125 ಕೋಟಿ ರೂಪಾಯಿ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ

ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ನಡೆಸುವ ಬಂಪರ್ ಲಾಟರಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. 2024ನೇ ಸಾಲಿನ ಬಂಪರ್ ಲಾಟರಿಯಲ್ಲಿ ಮೊದಲ ಬಹುಮಾನ 25 ಕೋಟಿ ರೂಪಾಯಿ. ಎರಡನೇ ಬಹುಮಾನದಲ್ಲಿ 20 ಜನರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತಿದೆ.

Advertisment

ಕೇರಳದಲ್ಲಿ ಓಣಂ ಲಾಟರಿಯ ಟಿಕೆಟ್‌ ಅನ್ನು 500 ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಒಂದೊಂದು ಲಾಟರಿ ಟಿಕೆಟ್ ಅನ್ನು 500 ರೂಪಾಯಿಗೆ ಖರೀದಿಸಿದ್ದ ಸಾವಿರಾರು ಜನರು ಯಾರು ಗೆಲ್ತಾರೆ. 25 ಕೋಟಿ ರೂಪಾಯಿ ಗೆಲ್ಲೋ ಅದೃಷ್ಟಶಾಲಿ ಯಾರು ಅಂತ ಎದುರು ನೋಡುತ್ತಿದ್ದರು. ಕೊನೆಗೂ ಎಲ್ಲರೂ ಕಾಯುತ್ತಿದ್ದ ಆ ಸಮಯ ಬಂದೇ ಬಿಟ್ಟಿದೆ.

publive-image

ಇಂದು ಮಧ್ಯಾಹ್ನ 2 ಗಂಟೆಗೆ ಕೇರಳದ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಅವರು ಓಣಂ ಲಾಟರಿ ಗೆದ್ದ ನಂಬರ್ ಯಾವುದು ಅನ್ನೋದನ್ನ ಅನೌನ್ಸ್ ಮಾಡಿದರು. 2024ರ ಓಣಂ ಬಂಪರ್ ಲಾಟರಿಯ ಗೆದ್ದಿರುವ ಲಕ್ಕಿ ನಂಬರ್‌ TG 434222. ಈ ಲಾಟರಿ ನಂಬರ್ ಇರುವ ಟಿಕೆಟ್‌ಗೆ 25 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ.

publive-image

50 ಕೋಟಿ ಗೆದ್ದ ಕನ್ನಡಿಗ ಯಾರು?
ಬಂಪರ್ ಲಾಟರಿಯ ಲಕ್ಕಿ ನಂಬರ್‌ TG 434222 ವಯನಾಡಿನ ಏಜೆಂಟ್‌ನದ್ದಾಗಿದೆ. ಎನ್.ಜಿ.ಆರ್ ಲಾಟರಿ ಸಂಸ್ಥೆ ನಾಗರಾಜ್ ಎಂಬುವವರಿಗೆ ಈ ಬಹುಮಾನ ಸಿಕ್ಕಿದೆ ಎಂದು mathrubhumi.com ವರದಿ ಮಾಡಿದೆ. ಇನ್ನೂ ವಿಶೇಷ ಏನಂದ್ರೆ 25 ಕೋಟಿ ರೂಪಾಯಿ ಗೆದ್ದಿರುವ ನಾಗರಾಜ್ ಎಂಬುವವರು ಮೈಸೂರಿನ ಮೂಲದವರು ಅನ್ನೋ ಮಾಹಿತಿ ಸಿಕ್ಕಿದೆ. ನಾಗರಾಜ್ ಅವರು ವಯನಾಡಿನಲ್ಲಿ ತಮ್ಮ ಸಹೋದರನ ಜೊತೆ ಸೇರಿ ಲಾಟರಿ ಏಜೆಂಟ್ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ:3 ವರ್ಷ ಲಾಟರಿ ಟಿಕೆಟ್ ತೆಗೆದುಕೊಳ್ತಿದ್ದವನಿಗೆ 33 ಕೋಟಿ ಜಾಕ್‌ಪಾಟ್‌; ಅದೃಷ್ಟ ಅಂದ್ರೆ ಇದು ಅಲ್ವಾ! 

2024ರ ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ಬರೋಬ್ಬರಿ 80 ಲಕ್ಷ ಟಿಕೆಟ್‌ಗಳನ್ನು ಪ್ರಿಂಟ್ ಮಾಡಲಾಗಿತ್ತು. ಅಕ್ಟೋಬರ್ 8ರ ಸಂಜೆ ವೇಳೆಗೆ ಬರೋಬ್ಬರಿ 72 ಲಕ್ಷ ಟಿಕೆಟ್‌ಗಳು ಮಾರಾಟವಾಗಿತ್ತು. ಮೊದಲ ಬಹುಮಾನ 25 ಕೋಟಿ ರೂಪಾಯಿ. ದ್ವಿತೀಯ ಬಹುಮಾನ 20 ಮಂದಿಗೆ 1 ಕೋಟಿ ರೂಪಾಯಿ. ಹೀಗೆ ಒಟ್ಟು 9 ಹಂತದಲ್ಲಿ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಈ ಬಾರಿ ಒಟ್ಟು 125 ಕೋಟಿ ರೂಪಾಯಿ ಲಕ್ಕಿ ಡ್ರಾ ವಿಜೇತರಿಗೆ ವಿತರಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment