Advertisment

ಕರ್ನಾಟಕದ ಮತ್ತೊಬ್ಬ ಸಾಧಕರಿಗೆ ಒಲಿದು ಬಂದ ಪದ್ಮಶ್ರೀ ಗೌರವ; ಯಾರು ಈ ವಿಜಯಲಕ್ಷ್ಮೀ ದೇಶಮನೆ?

author-image
Gopal Kulkarni
Updated On
ಕರ್ನಾಟಕದ ಮತ್ತೊಬ್ಬ ಸಾಧಕರಿಗೆ ಒಲಿದು ಬಂದ ಪದ್ಮಶ್ರೀ ಗೌರವ; ಯಾರು ಈ ವಿಜಯಲಕ್ಷ್ಮೀ ದೇಶಮನೆ?
Advertisment
  • ಹಿರಿಯ ಆನ್ಕೋಲಾಜಿಸ್ಟ್ ಸರ್ಜನ್ ವಿಜಯಲಕ್ಷ್ಮೀಗೆ ಪದ್ಮಶ್ರೀ ಗೌರವ
  • ನಾಲ್ಕು ದಶಕಗಳಿಂದ ಕ್ಯಾನ್ಸರ್​​ ರೋಗಿಗಳಿಗೆ ಸಹಾಯ ಮಾಡುತ್ತಿರುವ ವೈದ್ಯೆ
  • ಬಡವರಿಗೆ ಮತ್ತು ಹಿಂದುಳಿದ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಮತ್ತು ಕೌನ್ಸಲಿಂಗ್

ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಜೊತೆಗೆ ಉತ್ತರ ಕರ್ನಾಕಟದ ಮತ್ತೊಬ್ಬ ಸಾಧಕರಿಗೆ ಪದ್ಮಶ್ರಿ ಪ್ರಶಸ್ತಿ ಒಲಿದು ಬಂದಿದೆ. ಕಲಬುರಗಿ ಜಿಲ್ಲೆಯ ವಿಜಯಲಕ್ಷ್ಮೀ ದೇಶಮನೆ ಎಂಬುವವರ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಗೌರವವನ್ನು ನೀಡಿದೆ.

Advertisment

ವಿಜಯಲಕ್ಷ್ಮೀ ದೇಶಮನೆ ಒಬ್ಬ ಹಿರಿಯ ಆನ್ಕೋಲಾಜಿಸ್ಟ್ ಸರ್ಜನ್. ಆನ್ಕೊಲಾಜಿ ಎಂಬುದುದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಯನ ಇದು. ಕ್ಯಾನ್ಸರ್ ತಡೆಗಟ್ಟುವಿಕೆ, ಅದಕ್ಕೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಪಟ್ಟಿರುತ್ತದೆ. 70 ವರ್ಷದ ವಿಜಯಲಕ್ಷ್ಮೀ ದೇಶಮನೆ ಅವರು ಕಳೆದ 40 ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಸಹಾಯಕರಾಗಿ ನಿಂತಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್​ಗೆ ಪದ್ಮಶ್ರೀ.. ಇವರಿಗೆ ಗೊಂದಳಿ ಭೀಷ್ಮ ಅಂತ ಕರೆಯುವುದೇಕೆ?

ಮಡಿಗಾ ಸಮುದಾಯದಲ್ಲಿ ಬೆಳೆದ ವಿಜಯಲಕ್ಷ್ಮೀ ದೇಶಮನಿ ಅವರು ಸ್ವಯಂ ಪ್ರತಿಭೆಯಿಂದ ಬೆಳೆದವರು. ಇವರು ಚಿಕ್ಕವರಿದ್ದಾಗ ಇವರ ತಂದೆ ಟೆಕ್ಸ್​ಟೈಲ್ ಮಿಲ್​ನಲ್ಲಿ ಕೆಲಸ ಮಾಡುತ್ತಿದ್ದರು ತಾಯಿ ತರಕಾರಿಯನ್ನು ಮಾರುತ್ತಿದ್ದರು ಈ ವೇಳೆ ತರಕಾರಿ ಮಾರುವುದರಲ್ಲಿ ತಾಯಿಗೆ ವಿಜಯಲಕ್ಷ್ಮೀಯವರು ಸಹಾಯ ಮಾಡುತ್ತಿದ್ದರು.

Advertisment

publive-image

ಇದನ್ನೂ ಓದಿ:ಮೂವರು ಕನ್ನಡಿಗರು ಸೇರಿ 93 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ

ಇವರ ಮುಂದೆ ಅನ್ಕೋಲಾಜಿಸ್ಟ್ ಸರ್ಜನ್ ಆಗಿ ಬೆಳೆದಾಗ ಹಿಂದುಳಿದ ಜನರಿಗೆ ಬಡವರಿಗೆ ಉಚಿತವಾಗಿ ಚಿಕಿತ್ಸೆ ಹಾಗೂ ಉಚಿತವಾಗಿ ಕೌನ್ಸಲಿಂಗ್ ನೀಡುತ್ತಿದ್ದರು. ಇವರು ಬೆಂಗಳೂರಿನ ಕಿದ್ವಾಯಿ ಮೆಮೊರಿಯಲ್ ಆನ್ಕೋಲಾಜಿ ಸಂಸ್ಥೆಯಲ್ಲಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಪ್ರಮುಖವಾಗಿ ಸ್ತನ ಕ್ಯಾನ್ಸರ್ ವಿಚಾರದಲ್ಲಿ ಇವರು ತುಂಬಾ ಪರಿಣಾಮಕಾರಿಯಾದ ಅಧ್ಯಯನ ನಡೆಸಿದ್ದಾರೆ. ಇವರ ಈ ಎಲ್ಲಾ ಸೇವೆ ಹಾಗು ಪ್ರತಿಭೆಗಳನ್ನು ಪರಿಗಣಿಸಿ ಹಾಗೂ ಗೌರವಿಸಿ ಕೇಂದ್ರ ಸರ್ಕಾರ ವಿಜಯಲಕ್ಷ್ಮೀ ದೇಶಮನೆ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment