Advertisment

ಗಂಗಾವತಿಯಲ್ಲಿ ಮಳೆಗೆ ಘೋರ ದುರಂತ; ಮನೆ ಕುಸಿದು ಸ್ಥಳದಲ್ಲೇ ಜೀವಬಿಟ್ಟ ಕಂದಮ್ಮ..

author-image
Ganesh
Updated On
ಗಂಗಾವತಿಯಲ್ಲಿ ಮಳೆಗೆ ಘೋರ ದುರಂತ; ಮನೆ ಕುಸಿದು ಸ್ಥಳದಲ್ಲೇ ಜೀವಬಿಟ್ಟ ಕಂದಮ್ಮ..
Advertisment
  • ಭಾರೀ, ಗಾಳಿ ಮಳೆಯಿಂದಾಗಿ ಕುಸಿದ ಮನೆ
  • ದುರ್ಘಟನೆಯಲ್ಲಿ 6 ಮಂದಿಗೆ ಗಾಯ, ಚಿಕಿತ್ಸೆ
  • ಗಂಗಾವತಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ

ನಿನ್ನೆಯಿಂದ ಸುರಿಯುತ್ತಿರೋ ಭಾರೀ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗು ದುರಂತ ಅಂತ್ಯ ಕಂಡಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

Advertisment

ಮನೆಯಲ್ಲಿದ್ದ ಆರು ಮಂದಿ ಗಾಯಗೊಂಡಿದ್ದು, ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೂವರೆ ವರ್ಷದ ಮಗು ಪ್ರಶಾಂತಿ ಸ್ಥಳದಲ್ಲೇ ಜೀವ ಬಿಟ್ಟಿದೆ. ಮಗುವಿನ ತಾಯು 28 ವರ್ಷದ ಹನುಮಂತಿ, 65 ವರ್ಷದ ದುರಗಮ್ಮ, 19 ವರ್ಷದ ಭೀಮಮ್ಮ, 46 ವರ್ಷದ ಫಕೀರಪ್ಪ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಯು.ನಾಗರಾಜ್ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ರಕ್ತ ಹಣ ಬೇಡ ಎಂದ ಸಂತ್ರಸ್ತ ಕುಟುಂಬ; ನಿಮಿಷಾಳ ಉಳಿಸಿಕೊಳ್ಳಲು ಎಷ್ಟು ಕೋಟಿ ನೀಡಲು ಸಿದ್ಧವಿದೆ..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment