/newsfirstlive-kannada/media/post_attachments/wp-content/uploads/2025/01/KARWAR-COW-CASE.jpg)
ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವಿನ ಹಸುವಿನ ಕಾಲು, ತಲೆ ಕಡಿದು ಮಾಂಸ ಕದ್ದೋಯ್ದು ವಿಕೃತಿ ಮೇರದಿದ್ದ ಕಿಡಗೇಡಿ ಕಾಲಿಗೆ ಗುಂಡೇಟು ಬಿದ್ದಿದೆ.. ಮಾಂಸ ಮಾರಟಕ್ಕಾಗಿಯೇ ಗೋ ಹತ್ಯೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.. ಆದ್ರೆ ಇದ್ರ ಹಿಂದೆ ದೊಡ್ಡ ಜಾಲವಿದೆ ಅಂತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ..
ಗೋವು ಕೇವಲ ಸಾಕು ಪ್ರಾಣಿಯಲ್ಲ, ದೇವರ ರೂಪ. ಹಸುವಿನಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಅನ್ನೋ ನಂಬಿಕೆ ಇದೆ.. ಜಾತಿಭೇದವಿಲ್ಲದೇ ಎಲ್ಲರಿಗೂ ಹಾಲುಣಿಸುವ ಕಾಮಧೇನು. ಆದ್ರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪಾಪಿಗಳು ಎಸಗಿದ್ದ ರಾಕ್ಷಸಿ ಕೃತ್ಯಕ್ಕೆ ಇದೀಗ ತಕ್ಕ ಶಾಸ್ತಿ ಆಗಿದೆ
ಹೊನ್ನಾವರ ಗೋಹತ್ಯೆ ಆರೋಪಿ ಕಾಲಿಗೆ ಫೈರಿಂಗ್​
ಬೆಂಗಳೂರಿನ ಚಾಮರಾಜಪೇಟೆ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಬೆನ್ನಲ್ಲೇ ಹೊನ್ನಾವರದ ಕೊಂಡಕುಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವಿನ ಕಾಲು, ತಲೆ ಕಡಿದು ಮಾಂಸ ಕದ್ದೊಯ್ದು ವಿಕೃತಿ ಮೆರೆದಿದ್ದರು. ಇದು ರಾಜ್ಯಾದ್ಯಂತ ಆಕ್ರೋಶಕ್ಕೂ ಕಾರಣವಾಗಿತ್ತು.. ಹೀಗಾಗಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸ್ರು. ಮೊದಲು ತೌಫೀಕ್ ಎಂಬಾತನನ್ನ ಪೊಲೀಸರು ಬಂಧಿಸಿದ್ರು. ನಿನ್ನೆ ಮೊತ್ತೋರ್ವ ಆರೋಪಿ ಫೈಝಲ್ ಬಂಧನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆತ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ:ಹಿರಿಯ ನಟ ಅನಂತ್​ನಾಗ್​ಗೆ ಪದ್ಮಭೂಷಣ; ಕರ್ನಾಟಕದ 9 ಸಾಧಕರಿಗೆ ಅತ್ಯುನ್ನತ ಗೌರವ
ಹೊನ್ನಾವರ ಪಿಎಸ್ಐ ಆರೋಪಿ ಫೈಜಲ್​ಗೆ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಇದನ್ನು ಲೆಕ್ಕಿಸದೇ ಫೈಝಲ್​ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಮಾಡಿ ಅರೆಸ್ಟ್​ ಮಾಡಿದ್ದಾರೆ.
ಮಾಂಸ ಮಾರಾಟಕ್ಕಾಗಿ ಗೋ ಹತ್ಯೆ ಮಾಡಿದ್ದ ಆರೋಪಿಗಳು.
ಇದನ್ನೂ ಓದಿ: ಗೊಂಬೆಯಾಟದ ಭೀಮವ್ವಗೆ ಪದ್ಮಶ್ರೀ.. ಗ್ರಾಮೀಣ ಭಾರತದ ರಿಯಲ್ ಸೂಪರ್​ ಸ್ಟಾರ್ಸ್ ಇವ್ರು! ಹೇಗೆ ಗೊತ್ತಾ?
ಇನ್ನು, ಪೊಲೀಸರ ಗುಂಡೇಟು ತಿಂದು ಗಾಯಗೊಂಡ ಆರೋಪಿಯನ್ನ ಪೊಲೀಸರ ಭದ್ರತೆಯಲ್ಲಿ ಕಾರವಾರ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗ್ತಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕ್ಕೊಂಡಿದ್ದು, ಮಾಂಸ ಮಾರಾಟಕ್ಕಾಗಿಯೇ ಗೋ ಹತ್ಯೆ ಮಾಡಿದ್ದು ಅಂತ ನಿಜ ಒಪ್ಪಿಕೊಂಡಿದ್ದಾರೆ.
ಗರ್ಭ ಧರಿಸಿದ್ದ ಹಸುವನ್ನು ಕಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗು ಒಟ್ಟು ಐದು ಆರೋಪಿಗಳನ್ನ ಬಂಧಿಸಲಾಗಿದೆ.. ಇದ್ರ ಹಿಂದೆ ದೊಡ್ಡ ಜಾಲವಿದೆ ಅಂತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಂಥ ನೀಚ ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us