newsfirstkannada.com

VIDEO: ಕೈಯಲ್ಲಿ ಲಾಂಗ್​​ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ; ಬಾಲಕ ಸಾವು, 13 ಮಂದಿಗೆ ಗಾಯ

Share :

Published April 30, 2024 at 8:54pm

    ನೋಡ ನೋಡುತ್ತಿದ್ದಂತೆ 36 ವರ್ಷದ ವ್ಯಕ್ತಿಯನ್ನು ಬಂಧಿಸಿದ ಪೊಲೀಸ್​

    ಎದುರು ಬರುತ್ತಿದ್ದ ಸಾರ್ವಜನಿಕರ ಮೇಲೆ ವ್ಯಕ್ತಿ ಮನಬಂದಂತೆ ಹಲ್ಲೆ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ವ್ಯಕ್ತಿಯ ಹಲ್ಲೆ ವಿಡಿಯೋ

ಲಂಡನ್: ವ್ಯಕ್ತಿಯೊಬ್ಬ ಕೈಯಲ್ಲಿ ಲಾಂಗ್​ ಹಿಡಿದುಕೊಂಡು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿರೋ ಘಟನೆ ಲಂಡನ್‌ನ ಹೈನಾಲ್ಟ್‌ನಲ್ಲಿ ನಡೆದಿದೆ. ಪರಿಣಾಮ 13 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಮತ್ತು ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ..?

ವ್ಯಕ್ತಿಯೊಬ್ಬ ಜನನಿಬಿಡ ರಸ್ತೆಗಳಲ್ಲಿ ಎದುರಿಗೆ ಬಂದ ಎಲ್ಲರ ಮೇಲೂ ಮನ ಬಂದಂತೆ ಕತ್ತಿ ಬೀಸುತ್ತಿದ್ದನಂತೆ. ಸಿಕ್ಕ ಸಿಕ್ಕವರ ಮೇಲೆ ಏಕಾಏಕಿ ಹಲ್ಲೆ ಮಾಡುತ್ತಿದ್ದನಂತೆ. ಪೊಲೀಸರ ಮೇಲೂ ಈ ವ್ಯಕ್ತಿ ಹಲ್ಲೆ ಮಾಡಿದ್ದಾನಂತೆ. ಪರಿಣಾಮ ಇಬ್ಬರು ಪೊಲೀಸರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಲಂಡನ್ ಮೆಟ್ರೋ ಪಾಲಿಟನ್ 36 ವರ್ಷದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಲಾಂಗ್​ ಹಿಡಿದುಕೊಂಡು ಹಲ್ಲೆ ಮಾಡುತ್ತಿರೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ನಾಯಿ ಡೆಡ್ಲಿ ಅಟ್ಯಾಕ್‌; ಭಯಾನಕ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಇನ್ನು, ಈ ಘಟನೆ ಬಗ್ಗೆ ಮಾಹಿತಿ ನೀಡಿದ ಲಂಡನ್‌ನ ಮೇಯರ್ ಸಾದಿಕ್ ಖಾನ್, ನಾನು ಕಮಿಷನರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಆ ಪ್ರದೇಶವನ್ನು ಭದ್ರಪಡಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬೇರೆ ಯಾರನ್ನೂ ಹುಡುಕುತ್ತಿಲ್ಲ. ಪ್ರದೇಶದಲ್ಲಿ ಹೆಚ್ಚುವರಿ ಭರವಸೆ ಗಸ್ತು ಇರುತ್ತದೆ. ಪೊಲೀಸ್ ಅಧಿಕಾರಿಗಳು ಮತ್ತು ತುರ್ತು ಸೇವೆಗಳು ನಮ್ಮ ನಗರದ ಅತ್ಯುತ್ತಮತೆಯನ್ನು ತೋರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕೈಯಲ್ಲಿ ಲಾಂಗ್​​ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ; ಬಾಲಕ ಸಾವು, 13 ಮಂದಿಗೆ ಗಾಯ

https://newsfirstlive.com/wp-content/uploads/2024/04/london-1.jpg

Load More