/newsfirstlive-kannada/media/post_attachments/wp-content/uploads/2024/10/BNG-BUILDING.jpg)
ಬಾಬುಸಾಪಾಳ್ಯದಲ್ಲಿ ಭೀಕರ ಮಳೆಗೆ ಆರು ಅಂತಸ್ತಿನ ಕಟ್ಟಡ ನೆಲಸಮಗೊಂಡು 8 ಜನರ ಜೀವ ತೆಗೆದಿರುವ ಘಟನೆ ಇಡೀ ಬೆಂಗಳೂರನ್ನು ಆತಂಕಕ್ಕೆ ದೂಡಿದೆ. ಆ ಶಾಕ್​ನಿಂದಾಗಿ ಇನ್ನೂ ಕೂಡ ಬೆಂಗಳೂರಿನ ಜನರು ಆಚೆ ಬಂದಿದಲ್ಲ. ಅದರ ಬೆನ್ನಲ್ಲೇ ಈಗ ಹೊರಮಾವು ನಂಜಪ್ಪ ಗಾರ್ಡನ್​ನಲ್ಲಿರುವ 6 ಅಂತಸ್ತಿನ ನಿರ್ಮಾಣ ಹಂತದಲ್ಲಿರುವ ಕಟ್ಟಡ ವಾಲಿಕೊಂಡಿದೆ. ಕಟ್ಟಡ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗರೇ.. ಇಂದೂ ಮಳೆ ಬರುತ್ತೆ ಎಚ್ಚರ! ಬೇಗ ಬೇಗ ಗೂಡು ಸೇರಿಕೊಳ್ಳಿ
ಪುಟ್ಟಪ್ಪ ಎಂಬುವವರ ಮಾಲೀಕತ್ವದಲ್ಲಿ ಇರುವ ಈ ಕಟ್ಟಡ 12*30 ಜಾಗದಲ್ಲಿ ನಿರ್ಮಾಣಗೊಂಡಿದೆ. ಸ್ಥಳಕ್ಕೆ ಈಗಾಗಲೇ ಬಾಣಸವಾಡಿ ಎಸಿಪಿ ಉಮಾಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟಡ ತೆರವಿಗೂ ಕೂಡ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ಎಲ್ಲ ದಿಕ್ಕುಗಳಲ್ಲೂ ಧಾರಾಕಾರ ಮಳೆ; ರಾಜ್ಯದ ಜಿಲ್ಲೆಗಳಲ್ಲೂ ನಿರಂತರ ವರುಣಾರ್ಭಟ, ಎಲ್ಲೆಲ್ಲಿ ಏನಾಗಿದೆ?
ಕಟ್ಟಡದ ಮಾಲೀಕರಾದ ಪುಟ್ಟಪ್ಪ ಅವರಿಗೆ ಇದು ಪಿತ್ರಾರ್ಜಿತ ಆಸ್ತಿಯಾಗಿದ್ದು. ಐದಾರು ದಿನಗಳಿಂದ ಮಳೆ ಬಂದ ಕಾರಣ ಕಟ್ಟಡ ಬಿರಕು ಬಿಟ್ಟು ಒಂದು ಕಡೆ ವಾಲಿಕೊಂಡಿದೆ. ಮೂರು ದಿನಗಳ ಹಿಂದೆಯೇ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ. ಸದ್ಯ ಬಿಬಿಎಂಪಿ ನೋಟಿಸ್​ಗೆ ಉತ್ತರಿಸಿರುವ ಪುಟ್ಟಪ್ಪ ಅವರು, ಪಾಲಿಕೆ ಸೂಚನೆಯಂತೆಯೇ ಕಟ್ಟಡವನ್ನು ನಮ್ಮ ಸ್ವಂತ ಖರ್ಚಿನಲ್ಲಿಯೇ ತೆರವು ಮಾಡಿ ಕೊಡುತ್ತೇವೆ ಎಂದು ಸ್ಥಳೀಯ ರಮೇಶ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us