/newsfirstlive-kannada/media/post_attachments/wp-content/uploads/2025/01/HMPV-1.jpg)
ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಹೆಚ್​ಎಂಪಿವಿ ವೈರಸ್ ಈಗ ಭಾರತದಲ್ಲಿಯೂ ಸಣ್ಣಗೆ ನಡುಕ ಹುಟ್ಟಿಸುತ್ತಿದೆ. ಈಗಾಗಲೇ ಕರ್ನಾಟಕ ಹಾಗೂ ಗುಜರಾತ್​ನಲ್ಲಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಈಗ ತಮಿಳುನಾಡಿನಲ್ಲಿ ಎರಡು ಹೆಚ್​ಎಂಪಿವಿ ವೈರಸ್​ ಕೇಸ್ ಪತ್ತೆಯಾಗಿದ್ದು. ವೈರಸ್ ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಜೊತೆಗೆ ಕೊಲ್ಕತ್ತಾದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ತಮಿಳುನಾಡು ಆರೋಗ್ಯ ಇಲಾಖೆ ಈಗ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು. ರಾಜ್ಯದಲ್ಲಿ ಒಟ್ಟು ಎರಡು ಕೇಸ್ ಪತ್ತೆಯಾಗಿವೆ. ಇಬ್ಬರ ಆರೋಗ್ಯವೂ ಕೂಡ ಸ್ಥಿರವಾಗಿದ್ದು. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದೆ. ಚೆನ್ನೈ ಹಾಗೂ ಸೇಲಂನಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಮತ್ತೊಂದು ವಂಚನೆ ಕೇಸ್.. ಐಶ್ವರ್ಯಾ ಗೌಡ ಬಂಧನದ ಬೆನ್ನಲ್ಲೇ ಬಿಡುಗಡೆ; ಏನಿದು ಹೊಸ ಟಿಸ್ಟ್?
ಇಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದಿದೆ. ಹೆಚ್​​ಎಂಪಿವಿ ಬಗ್ಗೆ ಭಯ, ಗಾಬರಿಯ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ತಮಿಳುನಾಡಿನ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us