/newsfirstlive-kannada/media/post_attachments/wp-content/uploads/2025/03/ONE-DAY-CAPITAL-3.jpg)
ಭಾರತ ಇತಿಹಾಸವೆಂದರೆ ಅದು ಹಲವು ಸಿಕ್ಕುಗಳನ್ನು ಬಿಡಿಸಿಕೊಂಡ ಮೇಲೆ ಶುಭ್ರವಾಗಿ ತೆರೆದುಕೊಳ್ಳುವ ಕೇಶರಾಶಿಯಂತೆ. ಇದರ ಇತಿಹಾಸದ ಓದು ಎಂದರೇನೆ ಹಲವು ಸಿಕ್ಕುಗಳನ್ನು ಬಿಡಿಸುವ ಯತ್ನದ್ದು. ಇಲ್ಲಿ ಆಳಿದ ರಾಜರು, ಸಾಮ್ರಾಜ್ಯಗಳು, ಹರಿದ ರಕ್ತ, ನಡೆದ ಹೋರಾಟ ಬಹುಶಃ ಯಾವರ ದೇಶದ ನೆಲದಲ್ಲಿಯೂ ಕೂಡ ನಡೆದಿರಲಿಕ್ಕಿಲ್ಲ. ಈ ದೇಶ ಹಲವು ಶೌರ್ಯ ಪರಾಕ್ರಮಗಳಿಗೆ ಸಾಕ್ಷಿಯಾಗಿದೆ. ಅದೇ ರೀತಿ ಗುಲಾಮಿತನಕ್ಕೂ ಕೂಡ ಸಾಕ್ಷಿಯಾಗಿದೆ. ಅಷ್ಟೇ ಕೆಲವು ಆಶ್ಚರ್ಯಕ ಇತಿಹಾಸಕ್ಕೂ ಕೂಡ ಸಾಕ್ಷಿಯಾಗಿದೆ. ಅಂತಹ ಆಶ್ಚರ್ಯಕರ ಇತಿಹಾಸಕ್ಕೆ ಸಾಕ್ಷಿಯಾಗಿದ್ದು ಭಾರತದ ಈ ನಗರ. ಈ ಒಂದು ನಗರ ಒಂದು ಕಾಲದಲ್ಲಿ ಭಾರತದ ಒಂದೇ ದಿನದ ರಾಜಧಾನಿಯಾಗಿ ಗುರುತಿಸಿಕೊಂಡಿತ್ತು.
ಭಾರತಕ್ಕೆ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ದೊರಕಿತು. ಅಂದಿನಿಂದ ಇಂದಿನವರೆಗೂ ನಮ್ಮ ದೇಶದ ರಾಜಧಾನಿಯಾಗಿ ದೆಹಲಿ ಗುರುತಿಸಿಕೊಂಡಿದೆ. ಈ ಮೊದಲು ಅಂದ್ರೆ 1911ಕ್ಕೂ ಮೊದಲು ಬ್ರಿಟಿಷ್ ಆಡಳತವಿದ್ದಾಗ ಕೊಲ್ಕತ್ತಾ ಭಾರತದ ರಾಜಧಾನಿಯಾಗಿ ಗುರುತಿಸಿಕೊಂಡಿತ್ತು. 1911ರ ನಂತರ ಬ್ರಿಟಿಷರು ದೆಹಲಿಯನ್ನು ಭಾರತದ ರಾಜಧಾನಿಯನ್ನಾಗಿ ಘೋಷಿಸಿದರು. ಈ ಹಿಂದೆ ಮೊಘಲರು ಭಾರತದಲ್ಲಿ ನಮ್ಮ ಸಾಮ್ರಾಜ್ಯ ಸ್ಥಾಪನೆಯಾಯಿತು ಎಂದು ಘೋಷಿಸಿಕೊಳ್ಳಲು ದೆಹಲಿ ಗದ್ದುಗೆ ಏರುವ ಅರ್ಹತೆ ಪಡೆಯಬೇಕಿತ್ತು. ದೆಹಲಿ ಮಹಾಭಾರತ ಕಾಲದಿಂದಲೂ ಕೂಡ ಈ ದೇಶದ ಪ್ರಮುಖ ನಗರವಾಗಿಯೇ ಗುರುತಿಸಿಕೊಂಡು ಬಂದಿದೆ. ಅಂದಿನಿಂದಲೂ ಇಂದಿನವರೆಗೂ ದೆಹಲಿ ಗದ್ದುಗೆಗಾಗಿಯೇ ಯುದ್ಧಗಳು ನಡೆದುಕೊಂಡು ಬಂದಿವೆ. ಒಂದು ಕಾಲದಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಯುದ್ಧಗಳು ನಡೆಯುತ್ತಿದ್ದರೆ. ಈಗ ಮತವನ್ನು ಪಡೆದು ಅಧಿಕಾರದ ಗದ್ದುಗೆ ಏರುವ ಯುದ್ಧಗಳು ನಡೆಯುತ್ತಿವೆ.
ಹೀಗಾಗಿ ದೆಹಲಿ ಭಾರತದ ಅಧಿಕಾರದ ಯುದ್ಧ ಕೇಂದ್ರ. ಸ್ವಾತಂತ್ರ್ಯ ಬಂದ ಬಳಿಕವೂ ಇಂದಿಗೂ ನಮ್ಮ ಹೆಮ್ಮೆಯ ರಾಷ್ಟ್ರ ರಾಜಧಾನಿಯಾಗಿ ದೆಹಲಿ ನಿಂತುಕೊಂಡಿದೆ. ಆದ್ರೆ ಭಾರತದ ಒಂದು ನಗರ ಕೇವಲ ಒಂದು ದಿನಕ್ಕಾಗಿ ಭಾರತದ ರಾಜಧಾನಿ ಎಂದು ಗುರುತಿಸಿಕೊಂಡಿತ್ತು. ಅದು ಕೂಡ ಬ್ರಿಟಿಷ್ ಆಡಳಿತದ ಕಾಲದಲ್ಲಿ. ಆ ನಗರದ ಹೆಸರು ಶಿಮ್ಲಾ .
ಶಿಮ್ಲಾ ಬ್ರಿಟಿಷರ ಕಾಲದಲ್ಲಿ ಬೇಸಿಗೆಯ ರಾಜಧಾನಿ ಎಂದು ಕರೆಸಿಕೊಳ್ಳುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಒಂದು ಬಾರಿ ವಿಪರೀತ ಬಿಸಿಲು ಉಂಟಾದ ಕಾರಣ ಅದರಿಂದ ಬಚಾವಾಗಲು ಅವರು ತಮ್ಮ ರಾಜಧಾನಿಯನ್ನು ಶಿಮ್ಲಾಗೆ ಶಿಫ್ಟ್ ಮಾಡಿದ್ದರು. ಬೇಸಿಗೆ ಕಾಲದಲ್ಲಿ ಬ್ರಿಟಿಷರ ಸಂಪೂರ್ಣ ಆಡಳಿತ ವ್ಯವಸ್ಥೆ ದೆಹಲಿಯಿಂದ ಶಿಮ್ಲಾಗೆ ಶಿಪ್ಟ್ ಆಗುತ್ತಿತ್ತು. ಕಾರಣ ಅದನ್ನು ಆಗ ಭಾರತದ ಬೇಸಿಗೆ ರಾಜಧಾನಿ ಎಂದು ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನವೂ ಕೂಡ ಅಂದು ಶಿಮ್ಲಾವೇ ರಾಜಧಾನಿಯಾಗಿತ್ತು. ಅದರ ಮುಂದಿನ ದಿನದಿಂದ ದೆಹಲಿ ರಾಜಧಾನಿಯಾಗಿತ್ತು. ಸ್ವತಂತ್ರ ಭಾರತದ ಒಂದು ದಿನದ ರಾಜಧಾನಿಯಾಗಿ ಶಿಮ್ಲಾ ಗುರುತಿಸಿಕೊಂಡಿದೆ.
ಬ್ರಿಟಿಷರ ಈ ವ್ಯವಸ್ಥೆಯಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಅಂದ್ರೆ ಆಗಸ್ಟ್ 15 1947ರಂದು ಭಾರತದ ರಾಜಧಾನಿ ದೆಹಲಿಯಾಗಿರಲಿಲ್ಲ. ಅಸಲಿಗೆ ಶಿಮ್ಲಾ ಆಗಿತ್ತು ಎಂದು ಹೇಳಲಾಗುತ್ತದೆ. ಶಿಮ್ಲಾ ಬ್ರಿಟಿಷರ ಕಾಲದಲ್ಲಿ ಬೇಸಿಗೆಯ ರಾಜಧಾನಿಯಾಗಿ ಗುರುತಿಸಿಕೊಂಡಿತ್ತು . ದೇಶದ ಮೊದಲ ಪ್ರಧಾನಮಂತ್ರಿ ಜವಾಹಾರಲಾಲ ನೆಹರು ಸ್ವಾತಂತ್ರ್ಯ ಬಂದ ದಿನ ದೆಹಲಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಂಭ್ರಮಿಸಿದಾದರೂ ಆ ದಿನ ಶಿಮ್ಲಾ ಭಾರತದ ರಾಜಧಾನಿಯಾಗಿತ್ತು.
ಸದ್ಯ ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿಯಾಗಿರುವ ಶಿಮ್ಲಾ. ಭಾರತದ ಅತ್ಯಂತ ಸುಂದರ ನಗರಗಳಲ್ಲಿ ಒಂದು. ದೇಶದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿಯೂ ಒಂದು. ಶಿಮ್ಲಾಗೆ ರಾಮಾಯಣದ ನಂಟಿದೆ. ಉತ್ತರಾಖಂಡ್ನಲ್ಲಿರುವ ದ್ರೋಣಗಿರಿ ಬೆಟ್ಟದಿಂದ ಸಂಜೀವಿನಿಯನ್ನು ತೆಗೆದುಕೊಂಡು ಹೋಗುವಾಗ ಆಂಜನೇಯ ಶಿಮ್ಲಾದಲ್ಲಿ ತನ್ನ ಹೆಜ್ಜೆ ಇಟ್ಟಿದ್ದ ಎಂದು ಹೇಳಲಾಗುತ್ತದೆ. ಹನುಮಂತ ತನ್ನ ಹೆಜ್ಜೆಯನ್ನಿಟ್ಟು ಇಲ್ಲಿಂದ ಎರಡನೇ ಬಾರಿ ಆಗಸಕ್ಕೆ ಹಾರಿದ್ದರಿಂದ ಶಿಮ್ಲಾದ ಅನೇಕ ಕಡೆ ಕಣಿವೆಗಳು ಸೃಷ್ಟಿಯಾಗಿವೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ