newsfirstkannada.com

ರಾಹುಲ್ ದ್ರಾವಿಡ್​​ಗೆ ಬಿಗ್ ಶಾಕ್ ಕೊಟ್ಟಿದ್ದ ಆ ಲೇಡಿ.. ಅವತ್ತು ಸಂಜೆ ಏನಾಯ್ತು ಅಂದರೆ..

Share :

Published February 9, 2024 at 2:16pm

    ಮನೆ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಳಂತೆ

    ದೀರ್ಘ ಪ್ರವಾಸದಲ್ಲಿದ್ದ ರಾಹುಲ್ ದ್ರಾವಿಡ್​ಗೆ ಸರ್ಪ್ರೈಸ್

    ನನ್ನ ಪೋಷಕರಿಗೆ ಎಚ್ಚರಿಕೆ ಆಗಿತ್ತು ಎಂದಿದ್ದೇಕೆ ದ್ರಾವಿಡ್

ರಾಹುಲ್​ ದ್ರಾವಿಡ್​​. ಆಟದಿಂದಲೇ ಅಲ್ಲ. ವ್ಯಕ್ತಿತ್ವದಿಂದಲೂ ಅಭಿಮಾನಿಗಳ ಹೃದಯ ಗೆದ್ದ ಕ್ರಿಕೆಟರ್. ಇಂತಹ ಮಿಸ್ಟರ್ ಡಿಪೆಂಡಬಲ್​​ಗೆ ಲೇಡಿ ಫ್ಯಾನ್, ಮನೆಗೆ ಆಗಮಿಸಿ ಶಾಕ್ ನೀಡಿದ್ದರು.

ರಾಹುಲ್ ದ್ರಾವಿಡ್. ಅಭಿಮಾನಿಗಳ ನೆಚ್ಚಿನ ವಾಲ್, ಮಿಸ್ಟರ್ ಡಿಪೆಂಡೆಬಲ್. ನಡೆ, ನುಡಿ, ವ್ಯಕ್ತಿತ್ವದಿಂದ ಅಸಂಖ್ಯಾತ ಅಭಿಮಾನಿಗಳನ್ನೇ ಸಂಪಾದಿಸಿದ್ದಾರೆ. ಅತಿ ಹೆಚ್ಚು ಲೇಡಿ ಫ್ಯಾನ್ಸ್​ ಹೊಂದಿರುವವರ ಪೈಕಿ ರಾಹುಲ್ ದ್ರಾವಿಡ್ ಕೂಡ ಒಬ್ಬರು. ರಾಹುಲ್​​ ದ್ರಾವಿಡ್​ರ ಹ್ಯಾಂಡ್ಸಮ್​ ಲುಕ್​ಗೆ ಹಲವರು ಬೋಲ್ಡ್​ ಆಗಿ, ಪ್ರಪೋಸ್​ ಮಾಡಿದ ಎಕ್ಸಾಂಪಲ್ಸ್​​ ಇವೆ. ಲೇಡಿ ಫ್ಯಾನ್ಸ್ ಹೊಂದಿದ್ದ ರಾಹುಲ್​​ ದ್ರಾವಿಡ್​​ಗೆ, ಹೈದರಾಬಾದ್ ಮೂಲದ ಮಹಿಳಾ ಅಭಿಮಾನಿಯೊಬ್ಬರು ಶಾಕ್ ನೀಡಿದ್ದರು. ಇಂಟ್ರೆಸ್ಟಿಂಗ್ ಅಂದ್ರೆ ಮನೆ ಬಿಟ್ಟು ಬಂದಿದ್ದ ಆಕೆ, ದ್ರಾವಿಡ್​ ಮನೆಯಲ್ಲೇ ಉಳಿದುಕೊಳ್ಳಲು ಮುಂದಾಗಿದ್ದಳು.

ನಾನು ದೀರ್ಘ ಪ್ರವಾಸದಿಂದ ಮರಳಿದ್ದೆ. ಪ್ರವಾಸದ ಬಳಿಕ ಮನೆಯಲ್ಲಿ ಮಲಗಿದ್ದೆ. ನನ್ನ ತಾಯಿ ಸಂಜೆ ಹೇಳಿದ್ರು. ನಿನ್ನ ಅಭಿಮಾನಿ ನಿನಗಾಗಿ ವೇಯ್ಟ್​ ಮಾಡ್ತಿದ್ದಾರೆ. ಆಕೆ ಹೈದ್ರಾಬಾದ್​ನಿಂದ ಬಂದಿದ್ದಾಳೆ ಎಂದು ತಿಳಿಸಿದ್ರು. ಒಂದೂವರೆ ಗಂಟೆಗಳಿಂದ ಕಾದಿದ್ದ ಆಕೆಗೆ ನಮ್ಮ ಪೋಷಕರು, ಟೀ, ಕಾಫಿ ನೀಡಿ ಉಪಚಾರ ಮಾಡಿದ್ರು. ನಾನು ಸಾಮಾನ್ಯವಾಗಿ ಆಟೋಗ್ರಾಫ್, ಫೋಟೋಗ್ರಾಫ್ ಎಂದು ತೆರಳಿ ಹಲೋ, ಹೇಗಿದ್ದೀಯಾ? ಓ ನೀನು ಹೈದ್ರಾಬಾದ್​ನಿಂದ ಬಂದಿಯಾ. ಗ್ರೇಟ್​ ಎಂದು ಮಾತನಾಡಿದೆ. ಆಕೆ ನಾನು, ಮನೆ ಬಿಟ್ಟು ಹೋಗಲ್ಲ ಎಂದಳು.

ನಾನು ಹೈದ್ರಾಬಾದ್ ಮನೆ ಬಿಟ್ಟು ಬಂದಿದ್ದೇನೆ. ನಾನು ಇಲ್ಲೇ ಉಳಿಯಲು ಬಂದಿದ್ದೇನೆ. ನಾನು ಹೇಳಿದೆ. ಅದು ಹೇಗೆ ಸಾಧ್ಯ? ನಿಮ್ಮ ತಂದೆ-ತಾಯಿ ಎಲ್ಲಿ ಎಂದು ಪ್ರಶ್ನಿಸಿದೆ. ಆ ದಿನ ನನಗೆ ತುಂಬ ಬೇಸರವಾಯ್ತು. ನಮ್ಮ ಪೋಷಕರು ಬಂದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು. ಸಮಸ್ಯೆ ಬಗೆಹರಿಸಿದ್ರು. ಇದು ನನ್ನ ಪೋಷಕರಿಗೆ ಎಚ್ಚರಿಕೆಯ ಕರೆಗಂಟೆಯಾಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಹುಲ್ ದ್ರಾವಿಡ್​​ಗೆ ಬಿಗ್ ಶಾಕ್ ಕೊಟ್ಟಿದ್ದ ಆ ಲೇಡಿ.. ಅವತ್ತು ಸಂಜೆ ಏನಾಯ್ತು ಅಂದರೆ..

https://newsfirstlive.com/wp-content/uploads/2023/12/DRAVID-3.jpg

Load More