newsfirstkannada.com

ದೇವಸ್ಥಾನದ ಪ್ರಸಾದ ಸೇವಿಸಿ ಓರ್ವ ಸಾವು, 80 ಜನರು ಅಸ್ವಸ್ಥ

Share :

Published April 15, 2024 at 11:15am

    ಬೂಂದಿ ಪ್ರಸಾದ ಸೇವಿಸಿದ ಬಳಿಕ ಓರ್ವ ಸಾವು

    ಆರು ಜನರ ಸ್ಥಿತಿ ಚಿಂತಾಜನಕ, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ

    ಕಾಳಿ ದೇವಿ ಪ್ರಸಾದ ಸೇವಿಸಿದ ಬಳಿಕ ಭಕ್ತರಲ್ಲಿ ಕಾಣಿಸಿಕೊಂಡ ಅತಿಸಾರ, ವಾಂತಿ

ಚಂದ್ರಾಪುರ: ದೇವಸ್ಥಾನದ ಪ್ರಸಾದ ಸೇವಿಸಿ ಓರ್ವ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಚಂದ್ರಾಪುರದ ಮಜ್ರಿಯಲ್ಲಿ ನಡೆದಿದೆ. 80 ಜನರು ಅಸ್ವಸ್ಥರಾಗಿದ್ದಾರೆ.

ಅಲ್ಲಿನ ಕಾಳಿ ಮಾತಾ ದೇವಸ್ಥಾನದಲ್ಲಿ ಬೂಂದಿ ಪ್ರಸಾದ ಸೇವಿಸಿದ ನಂತರ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಬೂಂದಿ ಸೇವಿಸಿದ ಬಳಿಕ ಅತಿಸಾರ, ವಾಂತಿ ಕಾಣಿಸಿಕೊಂಡಿದೆ. ಸುಮಾರು 30 ಮಹಿಳೆಯರು ಮತ್ತು 24 ಮಕ್ಕಳು ಸೇರಿದಂತೆ ಅನೇಕರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರನ್ನು ಮಜ್ರಿಯ ಡಬ್ಲ್ಯುಸಿಎಲ್​ ಆಸ್ಪತ್ರೆಗೆ ಮತ್ತು ವರೋರಾದ ಜಿಲ್ಲಾ ಅಸ್ಪತ್ರೆಗೆ ಸೇರಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವವರನ್ನು ಚಂದ್ರಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ಹಿರಿಸಾವೆಯತ್ತ ಸೌಂದರ್ಯ ಜಗದೀಶ್ ಮೃತದೇಹ.. ಮುಗಿಲು ಮುಟ್ಟಿದ ಪತ್ನಿ, ಮಕ್ಕಳ ಆಕ್ರಂದನ

ಇನ್ನು ಪ್ರಸಾದ ಸೇವಿಸಿ ಸಾವನ್ನಪ್ಪಿದ ವ್ಯಕ್ತಿಯನ್ನು ಗುರುಫೆನ್​ ಯಾದವ್​ (80) ಎಮದು ಗುರುತಿಸಲಾಗಿದೆ. ಈಗಾಗಲೇ ಕೆಲವರು ಚೇರಿಸಿಕೊಂಡಿದ್ದು, 24 ರೋಗಿಗಳನ್ನು ಹಿಂತಿರುಗಿಸಿ ಕಳುಹಿಸಲಾಗಿದೆ ಅಲ್ಲಿನ ವೈದ್ಯರೊಬ್ಬರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಸ್ಥಾನದ ಪ್ರಸಾದ ಸೇವಿಸಿ ಓರ್ವ ಸಾವು, 80 ಜನರು ಅಸ್ವಸ್ಥ

https://newsfirstlive.com/wp-content/uploads/2024/04/Kaali-Temple.jpg

Load More