ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ.. ಈ ಯೋಜನೆ ಇರುವುದು ಸತ್ಯನಾ..?

author-image
Bheemappa
Updated On
BSFನಲ್ಲಿ ಅನುಭವಸ್ಥರಿಗೆ ಉದ್ಯೋಗ ಅವಕಾಶ.. ಮಾಸಿಕ ವೇತನ ಶ್ರೇಣಿ 85,000 ರೂಪಾಯಿ
Advertisment
  • ಈಗಾಗಲೇ ಎಲ್ಲೆಡೆ ವೈರಲ್ ಆಗಿರುವ ಈ ಯೋಜನೆ
  • ಒನ್ ಫ್ಯಾಮಿಲಿ, ಒನ್ ಜಾಬ್ ಯೋಜನೆ ಬರುತ್ತಿದೆಯಾ?
  • ಪೋಸ್ಟ್​ ಮೇಲೆ ಪ್ರಧಾನಿಯ ಫೋಟೋ ಹಾಕಿ ವೈರಲ್!

ನವದೆಹಲಿ: ಸರ್ಕಾರಿ ಉದ್ಯೋಗ ಎಂದರೆ ಯಾವ ಆಕಾಂಕ್ಷಿ ಕಳೆದುಕೊಳ್ಳುತ್ತಾನೆ. ಜೀವನದಲ್ಲಿ ಒಂದೇ ಒಂದು ಸರ್ಕಾರದ ಕೆಲಸ ಸಿಕ್ಕರೆ ಸಾಕು ಎಂದು ದೇಶದ್ಯಾಂತ ಕೋಟ್ಯಾನು ಕೋಟಿ ಉದ್ಯೋಗ ಆಕಾಂಕ್ಷಿಗಳು ಹಗಲಿರುಳು ಶ್ರಮ ಪಡುತ್ತಿದ್ದಾರೆ. ಆದರೆ ಇದರ ಮಧ್ಯೆ ಸೋಶಿಯಲ್​ ಮೀಡಿಯಾದಲ್ಲಿ ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ ಎನ್ನುವ ಯೋಜನೆಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಆದ್ರೆ ಇದು ಅಸಲಿನಾ, ಸುಳ್ಳಾ?.

ಪ್ರಧಾನಿ ಮೋದಿ ಅವರ ಫೋಟೋ ಇರುವ ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ (One Family One Job Scheme) ಎನ್ನುವ ಯೋಜನೆ ಯೂಟ್ಯೂಬ್​ನಲ್ಲಿ ವೈರಲ್ ಆಗುತ್ತಿದೆ. ಇದು ಕೇವಲ ಇಂದು, ನಿನ್ನೆಯದಲ್ಲ. ಕಳೆದ ಕೆಲ ತಿಂಗಳಿನಿಂದ ಈ ಯೋಜನೆಯನ್ನು ವೈರಲ್ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಪ್ರತಿ ಕುಟುಂಬಕ್ಕೆ ಒಂದು ಹುದ್ದೆ ನೀಡುತ್ತದೆ ಎಂದು ಯೂಟ್ಯೂಬ್​ನಲ್ಲಿ ಹೇಳಲಾಗುತ್ತಿದೆ.

ಇದನ್ನೂ ಓದಿ:ಕರ್ನಾಟಕ 540 ಅರಣ್ಯ ರಕ್ಷಕ ಹುದ್ದೆಗಳ ದೈಹಿಕ ಪರೀಕ್ಷೆಯ ದಿನಾಂಕ ಪ್ರಕಟಿಸಿದ ಇಲಾಖೆ.. ಯಾವಾಗ?

publive-image

ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ ಯೋಜನೆಗೆ ಎಲ್ಲರೂ ಅರ್ಜಿ ಸಲ್ಲಿಕೆ ಮಾಡಿ ಎನ್ನಲಾಗುತ್ತಿದೆ. ಇದರ ಜೊತೆಗೆ ಮೋದಿ ಅವರ ಫೋಟೋ ಕೂಡ ಹಾಕಲಾಗಿರುತ್ತದೆ. ವಿದ್ಯಾರ್ಹತೆ, ಸ್ಯಾಲರಿ, ಉದ್ಯೋಗ ಎಲ್ಲಿದೆ ಎನ್ನುವುದನ್ನು ಸೇರಿ ಎಲ್ಲ ಮಾಹಿತಿಗಳನ್ನು ತಿಳಿಸಲಾಗಿರುತ್ತದೆ. ಈ ಯೋಜನೆಯ ಫಲ ಪಡೆದುಕೊಳ್ಳಿ ಎಂದು ಎಲ್ಲೆಡೆ ವಿಡಿಯೋಗಳು ವೈರಲ್ ಆಗಿವೆ.

ಆದರೆ ಈ ಬಗ್ಗೆ ನಿಖರವಾದ ಮಾಹಿತಿಯನ್ನು ಕಲೆ ಹಾಕಲಾಗಿದೆ. ಪ್ರೆಸ್​ ಇನ್ಫಾರ್ಮೆನ್ಸ್​ ಬ್ಯೂರೋ (PIB) ಈ ಬಗ್ಗೆ ಮಾಹಿತಿ ನೀಡಿದ್ದು ಇದು ಸುಳ್ಳು ಸುದ್ದಿ ಎಂದು ಹೇಳಿದೆ. ಒಂದು ಕುಟುಂಬಕ್ಕೆ ಒಂದು ಸರ್ಕಾರಿ ಕೆಲಸ ಎನ್ನುವ ಯೋಜನೆ ಯಾವುದು ಇಲ್ಲ. ಇಂತಹ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿಲ್ಲ. ಹೀಗಾಗಿ ಇಂತಹ ವಿಡಿಯೋಗಳನ್ನು ಯಾರು ಕೂಡ ಶೇರ್ ಮಾಡಬಾರದು ಎಂದು ಹೇಳಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment