newsfirstkannada.com

ಯುವಿ ವಿರುದ್ಧ ಗೆದ್ದ ಕ್ರಿಕೆಟ್ ದೇವರು.. ಸಚಿನ್​ ಆಲ್​ರೌಂಡರ್ ಆಟ.. ಫ್ಯಾನ್ಸ್​​​ ಖುಷ್​​​..!

Share :

Published January 19, 2024 at 12:58pm

  ಚಿಕ್ಕಬಳ್ಳಾಪುರದಲ್ಲಿ ಒನ್​​​ ಫ್ಯಾಮಿಲಿ, ಒನ್​​​​​​ ವರ್ಲ್ಡ್ ಕಪ್​​​​​​​​

  ಕ್ರಿಕೆಟ್ ದೇವರ ಬಾಯಲ್ಲಿ ಕನ್ನಡದ ಕಂಪು..!

  ಸಹೋದರರ ಸವಾಲಿನಲ್ಲಿ ಇರ್ಫಾನ್ ಗೆದ್ದಿದ್ದೇಗೆ..?

ಏಳು ದೇಶಗಳ ದಿಗ್ಗಜರ ಕಾದಾಟ. ಹೈ ಎಕ್ಸ್​​ಪೆಕ್ಟೇಶನ್​​​, ಹೈ ಎನರ್ಜಿ ಬ್ಯಾಟಲ್ ಎಂದೇ ಬಿಂಬಿತವಾಗಿತ್ತು. ಕೊನೆಗೂ ಆ ನಿರೀಕ್ಷೆ ಹುಸಿಗೊಳ್ಳಲಿಲ್ಲ​​​. ಒನ್​​​​​ ವರ್ಲ್ಡ್, ಒನ್ ಫ್ಯಾಮಿಲಿ ಕಪ್​​ನಲ್ಲಿ ಸಚಿನ್​ ತೆಂಡೂಲ್ಕರ್​​​ ಬಳಗ ಥ್ರಿಲ್ಲಿಂಗ್ ವಿಕ್ಟರಿ ದಾಖಲಿಸ್ತು. ಕ್ರಿಕೆಟ್ ದೇವರು ಆಲ್​ರೌಂಡರ್​ ಆಟದ ಮೂಲಕ ಅಭಿಮಾನಿಗಳನ್ನ ರಂಜಿಸಿದ್ರು.

ಸಚಿನ್ ತೆಂಡೂಲ್ಕರ್​​ ವರ್ಸಸ್​​ ಯುವರಾಜ್ ಸಿಂಗ್​​ ತಂಡಗಳ ನಡುವಿನ ಚಾರಿಟಿ ಕದನ. ವಿಶ್ವ ದಿಗ್ಗಜರ ಸಮ್ಮಿಲ್ಲನ. ಇಂತಹ ಲೆಜೆಂಡ್ಸ್ ಬ್ಯಾಟಲ್​ನಲ್ಲಿ ಸಚಿನ್​​ ನಾಯಕತ್ವದ ಒನ್​ ವರ್ಲ್ಡ್ ತಂಡ 4 ವಿಕೆಟ್​ಗಳ ಗೆಲುವು ದಾಖಲಿಸ್ತು. ಪಂದ್ಯ ತೀರ ಎಕ್ಸೈಟಿಂಗ್​ನಿಂದ ಕೂಡಿದ್ದರಿಂದ ಕೊನೆ ಓವರ್​​ನಲ್ಲಿ ಎಂಡ್​​​​​ ಆಗಿ ಭರಪೂಜರ ಮನರಂಜನೆ ಉಣಬಡಿಸ್ತು.

ಮ್ಯಾಡಿ ಜಬರ್ದಸ್ತ್​​​​​​​​​​​​​ ಆಟ.. ನಡೆಯದ ಬೌಲರ್ಸ್​ ಮೋಡಿ..!
ಮೊದಲು ಬ್ಯಾಟ್ ಮಾಡಿದ ಒನ್​ ಫ್ಯಾಮಿಲಿ ಬ್ಯಾಟರ್ಸ್​ ಆರಂಭದಿಂದಲೇ ಅಟ್ಯಾಕಿಂಗ್​​​​​ ನಡೆಸಿದ್ರು. ಅಬ್ಬರಿಸಿ ಬೊಬ್ಬಿರಿದ ಡರೆನ್​​​​ ಮ್ಯಾಡಿ ಎದುರಾಳಿ ಬೌಲರ್​ಗಳನ್ನ ಚೆಂಡಾಡಿದ್ರು. ಸ್ಫೋಟಕ ಅರ್ಧಶತ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದ್ರು.

ಯೂಸುಫ್ ವೈಲೆಂಟ್​​​.. ಗುಡುಗಿದ ಸಿಕ್ಸರ್ ಕಿಂಗ್​​..
ಮ್ಯಾಡಿ ನಿರ್ಗಮನದ ಬಳಿಕ ಡೇಂಜರಸ್ ಯೂಸುಫ್ ಪಠಾಣ್​ ಹಾಗೂ ಸಿಕ್ಸರ್ ಕಿಂಗ್​ ಯುವರಾಜ್​​​​​​​​​​​ ಕೂಡಿ ರನ್​​ವೇಗವನ್ನ ಹೆಚ್ಚಿಸಿದ್ರು. ಸಿಕ್ಸರ್​​-ಬೌಂಡ್ರಿಗಳ ಮಳೆಗರೆದ ಯೂಸುಫ್​ ಸ್ಫೋಟಕ 38 ರನ್ ಸಿಡಿಸಿದ್ರೆ ಕ್ಯಾಪ್ಟನ್ ಯುವಿ 10 ಎಸೆತಗಳಲ್ಲಿ ಬಿರುಸಿನ 23 ರನ್ ಗಳಿಸಿದ್ರು. ಫೈನಲಿ ಒನ್​ ಫ್ಯಾಮಿಲಿ ತಂಡ 20 ಓವರ್​​​ಗಳಲ್ಲಿ 6 ವಿಕೆಟ್​ಗೆ 180 ರನ್​ ಬಾರಿಸ್ತು.

ಸವಾಲಿನ ಗುರಿ ಬೆನ್ನಟ್ಟಿದ ಒನ್​​​ ವರ್ಲ್ಡ್ ತಂಡಕ್ಕೆ ಅಲ್​ವಿರೋ ಪೀಟರ್ಸನ್​ ಆಸರೆಯಾದ್ರು. ದಂಡುಂ ದಶಗುಣಂ ಇನ್ನಿಂಗ್ಸ್​ ಕಟ್ಟಿದ ಆಫ್ರಿಕಾ ಬ್ಯಾಟರ್​ 74 ರನ್​ಗಳ ಕಾಂಟ್ರಿಬ್ಯೂಟ್ ನೀಡಿದ್ರು. ಇವರಿಗೆ ಉತ್ತಮ ಸಾಥ್​​ ನೀಡಿದ ತೆಂಡುಲ್ಕರ್​​​ 27, ಉಪುಲ್​ ತರಂಗ ಬಿರುಸಿನ 29 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.

ಸಹೋದರರ ಸವಾಲಿನಲ್ಲಿ ಗೆದ್ದ ಇರ್ಫಾನ್ ಪಠಾಣ್​​​​
ತೀರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಒನ್​​ ವರ್ಲ್ಡ್ ತಂಡ ಗೆಲ್ಲಲು ಕೊನೆ ಓವರ್​​ನಲ್ಲಿ 6 ರನ್ ಗಳಿಸಬೇಕಿತ್ತು. ಯೂಸುಫ್​ ಪಠಾಣ್ ದಾಳಿಗಿಳಿದ್ರು. ಮೊದಲ ನಾಲ್ಕು ಎಸೆತದಲ್ಲಿ ನಾಲ್ಕು ರನ್​ ಬಿಟ್ಟುಕೊಟ್ರು. 5ನೇ ಎಸೆತದಲ್ಲಿ ತಮ್ಮ ಇರ್ಫಾನ್​​ ಪಠಾಣ್​​​ ಚೆಂಡನ್ನ ಸಿಕ್ಸರ್​​ಗಟ್ಟಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.

ಸಚಿನ್​ ಆಲ್​ರೌಂಡರ್ ಆಟ.. ಫ್ಯಾನ್ಸ್​​​​​​​ ಖುಷ್​​​..!
ಎಲ್ಲಾ ಅಭಿಮಾನಿಗಳ ಚಿತ್ತ ಕ್ರಿಕೆಟ್ ದೇವರ ಮೇಲೆ ನೆಟ್ಟಿತ್ತು. ಸುದೀರ್ಘ ಸಮಯದ ಬಳಿಕ ಅಂಗಳಕ್ಕಿಳಿದ ಸಚಿನ್​​ ಫ್ಯಾನ್ಸ್​ಗೆ ನಿರಾಸೆ ಮಾಡಲಿಲ್ಲ. ಬೌಲಿಂಗ್​ನಲ್ಲಿ ಎರಡು ಪಡೆದು ಸೈ ಅನ್ನಿಸಿಕೊಂಡ್ರೆ, ಬ್ಯಾಟಿಂಗ್​ನಲ್ಲಿ ಬಿರುಸಿನ 27 ರನ್ ಗಳಿಸಿ ಆಲ್​​ರೌಂಡರ್​​ ಪ್ರದರ್ಶನ ನೀಡಿದ್ರು.

ಸಚಿನ್ ಕನ್ನಡಕ್ಕೆ ಕರುನಾಡಿಗರು ಫಿದಾ..!
ಬರೀ ಬ್ಯಾಟಿಂಗ್​​​-ಬೌಲಿಂಗ್ ಅಷ್ಟೇ ಅಲ್ಲ. ಮಾತಿನಿಂದಲೂ ಸಚಿನ್​​​​​ ಕನ್ನಡಿಗರ ದಿಲ್ ಗೆದ್ರು. ಪಂದ್ಯಕ್ಕೂ ಮುನ್ನ ಕನ್ನಡದಲ್ಲಿ ಮಾತನಾಡಿದ ತೆಂಡುಲ್ಕರ್​​​ ಎಲ್ಲರಿಗೂ ನಮಸ್ಕಾರ ಎಂದು ಹೇಳಿದ್ರು. ಒಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ನಡೆದ ಲೆಜೆಂಡ್ಸ್​​​​​​ ಕಾಳಗ ನೋಡುಗರಿಗೆ ಸಖತ್​​​​ ಕಿಕ್​ ಕೊಡ್ತು. ಅದ್ರಲ್ಲೂ ಸಚಿನ್​​​ ಬಾಯಲ್ಲಿ ಕನ್ನಡ ಕೇಳಿದ ಕರುನಾಡಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಯುವಿ ವಿರುದ್ಧ ಗೆದ್ದ ಕ್ರಿಕೆಟ್ ದೇವರು.. ಸಚಿನ್​ ಆಲ್​ರೌಂಡರ್ ಆಟ.. ಫ್ಯಾನ್ಸ್​​​ ಖುಷ್​​​..!

https://newsfirstlive.com/wp-content/uploads/2024/01/SACHIN-1-1.jpg

Load More