/newsfirstlive-kannada/media/post_attachments/wp-content/uploads/2025/07/AB-DE-Villers.jpg)
ಎಬಿಡಿ ಎಂಬ ವಿಧ್ವಂಸಕಾರಿ ಬ್ಯಾಟ್ಸ್ಮನ್ ಕ್ರಿಕೆಟ್ ಅಂಗಳದಿಂದ ಹೊರಗಿದ್ರು. ಈ ದಿಗ್ಗಜ ಪ್ಯಾಡ್ ಕಟ್ಟಿ ವರ್ಷಗಳೇ ಉರುಳಿವೆ. ಬ್ಯಾಟಿಂಗ್ ಖದರ್ ಮಾತ್ರ ಕಿಂಚಿತ್ತು ಮಾಸಿಲ್ಲ. ಬಹು ದಿನಗಳ ಬಳಿಕ ಪ್ಯಾಡ್ ಕಟ್ಟಿರೋ ಮಿಸ್ಟರ್ 360 ಬ್ಯಾಟರ್ ವಿಸ್ಫೋಟಕ ಸೆಂಚುರಿ ಸಿಡಿಸಿದ್ದಾರೆ. ಈ ಆಟ ನೋಡಿದ ಮೇಲೆ ಎಬಿಡಿ ಕಾಂಪಿಟೇಟಿವ್ ಕ್ರಿಕೆಟ್ಗೆ ಮರಳ್ತಾರಾ ಅನ್ನೋ ಪ್ರಶ್ನೆ ಹುಟ್ಟಿದೆ.
ಮೈದಾನದ ಅಷ್ಟದಿಕ್ಕಿಗೂ ಚೆಂಡಿನ್ನ ಚೆಂಡಾಡ್ತಿದ್ದ ಈ ಡಿವಿಲಿಯರ್ಸ್ ಕ್ರಿಕೆಟ್ ಅಂಗಳದಿಂದ ದೂರ ಸರಿದು, ಸರಿ ಸುಮಾರು 4 ವರ್ಷಗಳೇ ಆಗಿತ್ತು. ಇದೀಗ ಮತ್ತೆ ಪ್ಯಾಡ್ ಕಟ್ಟಿ ಕ್ರಿಕೆಟ್ ಫೀಲ್ಡ್ಗೆ ಇಳಿದಿರುವ ಮಿಸ್ಟರ್ 360,ಹಳೇ ಖದರ್ನಲ್ಲಿ ಬೌಲರ್ಸ್ನ ರುಬ್ಬಿದ್ದಾರೆ. ಸ್ಫೋಟಕ ಸೆಂಚುರಿ ಸುರಿಮಳೆ ಗೈದಿದ್ದಾರೆ.
ಇದನ್ನೂ ಓದಿ: ನೋಡೋಕೆ ಸಾಧು ಅಂತೆ ಕಂಡರೂ ಈತ ಅಂತಿಂಥ ಮನುಷ್ಯ ಅಲ್ಲ.. 3 ವರ್ಷದ ಬಳಿಕ ಸಿಕ್ಕಿಬಿದ್ದ..!
4 ವರ್ಷಗಳ ಬಳಿಕ ಕಮ್ಬ್ಯಾಕ್..
11 ಅಕ್ಟೋಬರ್ 2021.. ಶಾರ್ಜಾ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಎದುರು ಆರ್ಸಿಬಿ ಪರ ಆಡಿದ್ದ ಪಂದ್ಯವೇ ಕೊನೆ. ಆ ಬಳಿಕ ಕ್ರಿಕೆಟ್ ಮೈದಾನದಿಂದ ದೂರ ಉಳಿದ ಎಬಿಡಿ, ಮೊನ್ನೆಯ ತನಕ ಬ್ಯಾಟ್ ಹಿಡಿದಿರಲಿಲ್ಲ. ಇದೀಗ 4 ಬಳಿಕ ಬ್ಯಾಟ್ ಹಿಡಿದಿರೋ ಎಬಿಡಿ, ವಿಂಟೇಜ್ ಎಬಿಡಿಯ ದರ್ಶನ ಮಾಡಿಸಿದ್ದಾರೆ. ಇಂಥ ವಿಂಟೇಜ್ ದರ್ಶನಕ್ಕೆ ಸಾಕ್ಷಿಯಾಗಿದ್ದು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿ.
ಇದನ್ನೂ ಓದಿ: ನೋಡೋಕೆ ಸಾಧು ಅಂತೆ ಕಂಡರೂ ಈತ ಅಂತಿಂಥ ಮನುಷ್ಯ ಅಲ್ಲ.. 3 ವರ್ಷದ ಬಳಿಕ ಸಿಕ್ಕಿಬಿದ್ದ..!
39 ಎಸೆತಗಳಲ್ಲೇ ಸ್ಫೋಟಕ ಶತಕ..
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನಲ್ಲಿ ಎಲ್ಲರನ್ನ ಎಬಿಡಿ ಮಂತ್ರ ಮುಗ್ಧರಾಗಿಸ್ತಿದ್ದಾರೆ. ಅಬ್ಬರ ಬ್ಯಾಟಿಂಗ್ನಿಂದ ಎದುರಾಳಿ ಬೌಲರ್ಗಳನ್ನು ನಿದ್ದೆಯಲ್ಲೂ ಕಾಡ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್ ಆಸ್ಟ್ರೇಲಿಯಾ ಲೆಜೆಂಡ್ಸ್ ಎದುರಿನ ಪಂದ್ಯ. ಆಸ್ಟ್ರೇಲಿಯಾ ಎದುರು ಅಷ್ಟ ದಿಕ್ಕುಗಳಿಗೆ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಗೈದ ಎಬಿಡಿ, ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಬ್ರೆಟ್ ಲೀ, ಪೀಟರ್ ಸಿಡ್ಲ್‌ರಂತ ದಿಗ್ಗಜ ಬೌಲರ್ಗಳನ್ನೇ ಚೆಂಡಾಡಿದ ಎಬಿಡಿ, 46 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್ ಒಳಗೊಂಡ 123 ರನ್ ಚಚ್ಚಿದ್ದಾರೆ.
41 ಎಸೆತಗಳಲ್ಲೇ ಸೆಂಚುರಿ..!
ಈ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ವಿಶ್ವರೂಪ ತೋರಿಸಿದ್ದು ಇಂಗ್ಲೆಂಡ್ ಎದುರಾಗಿತ್ತು. ಚೇಸಿಂಗ್ ವೇಳೆ ನಿರ್ಭಯವಾಗಿ ದಂಡಿಸಿದ ಡೆಡ್ಲಿ ಬ್ಯಾಟ್ಸಮನ್, 41 ಎಸೆತಗಳಲ್ಲೇ ಶತಕ ಪೂರೈಸಿದರು. ಈ ಪಂದ್ಯದಲ್ಲಿ 51 ಎಸೆತಗಳನ್ನ ಎದುರಿಸಿದ ಎಬಿಡಿ 15 ಬೌಂಡರಿ, 7 ಸಿಕ್ಸರ್ ಒಳಗೊಂಡ ಅಜೇಯ 116 ರನ್ ಚಚ್ಚಿದ್ರು. ಆ ಮೂಲಕ 12.3 ಓವರ್‌ಗಳಲ್ಲಿ ಪಂದ್ಯ ಮುಗಿಸಿದ್ರು.
30 ಎಸೆತಗಳಲ್ಲಿ ಅಜೇಯ 61 ರನ್..
ಇಂಗ್ಲೆಂಡ್ ಎದುರೇ ಅಲ್ಲ. ಇಂಡಿಯಾ ಚಾಂಪಿಯನ್ಸ್ ಎದುರು ಸಹ ಎಬಿಡಿ ಆರ್ಭಟ ಜೋರಾಗಿತ್ತು. ತಾನೆದುರಿಸಿದ 30 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಒಳಗೊಂಡ 61 ರನ್ ಕೊಳ್ಳೆ ಹೊಡೆದ್ರು. ಈ ಟೂರ್ನಿಯುದ್ದಕ್ಕೂ ಎಬಿ ಡಿಲಿವಿಯರ್ಸ್ನ ವೀರಾವೇಶ ಹೇಗಿತ್ತು ಅಂದ್ರೆ, ಫೀಲ್ಡರ್ಗಳೆಲ್ಲ ಪ್ರೇಕ್ಷಕರಾಗಿದ್ದರು. ಎಬಿಡಿ ಬ್ಯಾಟ್ನಿಂದ ಸಿಡಿಯುತ್ತಿದ್ದ ಒಂದೊಂದು ಬಾಲ್, ಪ್ರೇಕ್ಷಕರ ಗ್ಯಾಲರಿಯಲ್ಲಿ ಬೀಳ್ತಿತ್ತು.
ಇದನ್ನೂ ಓದಿ: ಬಿಸಿಸಿಐ ವಿರುದ್ಧ ತಿರುಗಿಬಿದ್ದ ವಾಷಿಂಗ್ಟನ್ ಸುಂದರ್ ತಂದೆ.. ಇವರ ಆಕ್ರೋಶಕ್ಕೆ ಕಾರಣ ಏನು..?
ಎಬಿ ಡಿವಿಲಿಯರ್ಸ್ ಬ್ಯಾಟಿಂಗ್
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಲೀಗ್ನಲ್ಲಿ ಎಬಿ ಡಿವಿಲಿಯರ್ಸ್ ಆಡಿದ 4 ಇನ್ನಿಂಗ್ಸ್ಗಳಿಂದ ಬರೋಬ್ಬರಿ 303 ರನ್ ಚಚ್ಚಿದ್ದಾರೆ. 151.50ರ ಬ್ಯಾಟಿಂಗ್ ಅವರೇಜ್ನಲ್ಲಿ ರನ್ ಗಳಿಸಿರುವ ಎಬಿಡಿ, 34 ಬೌಂಡರಿ, 18 ಸಿಕ್ಸರ್ ಸಿಡಿಸಿದ್ದಾರೆ. 2 ಶತಕ, 1 ಅರ್ಧಶತಕ ದಾಖಲಿಸಿರುವ ಎಬಿಡಿ, 231.29 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.
ಎಬಿಡಿ ಬ್ಯಾಟಿಂಗ್ನಲ್ಲಿ ಅದೇ ಖದರ್.. ಅದೇ ಪವರ್..!
ಎಬಿಡಿಯ ಬ್ಯಾಟಿಂಗ್ ನೋಡಿದ್ರೆ. ನಿಜಕ್ಕೂ ಈ ಯೋಚನೆ ಬರದಿರದು. 4 ವರ್ಷಗಳ ಬಳಿಕ ಬ್ಯಾಟ್ ಹಿಡಿದರೂ, ಬ್ಯಾಟಿಂಗ್ನಲ್ಲಿನ ಗತ್ತು, ಗೈರತ್ತು ಕಿಂಚಿತ್ತೂ ಮಾಸಿಲ್ಲ. ಅದೇ ವಿಂಟೇಜ್ ಬ್ಯಾಟಿಂಗ್ ಖದರ್, ಅದೇ ಇನೋವೇಟಿವ್ ಶಾಟ್ಸ್.. ತನ್ನದೇ ಆದ ಸ್ಟ್ರೈಲ್ನಲ್ಲಿ ಬ್ಯಾಟ್ ಬೀಸಿದ್ದಾರೆ. 41ರ ವಯಸ್ಸಿನಲ್ಲೂ ಹಳೇ ಎಬಿಡಿಯ ದರ್ಶನವನ್ನೇ ಮಾಡಿಸಿದ್ದಾರೆ. ಎಬಿಡಿಯ ಈ ಬ್ಯಾಟಿಂಗ್ ವೈಭವ ನೋಡಿದ ಎಲ್ಲರಲ್ಲೂ ಕಾಂಪಿಟೇಟಿವ್ ಕ್ರಿಕೆಟ್ಗೆ ಎಬಿ ಡಿವಿಲಿಯನ್ಸ್ ವಾಪಾಸ್ಸಾಗ್ತಾರಾ ಎಂಬ ಪ್ರಶ್ನೆ ಹುಟ್ಟಿದೆ.
ಸರಿ ಹೋಯ್ತಾ ಡಿವಿಲಿಯರ್ಸ್ ದೃಷ್ಟಿ ದೋಷ?
ಎಬಿಡಿ ಕ್ರಿಕೆಟ್ನಿಂದ ದೂರ ಸರಿಯಲು ಕಾರಣವೇ ದೃಷ್ಟಿದೋಷವಾಗಿತ್ತು. 2019ರಲ್ಲಿ ಕಣ್ಣಿನ ಸರ್ಜರಿಗೆ ಒಳಗಾಗಿದ್ದ ಡೆಡ್ಲಿ ಬ್ಯಾಟರ್ಗೆ ಒಂದು ಕಾಣ್ತಿರಲಿಲ್ಲ. ಹೀಗಾದ್ರೂ ಎರಡು ವರ್ಷ ಒಂದೇ ಕಣ್ಣಲ್ಲಿ ಆಡಿ ಎಲ್ಲರನ್ನ ಖುಷಿಪಡಿಸಿದ್ದ ಎಬಿಡಿ, 2021ರಲ್ಲಿ ಫ್ರಾಂಚೈಸಿ ಲೀಗ್ನಿಂದಲೂ ದೂರ ಉಳಿದರು. ಆ ಬಳಿಕ ಸರ್ಜರಿಗೆ ಒಳಗಾಗಿದ್ರು. ಇದೀಗ ಎಬಿಡಿಯ ಬ್ಯಾಟಿಂಗ್ ಅಬ್ಬರ ನೋಡ್ತಿದ್ರೆ. ಡಿವಿಲಿಯರ್ಸ್ ದೃಷ್ಟಿ ದೋಷಾ ಸರಿಯಾದಂತೆ ಕಾಣ್ತಿದೆ. ಹೀಗಾಗಿ ಎಬಿಡಿ ಮತ್ತೆ ಕಾಂಪಿಟೇಟಿವ್ ಕ್ರಿಕೆಟ್ ಮರಳಲಿ ಅನ್ನೋದು ಫ್ಯಾನ್ಸ್ ಒತ್ತಾಸೆಯೂ ಆಗಿದೆ.
ಇದನ್ನೂ ಓದಿ: ಅಂತಿಂಥ ಭೂಕಂಪ ಅಲ್ಲವೇ ಅಲ್ಲ.. 4 ಖಂಡಗಳಲ್ಲಿ ಸುನಾಮಿ ಏಳುವ ಎಚ್ಚರಿಕೆ.. ಎಲ್ಲೆಲ್ಲಿ ತೀವ್ರತೆ ಹೇಗಿದೆ..?
ಎಬಿಡಿ ಬ್ಯಾಟಿಂಗ್ ನೋಡಿರುವ ಟಿ20 ಫ್ರಾಂಚೈಸಿಗಳು ಅಪ್ರೋಚ್ ಮಾಡಿದರೂ ಅಚ್ಚರಿ ಇಲ್ಲ. ಇದಕ್ಕೆ ಡಿವಿಲಿಯರ್ಸ್ ಒಪ್ಪುವರಾ ಅನ್ನೋದೇ ಪ್ರಶ್ನೆ. ಒಂದು ವೇಳೆ ಒಪ್ಪಿ ಕಮ್ಬ್ಯಾಕ್ ಮಾಡಿದ್ರೆ ಆರ್ಸಿಬಿಗೆ ಬರಲಿ ಅನ್ನೋ ಆರ್ಸಿಬಿ ಫ್ಯಾನ್ಸ್ ಫ್ರಾರ್ಥನೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ