/newsfirstlive-kannada/media/post_attachments/wp-content/uploads/2024/12/Marriag.jpg)
ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳ ಬಗ್ಗೆ ಕೇಳಿರ್ತೀರಿ, ಓದಿರ್ತೀರಿ. ಅದೆಷ್ಟೋ ಅನೈತಿಕ ಸಂಬಂಧಗಳು ಕುಟುಂಬಗಳನ್ನೇ ನಾಶ ಮಾಡಿವೆ. ಗಂಡನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎಂದು ಹೆಂಡತಿಗೆ ಗೊತ್ತಾದ್ರೆ, ಹೆಂಡತಿಗೆ ಬೇರೆಯವರ ಜೊತೆ ಸಂಬಂಧವಿದೆ ಎಂದು ಗಂಡನಿಗೆ ತಿಳಿದರೆ ಕತೆ ಮುಗೀತು ಅಷ್ಟೇ. ದೊಡ್ಡ ದೊಡ್ಡ ಯುದ್ಧಗಳೇ ನಡೆದಿರುವ ಉದಾಹರಣೆಗಳು ನಮ್ಮ ಮುಂದಿವೆ.
ವಿಷಯ ಹೀಗಿರುವಾಗ ಬಿಹಾರದಲ್ಲಿ ವಿಚಿತ್ರ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಪತ್ನಿ ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಪತಿ, ಆಕೆಗೆ ಪ್ರಿಯಕರನ ಜೊತೆ ಮದುವೆ ಮಾಡಿಸಿ ಸುದ್ದಿಯಾಗಿದ್ದಾನೆ. ಈ ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ನೆಲಮಂಗಲದಲ್ಲಿ ಒಂದೇ ಕುಟುಂಬದ 6 ಮಂದಿ ದುರಂತ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ಮೂರು ಮಕ್ಕಳ ತಾಯಿಯೊಬ್ಬರು ಇಬ್ಬರು ಮಕ್ಕಳ ತಂದೆಯನ್ನು ಪ್ರೀತಿಸಿದ ಕತೆ ಇದು. ಮಹಿಳೆ ಮತ್ತು ಆಕೆಯ ಪತಿ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈಗ ಆಕೆ ಬೇರೊಬ್ಬ ಪುರುಷನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಹೆಂಡತಿಯ ಸಂತೋಷಕ್ಕೆ ಭಂಗ ತರಲು ಬಯಸದ ಪತಿ, ಅವಳು ಪ್ರೀತಿಸಿದ ವ್ಯಕ್ತಿಯ ಜೊತೆ ಮದುವೆಯನ್ನು ಏರ್ಪಡಿಸಿದ್ದಾನೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪತಿಯೊಬ್ಬ ತನ್ನ ಹೆಂಡತಿಗಾಗಿ ಎರಡನೇ ಮದುವೆ ಏರ್ಪಡಿಸಿದ್ದಾನೆ. ಊರಿನವರ ಸಮ್ಮುಖದಲ್ಲಿ ಪ್ರಿಯಕರ ಆಕೆಯ ಹಣೆಗೆ ಸಿಂಧೂರ ಇಟ್ಟು ಮದುವೆ ಆಗಿದ್ದಾನೆ. ಮುಂದೆ ಏನೇ ಸಮಸ್ಯೆ ಬಂದರೂ ಅದು ಅವನ ಜವಾಬ್ದಾರಿ, ನೀನೇ ಎಲ್ಲವನ್ನೂ ನಿಭಾಯಿಸಬೇಕು ಎಂದು ಮೊದಲ ಗಂಡ ಹೇಳಿದ್ದಾನೆ.
Extra-Marital Affair (Mother of three children fell in love with the father of two children, the husband got his wife married to her boyfriend; they had love marriage 12 years ago) Saharsa Bihar
pic.twitter.com/0QV5Trw8PS— Ghar Ke Kalesh (@gharkekalesh) December 19, 2024
ಇದನ್ನೂ ಓದಿ:ಹೊಸ ಕಾರಿನಲ್ಲಿ ವೀಕೆಂಡ್ ಪ್ರವಾಸ.. ನಜ್ಜುಗುಜ್ಜಾದ ಒಂದೇ ಕುಟುಂಬದ 6 ಮಂದಿ; ಘೋರ ದುರಂತ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ