/newsfirstlive-kannada/media/post_attachments/wp-content/uploads/2024/12/BNG-ACCIDENT-2.jpg)
ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸರಣಿ ಅಪಘಾತವಾಗಿದೆ. ಕೆಎಸ್​ಆರ್​ಟಿಸಿ ಬಸ್ ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಪರಿಣಾಮ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಪಕ್ಕದಲ್ಲಿದ್ದ ವಾಹನಗಳಿಗೂ ಡ್ಯಾಮೇಜ್ ಆಗಿದೆ.
ಅಪಘಾತದ ಭೀಕರತೆ ಎಷ್ಟು ಇತ್ತು ಅಂದ್ರೆ ಡಿವೈಡರ್​ಗೆ ಗುದ್ದಿ ಬಸ್​ ಆಚೆಗೆ ಬಂದಿದೆ. ಬಲಬದಿಯಿಂದ ಬಸ್​ನ್ನು ಓವರ್​ಟೇಕ್​ ಮಾಡಲು ಬಂದ ಆಟೋ ಚಾಲಕ ಬಸ್​ ಹಾಗೂ ಡಿವೈಡರ್​ ನಡುವೆ ಸಿಲುಕಿ ಇಡೀ ಆಟೋವೇ ಜಖಂಗೊಂಡಿದೆ. ಇದರ ಜೊತೆಗೆ ಒಂದು ಕಾರ್​ನ ಹಿಂಭಾಗವೂ ಕೂಡ ಛಿದ್ರಗೊಂಡಿದ್ದು, ಖಾಸಗಿ ಬಸ್​ಗೂ ಕೂಡ ಹಾನಿಯುಂಟಾಗಿದೆ.'
ಇನ್ನು ಇಬ್ಬರೂ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿನ್ನೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us