/newsfirstlive-kannada/media/post_attachments/wp-content/uploads/2025/07/BIKLU-SHIVU.jpg)
ರೌಡಿಶೀಟರ್ ಬಿಕ್ಲು ಶಿವ ಕೇಸ್ಗೆ ಸಂಬಂಧಪಟ್ಟಂತೆ ಮತ್ತೊಬ್ಬ ಸುಪಾರಿ ಕಿಲ್ಲರ್ ಅರೆಸ್ಟ್ ಆಗಿದ್ದಾನೆ. ಮಾಲೂರಿನ ಕುಖ್ಯಾತ ರೌಡಿಶೀಟರ್ ಕಿರಣ್ ಬಂಧಿತ ಆರೋಪಿಯಾಗಿದ್ದಾನೆ.
ಪ್ರಕರಣದ ತನಿಖೆ ನಡೆಸ್ತಿದ್ದ ಪೊಲೀಸರಿಗೆ ಭಿಕ್ಲು ಶಿವನ ಮೇಲೆ ಮೊದಲು ಅಟ್ಯಾಕ್ ಮಾಡಿದ್ದು ಮಾಲೂರು ಕಿರಣ್ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಆರೋಪಿ ಹಿಂದೆ ಬಿದ್ದ ಪುಲಕೇಶಿನಗರ ಎಸಿಪಿ ಗೀತಾ ಅಂಡ್ ಟೀಂ ನಿನ್ನೆ ತಡರಾತ್ರಿ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಕಿರಣ್ ಮಾಲೂರಿನ ಸುಪಾರಿ ಗ್ಯಾಂಗನ್ನ ಲೀಡ್ ಮಾಡಿದ್ದ ಅನ್ನೋ ಮಾಹಿತಿ ಇದೆ.
ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್ ದಾಖಲು
ಸಿಸಿಟಿವಿ ದೃಶ್ಯ ವೈರಲ್
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಮಾಸ್ಟರ್ ಮೈಂಡ್ ಜಗ್ಗ ಎಸ್ಕೇಪ್ ಆಗುವ ಸಿಸಿಟಿವಿ ದೃಶ್ಯ ಹೊರ ಬಿದ್ದಿದೆ. ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಬಿಕ್ಲು ಶಿವನ ಹ*ತ್ಯೆಯಾದ್ರೆ, ರಾತ್ರಿ 10 ಗಂಟೆ 15 ನಿಮಿಷಕ್ಕೆ ಹೆಣ್ಣೂರಿನ ತನ್ನ ಅಪಾರ್ಟ್ಮೆಂಟ್ನ ಲಿಫ್ಟ್ ನಿಂದ ಇಳಿದು ತನ್ನ ಆಡಿ ಕಾರಿನಲ್ಲಿ ಜಗ್ಗ ಎಸ್ಕೇಪ್ ಆಗಿದ್ದಾನೆ. ಬಳಿಕ ಕಾರಿನಲ್ಲಿ ಅತ್ತಿಬೆಲೆ ಟೋಲ್ ಮೂಲಕ ನೇರವಾಗಿ ಚೆನ್ನೈಗೆ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ:WWE ದಿಗ್ಗಜ ಹಲ್ಕ್ ಹೋಗಾನ್ ಇನ್ನಿಲ್ಲ.. ಹಠಾತ್ ನಿಧನಕ್ಕೆ ಆಗಿದ್ದೇನು..?
ಬೈರತಿ ಬಸವರಾಜ್ PAಗೆ ನೋಟಿಸ್
ಇನ್ನು ಶಾಸಕ ಬೈರತಿ ಬಸವರಾಜ್ PA ಹನುಮಂತಗೆ ನೋಟಿಸ್ ನೀಡಲಾಗಿದೆ. ಪ್ರಕರಣದ ತನಿಖೆ ನಡೆಸ್ತಿರೋ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ನೋಟಿಸ್ ನೀಡಿದ್ದು, ಜುಲೈ 25 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅಂತೆಯೇ ಹನುಮಂತ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಬರೋಬ್ಬರಿ ಒಂದು ಗಂಟೆಯಿಂದ ಪುಲಕೇಶಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಈ ಮಧ್ಯೆ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ: ಬೆರಳು ಮುರಿದಿದೆ, 6 ವಾರ ಆಡಂಗಿಲ್ಲ ಅಂದರೂ ಪಂತ್ ಸುಮ್ಮನಿರಲಿಲ್ಲ.. ಆ ಮೊದಲ ಎರಡು ದಿನ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ