/newsfirstlive-kannada/media/post_attachments/wp-content/uploads/2024/12/SHWETHA-GOWDA-1.jpg)
ವರ್ತೂರು ಪ್ರಕಾಶ್ ಆಪ್ತೆ ಶ್ವೇತಾಗೌಡ ವಂಚನೆ ಪ್ರಕರಣಗಳು ದಿನಕ್ಕೊಂದು ಆಚೆ ಬರುತ್ತಿವೆ. ಸದ್ಯ ಶ್ವೇತಗೌಡ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಮೂಲದ ಮತ್ತೋರ್ವ ಜ್ಯುವೆಲರಿ ಮಾಲೀಕನಿಗೆ ಶ್ವೇತಾಗೌಡ ಟೋಪಿ ಹಾಕಿದ್ದಾಳೆ ಎಂಬ ಆರೋಪ ಈಗ ಕೇಳಿ ಬರುತ್ತಿದೆ.ಶಿವಮೊಗ್ಗದ ಸುಭಾಷ್​ ನಗರದ ಪ್ರಗತಿ ಜ್ಯುವೆಲರಿ ಮಾಲೀಕನಿಂದ ಸುಮಾರು 20 ಲಕ್ಷ ರೂಪಾಯಿಯ ಅಧಿಕ ಮೌಲ್ಯದ ಚಿನ್ನವನ್ನು ಪಡೆದು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ಕೆಲ ತಿಂಗಳ ಹಿಂದೆ ಜ್ಯುವೆಲರಿ ಅಂಗಡಿ ಮಾಲಿಕನನ್ನು ಸಂಜಯ್​ ಬಾಫ್ನರಿಂದ ಶ್ವೇತಾಗೌಡ ಪರಿಚಯ ಮಾಡಿಕೊಂಡಿದ್ದರು. ಇದಾದ ಕೆಲ ದಿನಗಳ ಬಳಿಕ ಬೆಂಗಳೂರಿಗೆ ಭೇಟಿ ನೀಡುತ್ತಾರೆ ಪ್ರಗತಿ ಜ್ಯುವೆಲರಿ ಅಂಗಡಿ ಮಾಲೀಕ ಬಾಲ್ರಾಜ್ ಶೇಟ್​. ಸಂಜಯ್ ಬಾಫ್ನ ಜೊತೆ ನಾನು ಕೋಟಿ ಕೋಟಿ ರೂಪಾಯಿಯ ವ್ಯವಹಾರ ಮಾಡುತ್ತೇನೆ. ಅವರ ಬಳಿ ಆ್ಯಂಟಿಕ್ ಜ್ಯುವೆಲರಿಗಳನ್ನು ಖರೀದಿ ಮಾಡುತ್ತೇನೆ ಅಷ್ಟೇ ಏಕೆ ಅವರ ಬಳಿ ನಾನು ವಜ್ರದ ವ್ಯಾಪಾರವನ್ನು ಕೂಡ ಮಾಡುತ್ತೇನೆ. ನೀವು ನನಗೆ 285 ಗ್ರಾಮ ತೂಕದ ಆ್ಯಂಟಿಕ್ ಚಿನ್ನ ಮಾಡಿಕೊಡಿ ಎಂದು ಬಾಲರಾಜ್ ಸೇಠ್​ರಲ್ಲಿ ಯುಬಿಸಿಟಿ ಬಳಿಯ ಕಾಫಿ ಡೇಯಲ್ಲಿ ಭೇಟಿಯಾಗಿ ಡೀಲ್ ಕುದುರಿಸಿದ್ದಳು ಶ್ವೇತಾಗೌಡ.
ಇದನ್ನೂ ಓದಿ:ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಘಟನೆ​; ಜೀವ ಬಿಟ್ಟ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ, 5ಕ್ಕೆ ಏರಿಕೆ
ಕಾಫಿ ಡೇಯಲ್ಲಿ ಡೀಲ್ ಕುದುರಿಸಿದ್ದ ಶ್ವೇತಾಗೌಡ ಆಮೇಲೆ ನಾಪತ್ತೆಯಾಗಿದ್ದಳು. ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬೆಂಗಳೂರಿಗೆ ಬೇರೊಬ್ಬರಿಗೆ ಚಿನ್ನಾಭರಣ ನೀಡಲು ತನ್ನ ತಮ್ಮನ್ನು ಕಳಿಸಿದ್ದರು ಬಾಲರಾಜ್, ಆದ್ರೆ ಅಂದು ಚಿನ್ನಾಭರಣ ತೆಗೆದುಕೊಳ್ಳಬೇಕಾದವರು ಭೇಟಿ ಆಗಿರಲಿಲ್ಲ. ಹೀಗಾಗಿ ತಾನಾಗಿಯೇ ಶ್ವೇತಾಗೌಡಳಿಗೆ ಚಿನ್ನಾಭರಣದ ಫೋಟೋ ಕಳಿಸಿದ್ದರು. ಬಾಲಾರಾಜ್​. ಫೋಟೋ ನೋಡಿದ ಮೇಲೆ ಈ ಒಡವೆಗಳು ನಮಗೆ ಬೇಕು ಎಂದಿದ್ದಳು ಶ್ವೇತಾಗೌಡ. ಮತ್ತೆ ಅದೇ ಕಾಫಿಡೇಯಲ್ಲಿ ಭೇಟಿಯಾಗಿದ್ದಾರೆ ಬಾಲರಾಜ್​ ಮತ್ತು ಶ್ವೇತಾ.
/newsfirstlive-kannada/media/post_attachments/wp-content/uploads/2024/12/SHWETHA-GOWDA-1-1.jpg)
ಅಲ್ಲಿಂದ ಶುರುವಾಗಿದೆ ಹೊಸ ಕಥೆ. ಚಿನ್ನಾಭರಣ ಪಡೆದುಕೊಂಡ ಶ್ವೇತಾ ಒಟ್ಟು 5 ಲಕ್ಷ ರೂಪಾಯಿಯ ಎರಡು ಚೆಕ್​, ಆರು ಲಕ್ಷ ರೂಪಾಯಿಯ ಒಂದು ಚೆಕ್ ನೀಡಿ, ಉಳಿದ 4 ಲಕ್ಷ 75 ಸಾವಿರ ರೂಪಾಯಿಯನ್ನು ಆರ್​ಟಿಜಿಎಸ್​ ಮಾಡುವುದಾಗಿ ಹೇಳುತ್ತಾಳೆ. ಮನೆಗೆ ಹೋಗಿ ಆರ್​​ಟಿಜಿಎಸ್​ ಮಾಡುತ್ತೇನೆ ಎಂದ ಶ್ವೇತಾಳ ಮೊಬೈಲ್ ಸ್ವಿಚ್ಡ್​ ಆಫ್ ಆಗಿದೆ. ಮತ್ತೊಂದು ಕಡೆ ಶ್ವೇತಾಗೌಡ ನೀಡಿದ ಚೆಕ್​ಗಳನ್ನು ಬ್ಯಾಂಕಿಗೆ ಸಲ್ಲಿಸಿದಾಗ ಚೆಕ್​ಬೌನ್ಸ್ ಆಗಿವೆ. ಇದಾದ ಬಳಿಕ ಶ್ವೇತಾಗೌಡ ಸಂಪರ್ಕಕ್ಕೆ ಹಲವು ಬಾರಿ ಯತ್ನಿಸಿದ್ದಾರೆ ಬಾಲರಾಜ್, ಅಷ್ಟರಲ್ಲಾಗಲೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ ಶ್ವೇತಾಗೌಡ ಬಂಧನವಾಗಿದ ಸುದ್ದಿ ಜೋರಾ ಹರಡಿತ್ತು. ಸದ್ಯ ಬಾಲರಾಜ್ ಕೂಡ ಶ್ವೇತಾಗೌಡ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us