/newsfirstlive-kannada/media/post_attachments/wp-content/uploads/2024/12/PUSHPA-CASE.jpg)
ಕಾಲ್ತುಳಿತ ಪ್ರಕರಣದಲ್ಲಿ ನಿನ್ನೆ ಅಲ್ಲು ಅರ್ಜುನ್ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಇದರ ಬೆನ್ನಲ್ಲೇ ಅಲ್ಲು ಅರ್ಜುನ್ ಸಿಬ್ಬಂದಿಯೊಬ್ಬರನ್ನ ಬಂಧಿಸಲಾಗಿದೆ. ಇದರ ಜೊತೆಗೆ ಪೊಲೀಸರು ಕಾಲ್ತುಳಿತದ ಸಿಸಿಟಿವಿ ದೃಶ್ಯಾವಳಿಗಳನ್ನ ಬಿಡುಗಡೆ ಮಾಡಿದ್ದಾರೆ.
ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ಗೆ​ ಶಾಕ್​ ಮೇಲೆ ಶಾಕ್
ಪುಷ್ಪ ಸಕ್ಸಸ್​, ಭರ್ಜರಿ ಕಲೆಕ್ಷನ್, ಭಾರತದ ಬಾಕ್ಸ್​ ಆಫೀಸ್​ ಕಿಂಗ್, ಸ್ಟೇಜ್​ ಪ್ರೋಗ್ರಾಮ್. ಸಕ್ಸಸ್​ ಮೀಟ್​, ಪಾರ್ಟಿ, ಪುಷ್ಪ.. ಪುಷ್ಪರಾಜ್ ಅಂತ ಎಂಜಾಯ್ ಮಾಡಬೇಕಿದ್ದ ಅಲ್ಲು ಅರ್ಜುನ್​ಗೆ ದಿನಕ್ಕೊಂದು ಸಂಕಷ್ಟ ಎದುರಾಗ್ತಿದೆ. ಅಲ್ಲು ಅರ್ಜುನ್​ರ ಕರಿಯರ್ ಬದಲಿಸಬೇಕಿದ್ದ ಪುಷ್ಪ ಸಿನಿಮಾ. ಕಂಟಕವಾಗಿ ಪರಿಣಮಿಸಿದೆ. ಸಂಧ್ಯಾ ಥಿಯೇಟರರ್​ನ ಪ್ರೀಮಿಯರ್ ಶೋ ವೇಳೆ ಆದ ಅ ಒಂದು ಘಟನೆ ಎಲ್ಲವನ್ನ ಬದಲಿಸಿ ಬಿಟ್ಟಿದೆ. ಆವತ್ತಿನ ಘಟನೆಗೆ ಸಾಕ್ಷಿ ಎಂಬಂತೆ ಮತ್ತೊಂದು ವಿಡಿಯೋವನ್ನ ಹೈದರಾಬಾದ್​ ಪೊಲೀಸರು ರಿಲೀಸ್​ ಮಾಡಿದ್ದಾರೆ.
ತೆಲಂಗಾಣ ಪೊಲೀಸರಿಂದ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ.
ಇದನ್ನೂ ಓದಿ:ಅಮೆರಿಕಾದಿಂದ ಶಿವಣ್ಣ ವಿಡಿಯೋ ಕಾಲ್.. ಅಭಿಮಾನಿಗಳಿಗೆ ಗುಡ್‌ನ್ಯೂಸ್; ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/12/BOUNCER.jpg)
ತೆಲಂಗಾಣ ಪೊಲೀಸರು ಪುಷ್ಪ 2 ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳು ಬೌನ್ಸರ್‌ಗಳನ್ನು ಪಕ್ಕಕ್ಕೆ ತಳ್ಳಿ ಸ್ಥಳಕ್ಕೆ ನುಗ್ಗಿ ಕಾಲ್ತುಳಿತವನ್ನ ಉಂಟು ಮಾಡಿದ ಅವ್ಯವಸ್ಥೆಯನ್ನು ದೃಶ್ಯಾವಳಿಗಳು ಬಹಿರಂಗಪಡಿಸುತ್ತವೆ.
ಹೈದರಾಬಾದ್​ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್​​ನನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅಲ್ಲು ಅರ್ಜುನ್​​ ವಿಚಾರಣೆ ಬಳಿಕ ಅವರ ವೈಯಕ್ತಿಕ ಸಿಬ್ಬಂದಿಯಲ್ಲಿ ಒಬ್ಬರಾದ ಬೌನ್ಸರ್ ಆಂಟೋನಿ ಬಂಧನವಾಗಿದೆ. ಬೌನ್ಸರ್ ಆಂಟೋನಿ ಅಭಿಮಾನಿಗಳ ಗುಂಪನ್ನ ತಳ್ಳಿದ ಆರೋಪ ಕೂಡ ಕೇಳಿ ಬರ್ತಿದೆ. ಇನ್ನು ಪ್ರತ್ಯಕ್ಷ ದರ್ಶಿಯೊಬ್ಬರು ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಅಲ್ಲು ಅರ್ಜುನ್ ಮಾತ್ರವಲ್ಲ, ಪೊಲೀಸರು ಮತ್ತು ಸರ್ಕಾರದ್ದು ಕೂಡ ಪಾತ್ರವಿದೆ ಎಂದಿದ್ದಾರೆ.
ಇಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವ ಬದಲು. ಅವರವರ ತಪ್ಪುಗಳನ್ನ ಒಮ್ಮೆ ನೋಡಿಕೊಳ್ಳಬೇಕು. ಇದರಲ್ಲಿ ಅಲ್ಲು ಅರ್ಜುನ್​ ತಪ್ಪಿಲ್ಲ. ಅವರದ್ದು ತಪ್ಪು ಇದೆ ಅಂದ್ರೆ. ಪೊಲೀಸರದ್ದು ಇದೆ. ಸರ್ಕಾರದ್ದು ಇದೆ. ಪ್ರೀಮಿಯರ್ ಶೋಗೆ ಸರ್ಕಾರ ಅನುಮತಿ ಕೊಟ್ಟಿದೆ. 1100 ರೂಪಾಯಿ ಅನ್ನ ಶುಲ್ಕದ ರೂಪದಲ್ಲಿ ಪಡೆದಿದ್ದಾರೆ. ಆದ್ರೆ ಅವರು ನಮಗೆ ಕೊಟ್ಟಿದ್ದು ಮಾತ್ರ ಲಾಠಿ ಏಟು ಅಂತ ಹೇಳಿದ್ದಾರೆ ಪ್ರತ್ಯಕ್ಷದರ್ಶಿ ವಿಜಯ್ ಅವರು ಹೇಳಿದ್ದಾರೆ
ಈ ಪ್ರಕರಣದಲ್ಲಿ ಒಟ್ಟು 18 ಜನರನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ಮೈತ್ರಿ ಮೂವಿ ಮೇಕರ್ಸ್ ಜೊತೆಗೆ, ಅಲ್ಲು ಅರ್ಜುನ್ ವೈಯಕ್ತಿಕ ಸಿಬ್ಬಂದಿ ಹೆಸರುಗಳನ್ನೂ ರಿಮಾಂಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us