ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಮತ್ತೊಂದು ದೂರು ದಾಖಲು; ಎಡಿಜಿಪಿ ಚಂದ್ರಶೇಖರ್​ ಅವರಿಂದ ಕಂಪ್ಲೇಂಟ್

author-image
Gopal Kulkarni
Updated On
ಕುಮಾರಸ್ವಾಮಿ ಬಗ್ಗೆ ADGP ಚಂದ್ರಶೇಖರ್‌ ಕಿಡಿ; ಹಿರಿಯ ಅಂಕಣಕಾರ ಗಿರೀಶ್ ಲಿಂಗಣ್ಣ ತೀವ್ರ ಖಂಡನೆ
Advertisment
  • ಹೆಚ್​.ಡಿ. ಕುಮಾರಸ್ವಾಮಿ ಬೆನ್ನು ಬಿಡದ ದೂರುಗಳ ಸರಮಾಲೆ
  • ಕೇಂದ್ರ ಸಚಿವರ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ
  • ಎಸ್​ಐಟಿಯ ಎಡಿಜಿಪಿ ಚಂದರಶೇಖರ್ ಅವರಿಂದ ದೂರು ದಾಖಲು

ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ. ಸಂಜಯ್​ ನಗರದ ಪೊಲೀಸರಿಗೆ ಲೋಕಾಯುಕ್ತ ಎಸ್​ಐಟಿ ಎಡಿಜಿಪಿ ಚಂದ್ರಶೇಖರ್​ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಎನ್​.ಸಿ.ಆರ್​ ದಾಖಲಿಸಿಕೊಂಡಿದ್ದದಾರೆ ಪೊಲೀಸರು.

ಇದನ್ನೂ ಓದಿ:ಗೃಹಲಕ್ಷ್ಮಿ ಹಣ ಕೂಡಿಟ್ಟು ಮಗನಿಗೆ ಬೈಕ್ ಕೊಡಿಸಿದ ತಾಯಿ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಫುಲ್ ಖುಷ್‌; ಹೇಳಿದ್ದೇನು?

ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿರುವ ಚಂದ್ರಶೇಖರ್ ನನಗೆ ಬೆದರಿಕೆಯನ್ನು ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:ಮೈಸೂರು ಮಹಾರಾಜರಿಗೆ 2ನೇ ಗಂಡು ಮಗು.. ಅಲಮೇಲಮ್ಮನ ಶಾಪದ ಕಥೆ ಏನು?

ನಾನು ಐಎಸ್​ಡಿ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದ ಎಸ್​ಐಟಿಯ ಎಡಿಜಿಪಿ ಆಗಿದ್ದೇನೆ. ಕುಮಾರಸ್ವಾಮಿ ಮೇಲೆ 2014ರಲ್ಲಿ ದಾಖಲಾದ ಪ್ರಕರಣದ ತನಿಖೆಯನ್ನು ಕೈಗೊಂಡಿದ್ದು. ತನಿಖೆ ವೇಳೆ ಅವರ ವಿರುದ್ಧ ಹೆಚ್ಚುವರಿ ಸಾಕ್ಷ್ಯಗಳು ದೊರೆತಿದ್ದವು. ಹೀಗಾಗಿ ಕಾನೂನು ಪ್ರಕಾರ ನಾನು ಕ್ರಮ ಕೈಗೊಳ್ಳಲು ರಾಜ್ಯಪಾಲರ ಅನುಮತಿ ಕೋರಲಾಗಿತ್ತು. ಅನುಮತಿ ಕೋರಿದ ವಿಚಾರವಾಗಿ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಂದ್ರಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment