/newsfirstlive-kannada/media/post_attachments/wp-content/uploads/2024/12/MDK-SOLIER.jpg)
ಕರುನಾಡಿನ ಪಾಲಿಗೆ ಇದು ಕರಾಳ ಸುದ್ದಿ. ರಾಜ್ಯದಿಂದ ದೇಶ ಸೇವೆಗೆ ಹೋಗಿದ್ದ ವೀರ ಯೋಧರನ್ನು ನಾಡು ಕಳೆದುಕೊಂಡಿದೆ. ಸೇನಾ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ. ಸೇನಾ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಹುತಾತ್ಮ
ಡಿಸೆಂಬರ್​ 24ರಂದು ಪೂಂಚ್​ ವಲಯದಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿತ್ತು. ಸುಮಾರು 300 ಅಡಿ ಎತ್ತರದಿಂದ ಕಣಿವೆಗೆ ವಾಹನ ಉರುಳಿ ಬಿದ್ದ ಪರಿಣಾಮ, ಐವರು ಯೋಧ ಹುತಾತ್ಮರಾಗಿದ್ದರು. ಅದರಲ್ಲಿ ಕರ್ನಾಟಕದವರೇ ಮೂವರಾಗಿದ್ದರು. ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ, ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್, ಮಹಾಲಿಂಗಪುರದ 25 ವರ್ಷದ ಮಹೇಶ್ ಮರಿಗೊಂಡರನ್ನು ಕಳೆದುಕೊಂಡ ನೋವು ಕರ್ನಾಟಕದಲ್ಲಿ ಇನ್ನೂ ಕಡಿಮೆ ಆಗಿಲ್ಲ. ಇದೀಗ ಮತ್ತೊಂದು ಶಾಕಿಂಗ್​ ಸುದ್ದಿ ಬಂದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಕೊಡಗಿನ ಆಲೂರು ಸಿದ್ದಾಪುರದ ಮೂಲದ ಸೈನಿಕ ದಿವಿನ್​ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ.
ಮದುವೆಗೆ ಇನ್ನೂ 2 ತಿಂಗಳು ಬಾಕಿ ಮಾತ್ರ ಇತ್ತು
ಕೊಡಗಿನ ವೀರಯೋಧ ದಿವಿನ್ ಅವರು 10 ವರ್ಷದ ಹಿಂದೆ ಸೇನೆಗೆ ಸೇರಿದ್ದರು. ಇತ್ತೀಚೆಗೆ ದಿವಿನ್ ಅವರಿಗೆ ನಿಶ್ಚಿತಾರ್ಥ ಕೂಡ ನೆರವೇರಿತ್ತು. 2025ರ ಫೆಬ್ರವರಿಯಲ್ಲಿ ದಿವಿನ್ ವಿವಾಹ ನಿಶ್ಚಯವಾಗಿತ್ತಂತೆ. ಲಗ್ನ ಪತ್ರಿಕೆಯನ್ನೂ ಕುಟುಂಬಸ್ಥರು ಪ್ರಿಂಟ್​ ಮಾಡಿಸಿದ್ದರಂತೆ. ಆದ್ರೆ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗ್ತಿತ್ತು. ಎರಡು ದಿನದ ಹಿಂದೆಯಷ್ಟೇ ದಿವಿನ್ ತಾಯಿ ಜಯಾ ಅವರು ಶ್ರೀನಗರದ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅಮ್ಮನ ಕರೆಗೆ ದಿವಿನ್ ಕಣ್ಣು ಬಿಡುವ ಪ್ರಯತ್ನ ಮಾಡಿದ್ದರಂತೆ. ಆದರೆ ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನೆಲೆಯಲ್ಲಿ ದಿವಿನ್ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ.
ಇದನ್ನೂ ಓದಿ:ಸಚಿನ್ ಪಂಚಾಳ ಮನೆಗೆ ಬಿಜೆಪಿ ನಾಯಕರ ಭೇಟಿ; ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ ಪ್ರಕರಣ
ಸೈನಿಕ ದಿವಿನ್​ ಸಾವಿನ ಮೂಲಕ ಸೇನಾ ವಾಹನ ಪ್ರಪಾತಕ್ಕೆ ಬಿದ್ದ ಕೇಸ್​ನಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಅದರಲ್ಲಿ ನಾಲ್ವರು ಕರ್ನಾಟಕದವರೇ ಆಗಿರೋದು ದುರ್ವೈವ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us