ಅಮೆರಿಕಾದಲ್ಲಿ ಮತ್ತೊಂದು ಭೀಕರ ವಿಮಾನ ದುರಂತ; ಬೆಂಕಿಯ ಕೆನ್ನಾಲಿಗೆಗೆ ಜನವಸತಿ ಪ್ರದೇಶ ಸರ್ವನಾಶ

author-image
Gopal Kulkarni
Updated On
ಅಮೆರಿಕಾದಲ್ಲಿ ಮತ್ತೊಂದು ಭೀಕರ ವಿಮಾನ ದುರಂತ; ಬೆಂಕಿಯ ಕೆನ್ನಾಲಿಗೆಗೆ ಜನವಸತಿ ಪ್ರದೇಶ ಸರ್ವನಾಶ
Advertisment
  • ಆಕಾಶದಿಂದ ಭೂಮಿಯತ್ತ ಸಾಗಿ ಅಪ್ಪಳಿಸಿದ ವಿಮಾನ
  • ವಿಮಾನ ಬಿದ್ದ ರಭಸಕ್ಕೆ ಆಗಸಕ್ಕೆ ಚಿಮ್ಮಿದ ಹೊಗೆ
  • ಬೆಂಕಿಯ ಕೆನ್ನಾಲಿಗೆಗೆ ಜನವಸತಿ ಪ್ರದೇಶ ಸರ್ವನಾಶ

ಅಮೆರಿಕಾದಲ್ಲಿ ಈಗ ಮತ್ತೊಂದು ಭೀಕರ ವಿಮಾನ ದುರಂತ ನಡೆದಿದೆ.ಅಂದಹಾಗೇ ಈ ಭೀಕರ ದುರಂತ ನಡೆದಿರೋದು ಅಮೆರಿಕಾದ ಫಿಲಡೆಲ್ಫಿಯಾದಲ್ಲಿ. ಗಗನದಲ್ಲಿ ಹಾರುತ್ತಿದ್ದ ಮೆಡಿಕಲ್​​ ಜೆಟ್​ವೊಂದು ಲಯ ತಪ್ಪಿ ಪತನಗೊಂಡ ಪರಿಣಾಮ ಧಗಧಗಸಿದೆ.
ಅಮೆರಿಕದಲ್ಲಿ ಮತ್ತೊಂದು ವಿಮಾನ ದುರಂತ

ಈ ವರ್ಷ ಆರಂಭವಾದಾಗಿನಿಂದ ಸರಣಿ ವಿಮಾನ ದುರಂತಗಳ ಸಂಖ್ಯೆ ಹೆಚ್ಚಾಗ್ತಿದೆ. ಮೊನ್ನೆ ಮೊನ್ನೆಯಷ್ಟೇ ಅಮೆರಿಕದ ವಾಷಿಂಗ್ಟನ್​​​ನಲ್ಲಿ ಸೇನಾ ಹೆಲಿಕಾಪ್ಟರ್​ಗೆ ಪ್ಯಾಸೆಂಜರ್​ ವಿಮಾನ ಆಕಾಶದಲ್ಲಿ ಡಿಕ್ಕಿಯಾಗಿ ಬರೋಬ್ಬರಿ 67 ಮಂದಿ ಸಾವನ್ನಪ್ಪಿದ್ರು. ಈ ಘಟನೆಯಿಂದಾಗಿ ಇಡೀ ಅಮೆರಿಕವೇ ಬೆಚ್ಚಿ ಬಿದ್ದಿತ್ತು. ಆದ್ರೀಗ ಈ ದುರಂತ ಮಾಸುವ ಮುನ್ನವೇ ಅಮೆರಿಕದಲ್ಲಿ ಮತ್ತೊಂದು ಪ್ಲೇನ್​ ಕ್ರ್ಯಾಶ್​ ಸಂಭವಿಸಿದೆ.
ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ಮೆಡಿಕಲ್​ ಜೆಟ್​​​​ ಪತಗೊಂಡಿದ್ದು.. ಭೂಮಿಗೆ ಅಪ್ಪಳಿಸುತ್ತಲೇ ಬೆಂಕಿ ಹೊತ್ತಿಕೊಂಡಿದೆ.. ವಿಮಾನ ಪತನಗೊಂಡ ಕೆಲವೇ ಕ್ಷಣಗಳಲ್ಲಿ ಬೃಹತ್​ ಬೆಂಕಿ ಉಂಡೆ ಆವರಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ.. ಜನವಸತಿ ಪ್ರದೇಶದ ಮೇಲೆ ವಿಮಾನ ಬಿದ್ದ ಕಾರಣ ಹಲವಾರು ಮನೆಗಳು ಹಾಗೂ ಕಾರುಗಳು ಸುಟ್ಟ ಭಸ್ಮವಾಗಿದೆ.

ಇದನ್ನೂ ಓದಿ: ವೈಟ್‌ಹೌಸ್‌ಗೆ ವಿಮಾನ ಬಂದು ಗುದ್ದಲು ಸಾಧ್ಯನಾ? ಅಮೆರಿಕಾ ಹೈಟೆಕ್‌ ಭದ್ರತಾ ವ್ಯವಸ್ಥೆಯ ಸೀಕ್ರೆಟ್​ ಇಲ್ಲಿದೆ!

ಪತನಗೊಂಡ ವಿಮಾನವು ಲಿಯರ್​ ಜೆಟ್​​ 55 ವಿಮಾನವಾಗಿದೆ.. ವಿಮಾನವು ಫಿಲಡೆಲ್ಫಿಯಾದಿಂದ ಸ್ಪ್ರಿಂಗ್‌ಫೀಲ್ಡ್ ಬ್ರಾನ್ಸನ್ ವಿಮಾನ ನಿಲ್ದಾಣಕ್ಕೆ ತೆರಳಬೇಕಿತ್ತು.. ಆದ್ರೆ, ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ರಾಡಾರ್‌ನಿಂದ ಕಣ್ಮರೆಯಾಗಿತ್ತು.. ಬಳಿಕ ವಿಮಾನ ನಿಲ್ದಾಣದಿಂದ 5 ಅಂತರದಲ್ಲಿ ವಿಮಾನ ಪತನಗೊಂಡಿದೆ.. ವಿಮಾನ ಬಿದ್ದ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ..

ವಿಮಾನದ ಅವಶೇಷಗಳಿಂದ ಶವಗಳನ್ನ ಹೊರತೆಗೆಯಲಾಗಿದ್ದು, ಮೃತಪಟ್ಟವರ ಗುರುತು ಪತ್ತೆ ಹಚ್ಚಲಾಗ್ತಿದೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಆ್ಯಂಬುಲೆನ್ಸ್​ಗಳು ಕರ್ತವ್ಯ ನಿರತವಾಗಿವೆ.

ಇದನ್ನೂ ಓದಿ:ಕೋಟಿ ಕೋಟಿ ರೂಪಾಯಿ ತಂದು ಕೊಡ್ತು ಬೈಬಲ್ ಒಳಗಿಟ್ಟ ಒಂದು ಚೀಟಿ; ಬಹುಮಾನ ಬಂದಿದ್ದು ನೋಡಿ ಮಹಿಳೆ ಶಾಕ್

ಅಮೆರಿಕಾದಲ್ಲಿ ಒಂದಾದ ಮೇಲೆ ಒಂದರಂತೆ ವಿಮಾನ ದುರಂತ ಸಂಭವಿಸುತ್ತಿದೆ.. ಸದ್ಯ ಈ ಪ್ರಕರಣವನ್ನ ಅಮೆರಿಕಾ ಸರ್ಕಾರವು ತನಿಖೆಗೆ ಆದೇಶಿಸಿದೆ.. ಆದ್ರೆ ವಿಮಾನ ಪತನದ ದೃಶ್ಯಗಳು ಮಾತ್ರ ಬೆಚ್ಚಿ ಬೀಳಿಸುವಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment