/newsfirstlive-kannada/media/post_attachments/wp-content/uploads/2024/07/Muda-1.jpg)
ಮೈಸೂರು ಮುಡಾ ಹಗರಣಗಳ ಗೂಡಾಗಿ ಪರಿಣಮಿಸುತ್ತಿದೆ. ನ್ಯೂಸ್​​ಫಸ್ಟ್ ಸ್ಟಿಂಗ್ ಆಪರೇಷನ್​ನಲ್ಲಿ ಅನೇಕ ಸತ್ಯಗಳು ಆಚೆ ಬಂದಿದೆ. ಜಮೀನು ಹೋಗದವರಿಗೂ ಕೂಡ ಮುಡಾದಿಂದ ಸೈಟ್ ಹಂಚಿಕೆಯಾಗಿದೆ. ನ್ಯೂಸ್​ಫಸ್ಟ್ ಮುಂದೆ ಮುಡಾ ಸೈಟ್​ಗಳ ಒಂದೊಂದೇ ಸತ್ಯ ಹಾಗೂ ಮುಡಾ ಮಾಜಿ ಆಯುಕ್ತ ನಟೇಶ್ ಅವರ ಅಸಲಿ ಮುಖವನ್ನು ತೆರೆದಿಟ್ಟಿದ್ದಾರೆ ಪ್ರಶಾಂತ್​. ನಟೇಶ್ ಹಾಗೂ ಸರ್ವೇ ಅಧಿಕಾರಿ ವೈ.ಟಿ.ವಿನೋದ್​ ಕುಮಾರ್ ಇಬ್ಬರೂ ಸೇರಿ ದಾಖಲೆಗಳಲ್ಇ ಗೊಲ್ಮಾಲ್ ಮಾಡಿ ಸೈಟ್ ಹಂಚಿಕೆ ಮಾಡುತ್ತಿದ್ದಾರೆ. ಜಮೀನು ಕಳೆದುಕೊಳ್ಳದವರಿಗೂ ಕೂಡ ಸೈಟ್ ಹಂಚಿದ್ದಾರೆ ಈ ಇಬ್ಬರು ಖದೀಮರು
/newsfirstlive-kannada/media/post_attachments/wp-content/uploads/2024/12/MUDU-STING-OPERATION.jpg)
ಭೂಮಿ ವಶಪಡಿಸಿಕೊಳ್ಳದಿದ್ದರೂ ಸಹ ಕೋಟ್ಯಾಂತ ರೂಪಾಯಿ ಮೌಲ್ಯದ ಸೈಟ್ ಹಂಚಿಕೆ ನಟೇಶ್​ರಿಂದ ನಡೆದಿದೆ. ಭೂಮಿಯನ್ನೇ ಕಳೆದುಕೊಳ್ಳದವರಿಗೆ 3 ಸೈಟ್ ಹಂಚಿಕೆ ಮಾಡಿದ್ದು ಬೆಳಕಿಗೆ ಬಂದಿದೆ. ಇದೇ ಭೂಮಿಗಾಗಿ ದಾಯಾದಿಗಳ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ಕೋರ್ಟ್​ನಲ್ಲಿ 11.1/2 ಗುಂಟೆ ಜಮೀನಿಗಾಗಿ ಕೇಸ್​ ನಡೀತಿದೆ. ಹೆಬ್ಬಾಳ ಸರ್ವೇ ನಂಬರ್ 271/2ರಲ್ಲಿರುವ 1.33 ಎಕರೆ ಜಮೀನು ಕೆಂಪೇಗೌಡ, ನಾರಾಯಣಗೌಡರ ಜಂಟಿ ಖಾತೆಯ ಜಮೀನು ಈ ಮೂರು ಜಮೀನುಗಳ ವ್ಯಾಜ್ಯ ಇನ್ನೂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಭೂಮಿಯನ್ನು ವಶಕ್ಕೆ ಪಡೆಯದೇ ಸುಳ್ಳ ದಾಖಲೆ ಸೃಷ್ಟಿಸಿ ಮುಡಾ ವಶಪಡಿಸಿಕೊಂಡಿರುವುದಾಗಿಯೂ ದಾಖಲೆಯನ್ನು ಸೃಷ್ಟಿ ಮಾಡಲಾಗಿದೆ.
ಇದನ್ನೂ ಓದಿ:ಪಕ್ಕಾ CM ಸಿದ್ದರಾಮಯ್ಯ ಅಭಿಮಾನಿ.. ಸುತ್ತ 10 ಹಳ್ಳಿಗೆ ಕಡಿಮೆ ದರದಲ್ಲಿ ಹಿಟ್ಟು ಬೀಸಿಕೊಡುವ ನಾಗಪ್ಪ
/newsfirstlive-kannada/media/post_attachments/wp-content/uploads/2024/12/MUDU-STING-OPERATION-1.jpg)
ಹೀಗೆ ದಾಖಲೆ ಸೃಷ್ಟಿಸಿ ಸೈಟ್ ಹಂಚಿಕೆ ಮಾಡಿದ್ದಾರೆ ಮಾಜಿ ಆಯುಕ್ತ ನಟೇಶ್. ನಾರಾಯಣ್​ಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಮೂರು ಸೈಟ್ ಮಂಜೂರು ಆಗಿವೆ. ಈ ಬಗ್ಗೆ ನ್ಯೂಸ್​ಫಸ್ಟ್​​ಗೆ ಮತ್ತೊಬ್ಬ ಜಂಟಿ ಖಾತೆದಾರರನ ಮಗನಿಂದಲೇ ಮಾಹಿತಿ ಸಿಕ್ಕಿದೆ. ಸ್ಟಿಂಗ್ ಆಪರೇಷನ್​ನಲ್ಲಿ ಕುಟುಂಬದ ಮತ್ತೊಬ್ಬ ಸದಸ್ಯನೂ ಕೂಡ ಸತ್ಯವನ್ನು ಒಪ್ಪಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us