ಮಂಡ್ಯ ಜಿಲ್ಲೆಯ ವಿಸಿ ನಾಲೆ ಬಳಿ ಮತ್ತೊಂದು ದುರಂತ.. ಅಸಲಿಗೆ ನಡೆದಿದ್ದು ಏನು?

author-image
Gopal Kulkarni
Updated On
ಮಂಡ್ಯ ಜಿಲ್ಲೆಯ ವಿಸಿ ನಾಲೆ ಬಳಿ ಮತ್ತೊಂದು ದುರಂತ.. ಅಸಲಿಗೆ ನಡೆದಿದ್ದು ಏನು?
Advertisment
  • ಮಂಡ್ಯದಲ್ಲಿ ನಿಲ್ಲದ ವಿಸಿ ನಾಲೆಯ ದುರಂತಗಳ ಸರಣಿ
  • ಕಾರು ಪಲ್ಟಿ, ಹೋಯ್ತು ಇಬ್ಬರ ಜೀವ, ಮತ್ತೋರ್ವ ನಾಪತ್ತೆ
  • ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಸ್ಥಳೀಯರು

ಮಂಡ್ಯದ ವಿಸಿ ನಾಲೆ ಬಳಿ ಮತ್ತೊಂದು ದುರಂತ ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿಗೆ ನಾಲೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಓರ್ವನನ್ನು ರಕ್ಷಿಸಲಾಗಿದ್ದು ಮತ್ತೋರ್ವ ನಾಪತ್ತೆಯಾಗಿದ್ದಾನೆ.. ಸರಣಿ ದುರಂತಗಳಿಂದ ವಿಸಿ ನಾಲೆ ಸಾವಿನ ನಾಲೆ ಎನಿಸಿದ್ದು ಎಚ್ಚೆತ್ತುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ನಾಲೆ ದಡದ ಮೇಲೆ ನಿಂತು ಪರಿಶೀಲಿಸ್ತಿದ್ದರು ಅಧಿಕಾರಿಗಳು. ಮತ್ತೊಂದೆಡೆ ರಸ್ತೆಯಲ್ಲಿ ಕುಳಿತು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದರು ಜನರು. ಇದು ಅಪಘಾತಗಳ ಹಾಟ್​ಸ್ಪಾಟ್​ ಎಂದೇ ಅಪಖ್ಯಾತಿಗೆ ಒಳಗಾಗಿರುವ ಮಂಡ್ಯದ ವಿ.ಸಿ ನಾಲೆಯ ಬಳಿ ಕಂಡು ಬಂದಂತಹ ದೃಶ್ಯಗಳು..
ಮಂಡ್ಯ ಜಿಲ್ಲೆಯ ವಿಸಿ ನಾಲೆಯಲ್ಲಿ ಮತ್ತೊಂದು ದುರಂತ

ಇದನ್ನೂ ಓದಿ:ರಾಜ್ಯದ 5 ಮಂದಿ ಸಾಧಕರಿಗೆ ವಿ.ಪಿ ಸಿಂಗ್ ಪ್ರಶಸ್ತಿ; ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ ಸಂಘ ಪ್ರಕಟ

ಮಂಡ್ಯದ ತಿಬ್ಬನಹಳ್ಳಿ ಬಳಿ ಇರುವ ವಿ.ಸಿ ನಾಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಪಲ್ಟಿಯಾದ ಪರಿಣಾಮ ಇಬ್ಬರು ಇಬ್ಬರು ಜೀವ ಕಳೆದುಕೊಂಡಿದ್ದಾರೆ. ಕಾರಲ್ಲಿದ್ದ ನಾಲ್ವರು ಮಂಡ್ಯದ ಹಾಲಹಳ್ಳಿ ಸ್ಲಂ ನಿವಾಸಿಗಳು ಎನ್ನಲಾಗಿದೆ. ಕಾರು ಮಾಲೀಕ ಫಯಾಜ್@ಬ್ಯಾಟರಿ, ನಯಾಜ್​, ಅಸ್ಲಂ ಪಾಷ, ಪೀರ್ ಖಾನ್ ನಾಲ್ವರು ಕಾರಿನಲ್ಲಿ ಮೀನು ಹಿಡಿಯಲು ಹೋಗಿದ್ದರು. ಆದ್ರೆ ವಾಪಸ್​ ಆಗುವ ವೇಳೆ, ತಿಬ್ಬನಹಳ್ಳಿ ಬಳಿ ಕಾರು ನಿಯಂತ್ರಣ ತಪ್ಪಿ ನಾಲೆಗೆ ಉರುಳಿ ಬಿದ್ದಿದೆ.

publive-image

ನಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ, ಕಾರು ಸಂಪೂರ್ಣ ಮುಳುಗಿದೆ. ಮೊದಲು ಕಾರು ಮಾಲೀಕ ಫಯಾಜ್​ ಮೃತದೇಹ ಪತ್ತೆ ಆಗಿದ್ದು, ನಯಾಜ್​ ಎಂಬಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ನೀರಿನಲ್ಲಿದ್ದ ಕಾರನ್ನು ಮೇಲೆತ್ತಲಾಗಿದ್ದು, ಕಾರಿನಲ್ಲಿ ಮತ್ತೋರ್ವನ ಮೃತದೇಹ ಪತ್ತೆ ಆಗಿದೆ.
ನೂರಾರು ಕಿಲೋ ಮೀಟರ್​ ಹರಿಯುವ ವಿಸಿ ನಾಲೆಗೆ ಸರಿಯಾದ ರೀತಿ ತಡೆಗೋಡೆಯೇ ಇಲ್ಲ. ಇದೇ ಕಾರಣಕ್ಕೆ ಪದೇ ಪದೇ ಅಪಘಾತಗಳು, ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಹೀಗಿದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಅಂತ ಸ್ಥಳೀಯರು ಕಿಡಿಕಾರಿದ್ದಾರೆ.

publive-image

ಇದನ್ನೂ ಓದಿ:ಇನ್ಮುಂದೆ ನಾನು ಸುಮ್ಮನಿರಲ್ಲ.. ಪಕ್ಷ ಬಿಡುವ ಬಗ್ಗೆ ಶ್ರೀರಾಮುಲು ಹೇಳಿದ್ದೇನು? ಬಿಜೆಪಿಗೆ ಖಡಕ್ ಎಚ್ಚರಿಕೆ!

ಇನ್ನು ನೀರಿನಲ್ಲಿ ಕೊಚ್ಚಿಹೋಗಿರುವ ಮತ್ತೋರ್ವ ಪೀರ್​ಖಾನ್‌ಗಾಗಿ ಹುಡುಕಾಟ ಮುಂದುವರಿದೆ. ಕತ್ತಲಾದ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಅಗ್ನಿಶಾಮಕ ಸಿಬ್ಬಂದಿ ಇಂದು ನಾಲೆಯಲ್ಲಿ ನೀರು ಕಮ್ಮಿಯಾದ ಬಳಿಕ ಕಾರ್ಯಾಚರಣೆ ಮುಂದುವರಿಸಲಿದ್ದಾರೆ.

ಹತ್ತಾರು ಹಳ್ಳಿಗಳ ಶಾಲಾ ಮಕ್ಕಳು ಇದೇ ರಸ್ತೆಯಲ್ಲೇ ಓಡಾಡ್ತಾರೆ. ಹೀಗಾಗಿ ದೊಡ್ಡ ದುರಂತ ಸಂಭವಿಸುವುದಕ್ಕೂ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ತಡೆಗೋಡೆಯನ್ನೋ ಅಥವಾ ರಸ್ತೆ ಅಗಲೀಕರಣವನ್ನ ಮಾಡಬೇಕಿದೆ ಇನ್ಮುಂದಾದ್ರೂ ದುರಂತಗಳನ್ನು ತಪ್ಪಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment