/newsfirstlive-kannada/media/post_attachments/wp-content/uploads/2024/12/Modi-parliment.jpg)
ಪ್ರಧಾನಿ ಮೋದಿ ಸರ್ಕಾರ ದೇಶದಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ನೀತಿ ಜಾರಿಯಲ್ಲಿ ಮೊದಲ ಹೆಜ್ಜೆ ಇರಿಸಿದೆ. ಕಳೆದ ವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಇಂದು ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡಿಸಲು ಸಜ್ಜಾಗಿದೆ.
145 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದೂಸ್ತಾನ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ.. ಭಾರತದಲ್ಲಿ ಏಕಕಾಲಕ್ಕೆ ವಿಧಾನಸಭೆ, ಲೋಕಸಭೆ ಚುನಾವಣೆ ನಡೆಸುವುದು ಬಹಳ ಮಹತ್ವದ ನಿರ್ಧಾರ.. ಈ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲಿ ಪ್ರಧಾನಿ ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
2034ಕ್ಕೆ ಜಾರಿ ಸಾಧ್ಯತೆ
ಪ್ರಧಾನಿ ಮೋದಿ ಸರ್ಕಾರ ಕ್ಯಾಬಿನೆಟ್​​​ನಲ್ಲಿ ಒಪ್ಪಿಗೆ ಪಡೆದಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯನ್ನು ಇಂದು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿದೆ. ಲೋಕಸಭೆಯಲ್ಲಿ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಮಸೂದೆ ಮಂಡಿಸಲಿದ್ದಾರೆ. ಎರಡೂ ಸದನಗಳಲ್ಲಿ ಅನುಮೋದನೆ ಪಡೆದು ಬಳಿಕ ರಾಷ್ಟ್ರಪತಿ ಅಂಕಿತ ಬಿದ್ರೆ ಅದು ಕಾಯ್ದೆಯಾಗಲಿದೆ. ಈಗ ಕಾಯ್ದೆ ಜಾರಿ ಆದ್ರೂ, ದೇಶದಲ್ಲಿ 2034ರ ಇಸವಿ ವೇಳೆಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಅಂತ ಗೊತ್ತಾಗಿದೆ..
ಇದನ್ನೂ ಓದಿ:ಪವಿತ್ರಾ ಗೌಡ ಇವತ್ತಾದ್ರು ಹೊರ ಬರ್ತಾರಾ.. ದರ್ಶನ್​ ಸೇರಿ ಯಾರು ಯಾರು ರಿಲೀಸ್ ಆಗಿದ್ದಾರೆ?
2034ಕ್ಕೆ ಒಂದು ಚುನಾವಣೆ!?
- ದೇಶದಲ್ಲಿ 2034ಕ್ಕೆ ಒನ್ ನೇಷನ್, ಒನ್ ಎಲೆಕ್ಷನ್ ಕಾಯ್ದೆ ಜಾರಿ?
- 2029ರಲ್ಲಿ ಅಸೆಂಬ್ಲಿ, ಲೋಕಸಭೆ ಎಲೆಕ್ಷನ್ ಒಟ್ಟಿಗೆ ಸಾಧ್ಯತೆ ಇಲ್ಲ
- 2034ಕ್ಕೆ ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ಸಾಧ್ಯತೆ
- ಅಪಾಯಿಂಟ್​​ಮೆಂಟ್ ದಿನಾಂಕದಿಂದ ಕಾಯಿದೆ ಜಾರಿಯಾಗಲಿದೆ
- ರಾಷ್ಟ್ರಪತಿ ಅಪಾಯಿಂಟ್​​ಮೆಂಟ್​ ದಿನ ನಮೂದಿಸಿದ್ರೆ ಕಾಯ್ದೆ ಜಾರಿ
- ಮಸೂದೆಯನ್ನ ವ್ಯಾಪಕ ಪರಿಶೀಲನೆಗಾಗಿ ಜೆಪಿಸಿಗೆ ಶಿಫಾರಸು ಸಾಧ್ಯತೆ
- ಜೆಪಿಸಿಗೆ ಶಿಫಾರಸು ಮಾಡುವಂತೆ ಸ್ಪೀಕರ್​ಗೆ ಮನವಿ ಮಾಡುವ ಸಾಧ್ಯತೆ
ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಉನ್ನತ ಮಟ್ಟದ ಸಮಿತಿ ಕಳೆದ ಮಾರ್ಚ್​ನಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.. ಒಟ್ಟಾರೆ ಒನ್ ನೇಷನ್ ಒನ್ ಎಲೆಕ್ಷನ್ ಸಂವಿಧಾನದ 129ನೇ ತಿದ್ದುಪಡಿ ಮಸೂದೆ-2024 ಮಂಡಿಸಲಿದ್ದು ಲೋಕಸಭೆಯಲ್ಲಿ ಎನ್​​ಡಿಎಗೆ ಬಹುಮತ ಇರುವ ಕಾರಣ ಸುಲಭವಾಗಿ ಅಂಗೀಕಾರ ಪಡೆಯಲಿದೆ. ಆದ್ರೆ ರಾಜ್ಯಸಭೆಯಲ್ಲಿ ಮಸೂದೆ ಒಪ್ಪಿಗೆ ಸಿಗುತ್ತಾ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಮಹಾ ಕುಂಭಮೇಳ ಕೇವಲ ಒಂದು ಉತ್ಸವವಲ್ಲ; ಇದರ ಆದಾಯ ಬರೋಬ್ಬರಿ 25,000 ಕೋಟಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us