/newsfirstlive-kannada/media/post_attachments/wp-content/uploads/2024/06/RAHUL_GANDHI_MODI.jpg)
ಮೋದಿ ಸರ್ಕಾರ ಇಂದು ಲೋಕಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆಯ ಬಹುನಿರೀಕ್ಷಿತ ಮಸೂದೆಯನ್ನು ಮಂಡನೆ ಮಾಡಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್​ ಲೋಕಸಭೆ ಕಲಾಪದ ವೇಳೆ ಮಸೂದೆಯನ್ನು ಮಂಡಿಸಿದ್ದಾರೆ. ಈ ಒಂದು ಮಸೂದೆ ಮಂಡನೆಯಲ್ಲಿ ಸಂವಿಧಾನಕ್ಕೆ 129ನೇ ತಿದ್ದುಪಡಿಯೊಂದಿಗೆ ಇದು ಒಂದು ಬಿಲ್ ಒಂದು ಕೇಂದ್ರಾಡಳಿತ ಪ್ರದೇಶ ಕಾನೂನು ಬಿಲ್​​ಗೆ ತಿದ್ದುಪಡಿ ಮಾಡಲಾಗಿದೆ. ಸದ್ಯ ಮಸೂದೆಯನ್ನು ಮಂಡನೆ ಮಾಡಿರುವ ಮೋದಿ ಸರ್ಕಾರ ತನ್ನ ಎಲ್ಲಾ ಲೋಕಸಭಾ ಸದಸ್ಯರಿಗೆ ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ.
/newsfirstlive-kannada/media/post_attachments/wp-content/uploads/2024/12/ONE-NATION-ONE-ELECTION.jpg)
ಈ ಒಂದು ಕಾನೂನು ಚುನಾವಣಾ ಸುಧಾರಣೆಯನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಇಡೀ ಚುನಾವಣಾ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಈ ಒಂದು ಹೊಸ ಕಾನೂನು ತರಲು ಮೋದಿ ಸರ್ಕಾರ ಸಜ್ಜಾಗಿದೆ. ಈ ಒಂದು ಹೊಸ ಮಸೂದೆಯ ಮಂಡನೆಯೊಂದಿಗೆ ಸಂವಿಧಾನದಕ್ಕೆ ಯಾವುದೇ ದಕ್ಕೆ ಬರುವುದಿಲ್ಲ, ಸಂವಿಧಾನದ ಮೂಲಾಶಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಮೇಘ್ವಾಲ್ ಹೇಳಿದ್ದಾರೆ. ಸದ್ಯ ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದ್ದು ನಂತರ ಅದು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿ ಕೊಡಲಾಗುತ್ತದೆ.
ಇದನ್ನೂ ಓದಿ:ಮೋದಿ ಸರ್ಕಾರ ಅಂದುಕೊಂಡಂತೆಯಾದರೆ.. ‘ಒಂದು ದೇಶ, ಒಂದು ಚುನಾವಣೆ’ ಯಾವಾಗ ಜಾರಿ ಬರುತ್ತೆ..?
ಒಂದು ದೇಶ, ಒಂದು ಚುನಾವಣೆ ಮಸೂದೆ ಸಚಿವ ಸಂಪುಟದ ಒಪ್ಪಿಗೆ ಪಡೆದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಇದನ್ನು ಜಾಯಿಂಟ್ ಪಾರ್ಲಿಮೆಂಟರಿ ಕಮೀಟಿಗೆ ಕಳುಹಿಸಲು ಸಲಹೆ ನೀಡಿದ್ದು. ಅಲ್ಲಿ ಇದರ ಬಗ್ಗೆ ವಿಸ್ತಾರವಾಗಿ ಚರ್ಚೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈಗಾಗಲೇ ಒಂದು ರಾಷ್ಟ್ರ ಒಂದು ಚುನಾವಣೆಯ ಮಸೂದೆಗೆ ವಿಪಕ್ಷಗಳು ಅಪಸ್ವರ ಎತ್ತಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಈ ಬಿಲ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ. ಇದು ಜನರ ದಾರಿ ತಪ್ಪಿಸುದವ ಉದ್ದೇಶದಿಂದ ಮಂಡನೆಯಾಗುತ್ತಿರುವ ಮಸೂದೆ ಎಂದು ಆರಂಭದಿಂದಲೂ ಈ ಒಂದು ಬಿಲ್​ಗೆ ವಿರೋದವನ್ನು ವ್ಯಕ್ತಪಡಿಸಿವೆ.
ಇದನ್ನೂ ಓದಿ:ಮಧ್ಯರಾತ್ರಿವರೆಗೆ ವಿಧಾನಸಭೆ ಕಲಾಪ ನಡೆಸಿದ ಸ್ಪೀಕರ್ ಯು.ಟಿ ಖಾದರ್.. ಏನ್ ಚರ್ಚೆ ಆಗಿದೆ?
ಈಗಾಗಲೇ ಈ ಒಂದ ಮಸೂದೆಗೆ ಒಟ್ಟು 32 ಪಕ್ಷಗಳು ಪರವಾಗಿ ಧ್ವನಿಯೆತ್ತಿದರೆ, 15 ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಒಟ್ಟು 269 ಸಂಸದರು ಈ ಮಸೂದೆಯ ಪರವಾಗಿ ಮತ ಹಾಕಿದ್ದಾರೆ. 198 ಜನರ ಎಂಪಿಗಳು ಈ ಮಸೂದೆಯ ವಿರುದ್ಧವಾಗಿ ಮತ ಹಾಕಿದ್ದಾರೆ.
ಈ ಒಂದು ಮಸೂದೆಯು ಆರ್ಟಿಕಲ್ 82(ಎ)ಯನ್ನು ಒಳಗೊಂಡಿದ್ದು, ಆರ್ಟಿಕಲ್ 83, 172 ಹಾಗೂ 327ಕ್ಕೆ ತಿದ್ದುಪಡಿ ಮಾಡುವ ಮೂಲಕ ಲೋಕಸಭೆಯಲ್ಲಿ ಮಂಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us