/newsfirstlive-kannada/media/post_attachments/wp-content/uploads/2024/12/BDR_THEAFT_1.jpg)
ಒಂದೇ ರಾತ್ರಿಯಲ್ಲಿ ಒಂಭತ್ತು ಮನೆಗೆ ಕನ್ನ. ಗ್ರಾಮಗಳಿಗೆ ನುಗ್ಗಿದ್ದ ದರೋಡೆಕೋರರನ್ನ ಕಂಡು ಇಡೀ ಊರಿನ ಜನರು ಫುಲ್ ಶಾಕ್ ಆಗಿದ್ದಾರೆ. ಎರಡು ಬೈಕ್ ಮೇಲೆ ಬಂದಿದ್ದ ಆರು ಜನರ ಗ್ಯಾಂಗ್ ಬೀದರ್ ಪೊಲೀಸರ ನಿದ್ದೆಗೆಡಿಸಿದ್ದಾರೆ. ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿ ಮನೆಗಳನ್ನ ದೋಚಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಮನೆ ಬೀಗ ಹಾಕಿ ಊರಿಗೆ ಹೋಗ್ತೀರಾ?. ಹೀಗೆ ಮನೆಗೆ ಬೀಗ ಹಾಕಿ ಊರಿಗೆ ಹೋಗೋಕು ಮುನ್ನ ಹುಷಾರ್. ಬೀಗ ಹಾಕಿ ದುಡಿಯೋಕೆ ಅಂತಾ ವಲಸೆ ಹೋಗಿರುವ ಮನೆಗಳನ್ನೇ ಖದೀಮರ ಗ್ಯಾಂಗ್‌ವೊಂದು ಟಾರ್ಗೆಟ್ ಮಾಡಿದೆ. ಟಾರ್ಗೆಟ್ ಮಾಡಿದ್ದಷ್ಟೇ ಅಲ್ಲದೇ, ಒಂದಲ್ಲ, ಎರಡಲ್ಲ, ಬರೋಬ್ಬರಿ 9 ಮನೆಗಳಿಗೆ ಖದೀಮರು ಕನ್ನ ಹಾಕಿದ್ದಾರೆ.
3 ಮನೆಗಳಲ್ಲಿದ್ದ ₹3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳ್ಳತನ
ಸರಣಿ ಕಳ್ಳತನಕ್ಕೆ ಬೀದರ್ನ ಬಸವಕಲ್ಯಾಣ ತಾಲೂಕಿನ ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಒಂದೇ ರಾತ್ರಿ ಉಮ್ಮಾಪೂರ, ಕೊಂಗೇವಾಡಿ, ಚಂಡಕಾಪುರ ಗ್ರಾಮದಲ್ಲಿ 9 ಮನೆಗಳನ್ನ ದೋಚಿದ್ದಾರೆ. ಎರಡು ಬೈಕ್‌ಗಳಲ್ಲಿ ಗ್ರಾಮಕ್ಕೆ ನುಗ್ಗಿದ 6 ಜನರ ಗ್ಯಾಂಗ್ ಬರೋಬ್ಬರಿ 9 ಮನೆಗಳನ್ನ ದೋಚಿ ಮೂರು ಮನೆಗಳಲ್ಲಿದ್ದ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ. ಇನ್ನು ದರೋಡೆ ಗ್ಯಾಂಗ್ ಗ್ರಾಮಕ್ಕೆ ನುಗ್ಗಿದ್ದಕ್ಕೆ ಬೆಚ್ಚಿಬಿದ್ದಿರುವ ಗ್ರಾಮಸ್ಥರು ಊರಿನಲ್ಲಿ ಡಂಗೂರ ಸಾರಿ, ಎಚ್ಚರಿಕೆ ಸಂದೇಶ ಸಾರುತ್ತಿದ್ದಾರೆ.
ಇದನ್ನೂ ಓದಿ:ಬೆನ್ನು ನೋವು ಮರೆತ ದರ್ಶನ್.. ನೆಚ್ಚಿನ ಫಾರ್ಮ್ಹೌಸ್ನಲ್ಲಿ ದಾಸ ಫುಲ್ ರಿಲ್ಯಾಕ್ಸ್
ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ಖದೀಮರು ಮನೆ ಬೀಗ ಮುರಿದು ಕಳ್ಳತನ ಮಾಡಿದ್ದಲ್ಲದೇ, ಮನೆಗೆ ಹೊಸ ಬೀಗ ಜಡಿದು ಪರಾರಿಯಾಗಿದ್ದಾರೆ. ಉಮ್ಮಾಪುರ ಗ್ರಾಮದಲ್ಲಿ 2.77 ಲಕ್ಷ ರೂಪಾಯಿ, ಕೊಂಗೇವಾಡಿ ತಾಂಡದಲ್ಲಿ 1.10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕದ್ದು ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಖದೀಮರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮನೆಗೆ ಬೀಗ ಹಾಕಿ ದಿನ, ವಾರ, ತಿಂಗಳಗಟ್ಟಲೇ ಮನೆ ಬಿಟ್ಟು ಹೋಗುವವರು ನಮಗೆ ಮಾಹಿತಿ ನೀಡಿ ಅಂತ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಆದರು ಬೀದರ್ ಜಿಲ್ಲೆಯಾದ್ಯಂತ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಪೊಲೀಸರು ಹಾಗೂ ಗ್ರಾಮಸ್ಥರ ನಿದ್ದೆಗೆಡಿಸಿದಂತೂ ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ