ಸಾವಿನಲ್ಲಿ ಒಂದಾದ ಅಣ್ಣ, ತಂಗಿ.. ರೈಲಿಗೆ ತಲೆ ಕೊಟ್ಟು ದುರಂತ ಅಂತ್ಯ; ಕಾರಣವೇನು?

author-image
admin
Updated On
ಸಾವಿನಲ್ಲಿ ಒಂದಾದ ಅಣ್ಣ, ತಂಗಿ.. ರೈಲಿಗೆ ತಲೆ ಕೊಟ್ಟು ದುರಂತ ಅಂತ್ಯ; ಕಾರಣವೇನು?
Advertisment
  • ಬೆಳಗಿನ ಜಾವ ರೈಲಿಗೆ ತಲೆ ಕೊಟ್ಟು ಅಣ್ಣ, ತಂಗಿ ಇಬ್ಬರು ಸಾವು
  • ರೈಲ್ವೆ ಹಳಿ ಮೇಲೆ ಅಣ್ಣ, ತಂಗಿಯ ರುಂಡ ಬೇರೆ, ಬೇರೆಯಾದ ಶವ ಪತ್ತೆ
  • ಮಾನಸಿಕವಾಗಿ ನೊಂದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಚಿಕ್ಕಬಳ್ಳಾಪುರ: ರೈಲಿಗೆ ತಲೆ ಕೊಟ್ಟು ಅಣ್ಣ, ತಂಗಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ರೈಲ್ವೆ ಹಳಿ ಮೇಲೆ ಅಣ್ಣ, ತಂಗಿಯ ರುಂಡ ಬೇರೆ, ಬೇರೆಯಾಗಿರುವ ಶವ ಪತ್ತೆಯಾಗಿದೆ.

ಪ್ರಭು (25) ಹಾಗೂ ನವ್ಯ (23) ಮೃತ ಅಣ್ಣ, ತಂಗಿಯರು. ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಪ್ರೇಮನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಪೋಷಕರೇ ಎಚ್ಚರ.. ಮಕ್ಕಳನ್ನು ಆಟ ಆಡಲು ಬಿಟ್ಟು ಯಾಮಾರಿದ್ರೆ ಅಪಾಯ; ಈ ವಿಡಿಯೋ ನೋಡಿ! 

ಇತ್ತೀಚೆಗೆ ಪ್ರಭು ಹಾಗೂ ನವ್ಯ ಅವರ ತಾಯಿ ತೀರಿಕೊಂಡಿದ್ದರು. ಮಾನಸಿಕವಾಗಿ ಮನನೊಂದ ಅಣ್ಣ, ತಂಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment