newsfirstkannada.com

3 ದೇವಾಲಯಗಳಿಗೆ ಮೂವರು ಕಳ್ಳರಿಂದ ಕನ್ನ; ತಪ್ಪಿಸಿಕೊಳ್ಳುವಾಗ ಒಬ್ಬ ತಗ್ಲಾಕೊಂಡ; ಮುಂದೇನಾಯ್ತು?

Share :

Published February 12, 2024 at 2:03pm

    ಕಳ್ಳತನ ಮಾಡಲೆಂದೇ ಬೈಕ್​ನಲ್ಲಿ ಗ್ರಾಮಕ್ಕೆ ಬಂದಿದ್ದ ಖದೀಮರು

    3 ದೇವಸ್ಥಾನ ಕಳ್ಳತನ ಮಾಡಿ ಎಸ್ಕೇಪ್ ಆಗುವಾಗ ಓರ್ವ ಸಿಕ್ಕಿಬಿದ್ದ

    ಹುಸೇನ್ ಎಂಬ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು

ರಾಯಚೂರು: ಮೂವರು ಖದೀಮರು ಸೇರಿಕೊಂಡು ಮೂರು ದೇವಾಲಯಗಳನ್ನು ಕಳ್ಳತನ ಮಾಡಿರುವ ಘಟನೆ ದೇವದುರ್ಗ ತಾಲೂಕಿನ ನಾಗೋಲಿ ಗ್ರಾಮದಲ್ಲಿ ನಡೆದಿದೆ. ಕಳ್ಳತನ ಮಾಡಿ ಪರಾರಿಯಾಗುವಾಗ ಮೂವರ ಪೈಕಿ ಓರ್ವ ಕಳ್ಳ ಗ್ರಾಮಸ್ಥರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹುಸೇನ್ ಸಿಕ್ಕಿರುವ ಕಳ್ಳ. ರಾತ್ರಿ 12ರ ಸುಮಾರಿಗೆ ನಾಗೋಲಿ ಗ್ರಾಮದ ಮೂರು ದೇವಾಲಯಗಳನ್ನು ಹುಸೇನ್ ಮತ್ತು ಆತನ ಸ್ನೇಹಿತರು ಸೇರಿ ಕಳ್ಳತನ ಮಾಡಿದ್ದರು. ಕದ್ದ ವಸ್ತುಗಳನ್ನು ತೆಗೆದುಕೊಂಡು ಮೂವರು ಓಡಿ ಹೋಗುವಾಗ ಗ್ರಾಮಸ್ಥರು ಕೈಗೆ ಓರ್ವ ಕಳ್ಳ ತಗ್ಲಾಕೊಂಡಿದ್ದು ಇನ್ನಿಬ್ಬರು ತಪ್ಪಿಸಿಕೊಂಡು ಹೋಗಿದ್ದಾರೆ. ಇವರು ಕಳ್ಳತನ ಮಾಡಲೆಂದೇ ಬೈಕ್​​ನಲ್ಲಿ ಬಂದಿದ್ದರು.

ಸಿಕ್ಕ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಮನಬಂದಂತೆ ಧಳಿಸಿದ್ದಾರೆ. ಈ ವೇಳೆ ಯಾಱರು ಕಳ್ಳತನ ಮಾಡಲು ಬಂದಿದ್ದು ಎಂದು ಗ್ರಾಮಸ್ಥರು ಕೇಳಿದರೆ, ಇನ್ನೊಬ್ಬ ಅಲ್ಲಿ ಗದ್ದೆಯಲ್ಲಿ ಇರುತ್ತಾನೆಂದು ಹೇಳಿದ್ದಾನೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ದೇವದುರ್ಗ ಪೊಲೀಸರು ಪರಿಶೀಲನೆ ಕೈಗೊಂಡಿದ್ದು ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ದೇವಾಲಯಗಳಿಗೆ ಮೂವರು ಕಳ್ಳರಿಂದ ಕನ್ನ; ತಪ್ಪಿಸಿಕೊಳ್ಳುವಾಗ ಒಬ್ಬ ತಗ್ಲಾಕೊಂಡ; ಮುಂದೇನಾಯ್ತು?

https://newsfirstlive.com/wp-content/uploads/2024/02/RCR_TEMPLE_THEAFT.jpg

Load More