ಹಿಟಾಚಿ ಮೇಲೆ ಉರುಳಿಬಿದ್ದ ಹೆಬ್ಬಂಡೆ.. ಕಲ್ಲುಕ್ವಾರಿಯಲ್ಲಿ ದಾರುಣ ಘಟನೆ

author-image
Ganesh
Updated On
ಹಿಟಾಚಿ ಮೇಲೆ ಉರುಳಿಬಿದ್ದ ಹೆಬ್ಬಂಡೆ.. ಕಲ್ಲುಕ್ವಾರಿಯಲ್ಲಿ ದಾರುಣ ಘಟನೆ
Advertisment
  • ದುರ್ಘಟನೆಯಲ್ಲಿ ಹಿಟಾಚಿ ಆಪರೇಟರ್ ಸಾವು
  • ನಿರಂತರ ಮಳೆಯಿಂದಾಗಿ ಗಣಿಯಲ್ಲಿ ಅನಾಹುತ
  • ದುರ್ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಕೋಲಾರ: ಕಲ್ಲುಗಣಿಗಾರಿಕೆ ವೇಳೆ ಅವಘಡ ನಡೆದಿದ್ದು, ಹಿಟಾಚಿ ಮೇಲೆ ಕಲ್ಲು ಬಂಡೆ ಬಿದ್ದು ಆಪರೇಟರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕು ಹಳೇಪಾಳ್ಯ ಬಳಿ ನಡೆದಿದೆ. ಪ್ರವೀಣ್ ಮೃತ ವ್ಯಕ್ತಿ.

ಪ್ರವೀಣ್, ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದವರು. ಮಂಜುನಾಥ್ ಎಂಬುವವರಿಗೆ ಗಣಿ ಪ್ರದೇಶ ಮಂಜೂರಾಗಿದೆ. ಕಳೆದ ರಾತ್ರಿ ಸುರಿದ ಮಳೆಯ ಪರಣಾಮ ಇಟಾಚಿ ಮೇಲೆ ದೊಡ್ಡ ಕಲ್ಲು ಬಂಡೆ ಬಿದ್ದಿದೆ ಎನ್ನಲಾಗಿದೆ. ದುರ್ಘಟನಾ ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ಸ್ಟೇಷನ್‌ನಲ್ಲಿ ದರ್ಶನ್‌ ನಡೆ ನುಡಿ ಹೇಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment