/newsfirstlive-kannada/media/post_attachments/wp-content/uploads/2025/01/CAVE-MAN-AMIRKHAN.jpg)
ಮಂಗಳವಾರ ಮುಂಬೈನ ಜನಸಂದಣಿ ಬೀದಿಯಲ್ಲಿ ಒಬ್ಬ ವಿಚಿತ್ರವಾದ ವ್ಯಕ್ತಿ ಓಡಾಡುತ್ತಿದ್ದ. ಯಾವುದೋ ಗುಹೆಯಿಂದ ಎದ್ದು ಬಂದವನಂತೆ ಆತನ ವೇಷಭೂಷಣಗಳು ಇದ್ದುವ. ಬೀದಿಯಲ್ಲಿ ಓಡಾಡುವರೆಲ್ಲಾ ಅವರನ್ನು ವಿಚಿತ್ರವಾಗಿಯೇ ನೋಡುತ್ತಿದ್ದರು. ಅವನನ್ನು ನೋಡಿ ಕೊಂಚ ವಿಚಲಿತರು ಕೂಡ ಆಗಿದ್ದರು
ಆರಂಭದಲ್ಲಿ ಆ ವ್ಯಕ್ತಿ ಯಾರು ಎಂದು ಗುರುತಿಸುವಲ್ಲಿ ಎಲ್ಲರೂ ವಿಫಲರಾದರೂ. ವಿಚಿತ್ರ ಮನುಷ್ಯ ಮುಖದ ತುಂಬೆಲ್ಲಾ ಗಂಟು ಕಟ್ಟಿಕೊಂಡಿರುವಂತಹ ಗಡ್ಡ. ತಲೆಯ ತುಂಬಾ ಹರಡಿಕೊಂಡಿರುವ ಒಟರಟೊರಟು ಕೂದಲು. ಇವೆಲ್ಲವನ್ನು ನೋಡಿ. ಇವರು ಯಾರೂ ಹಿಮಾಲಯದಿಂದಲೋ, ಇಲ್ಲವೇ ಯಾವುದಾದ್ರೂ ಕಾಡಿನಲ್ಲಿಯೋ, ಗುಹೆಯಲ್ಲಿಯೋ ಬಹಳಷ್ಟು ವರ್ಷ ವಾಸ ಮಾಡಿ ಈಗ ನಗರಕ್ಕೆ ಬಂದಿರಬಹುದು ಎಂದುಕೊಂಡಿದ್ದರು. ಆದ್ರೆ ತೆರೆ ಹಿಂದಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆದಾಗಲೇ ಇಡಿ ಸಿನಿಮಾ ಅಭಿಮಾನಿಗಳ ಜಗತ್ತು ಬೆಚ್ಚಿ ಬಿದ್ದಿತ್ತು. ಹಾಗೆ ತಲೆ ಕೂದಲು ಬಿಟ್ಟುಕೊಂಡು, ಕೆಟ್ಟದಾಗಿ ಗಡ್ಡವಿಟ್ಟುಕೊಂಡು ಮೈಮೇಲೆ ವಿಚಿತ್ರ ಉಡುಗೆಯನ್ನುಟ್ಟುಕೊಂಡು ಮುಂಬೈ ಬೀದಿ ಬೀದಿಯಲ್ಲಿ ಅಲೆದಾಡಿದ್ದು ಯಾರು ಅಲ್ಲ, ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್, ಸೂಪರ್ಸ್ಟಾರ್ ಅಮಿರ್ ಖಾನ್.
To Ye Caveman Amir Khan Tha BC 😲😲
But Why ? pic.twitter.com/fRgDB6cEhr
— POSITIVE FAN (@imashishsrrk)
To Ye Caveman Amir Khan Tha BC 😲😲
But Why ? pic.twitter.com/fRgDB6cEhr— POSITIVE FAN (@imashishsrrk) January 29, 2025
">January 29, 2025
ಇದನ್ನೂ ಓದಿ:OTT ಅಲ್ಲೂ ವಿವಾದ ಎಬ್ಬಿಸಿದ ಪುಷ್ಪ 2 ರೀಲೋಡೆಡ್; ಕನ್ನಡಿಗರಿಂದ ಭಾರೀ ಆಕ್ರೋಶ
ಬಿಟಿಎಸ್ ಪಿಕ್ಚರ್ ತನ್ನ ಎಕ್ಸ್ ಖಾತೆಯಲ್ಲಿ ಈ ಒಂದು ವಿಚಾರವನ್ನು ಹಂಚಿಕೊಂಡಿದೆ. ಅಮಿರ್ ಖಾನ್ ಮೇಕ್ಅಪ್ ಮಾಡಿಕೊಳ್ಳುತ್ತಿರುವುದು ಅವರನ್ನು ಸಂಪೂರ್ಣವಾಗಿ ಗುಹೆಯಲ್ಲಿರುವ ಮನುಷ್ಯನಂತೆ ರೆಡಿ ಮಾಡುತ್ತಿರುವುದು ಇವೆಲ್ಲಾ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇದನ್ನು ಕಂಡ ಅಭಿಮಾನಿಗಳು ಫನ್ನಿಯಾದ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:20 ವರ್ಷದ ಬಳಿಕ ಟ್ರೋಲ್ ಆದ ಮತ್ತೊಂದು ಸಾಂಗ್; ಚೀ ಚೀ ಚೀ ರೇ ನುನೇ ಚೀ ಅಂದ್ರೆ ಏನು?
ಸೋಷಿಯಲ್ ಮೀಡಿಯಾದಲ್ಲಿ ಅಮಿರ್ ಖಾನ್ ಅವರ ವಿಚಿತ್ರ ಮೇಕೋವರ್ನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಬಹುಶಃ ಅಮಿರ್ ಖಾನ್ ಈಗಲೇ ಲವ್ಯಾಪಾ ಸಿನಿಮಾ ನೋಡಬೇಕು ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಲವ್ಯಾಪಾ ಸಿನಿಮಾ ಇದೇ ಫೆಬ್ರುವರಿ 7 ರಂದು ರಿಲೀಸ್ ಆಗಲಿದೆ. ಒಟ್ಟಿನಲ್ಲಿ ಅಮಿರ್ ಖಾನ್ ಹಾಕಿಕೊಂಡ ಈ ಒಂದು ಗೆಟಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು. ಫ್ಯಾನ್ಸ್ಗಳು ಹಲವು ರೀತಿಯಲ್ಲಿ ಕಾಲೆಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ