/newsfirstlive-kannada/media/post_attachments/wp-content/uploads/2024/04/rape.jpg)
ನವದೆಹಲಿ: ಇಂದಿನಿಂದಲೇ ದೇಶಾದ್ಯಂತ ಮೂರು ಹೊಸ ಅಪರಾಧ ಕಾನೂನುಗಳು ಜಾರಿಗೊಳಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಐಪಿಸಿ ಬದಲಿಗೆ ಸಿಆರ್‌ಪಿಸಿ ಜಾರಿಗೊಳಿಸುವ ಮೂಲಕ ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಅಂತ್ಯವಾಡಿದೆ.
ಇನ್ನು, ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಕಾಯ್ದೆಗಳನ್ನು ಬದಲಿಸಲಾಗಿದೆ. ಇವುಗಳನ್ನು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ರೂಪಿಸಿದೆ. ಜುಲೈ 1ನೇ ತಾರೀಕು ಎಂದರೆ ಇಂದಿನಿಂದಲೇ ಈ ಹೊಸ ಕಾನೂನುಗಳು ಜಾರಿಯಲ್ಲಿವೆ.
ಈ ತಪ್ಪುಗಳಿಗೆ 10 ವರ್ಷ ಶಿಕ್ಷೆ ಗ್ಯಾರಂಟಿ..!
ಯಾರಾದ್ರೂ ಮೋಸ, ವಂಚನೆ, ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಹೊಂದಿದ್ರೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಉದ್ಯೋಗ ಕೊಡಿಸೋ ನೆಪದಲ್ಲಿ ಮತ್ತು ಮದುವೆ ಆಗುತ್ತೇನೆ ಎಂದು ಸುಳ್ಳು ಹೇಳಿ ಲೈಂಗಿಕವಾಗಿ ಬಳಸಿಕೊಂಡ್ರೆ ಜೈಲು ಗ್ಯಾರಂಟಿ. ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಅತ್ಯಾ*ರ ಮಾಡಿದ್ರೆ ಮರಣದಂಡನೆ.. ನೂತನ ಕಾನೂನಿನಲ್ಲಿ ಸಂತ್ರಸ್ತೆಯರ ರಕ್ಷಣೆಗೂ ಹೊಸ ನಿಯಮ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ