/newsfirstlive-kannada/media/post_attachments/wp-content/uploads/2025/02/CBL_CRICKET_1.jpg)
ಚಿಕ್ಕಬಳ್ಳಾಪುರ: ಒನ್ ವರ್ಲ್ಡ್ ಒನ್ ಫ್ಯಾಮಿಲಿ 2025ರ T20 ಟ್ರೋಫಿಯ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಶ್ರೀಲಂಕಾದ ಮಾಜಿ ಪ್ಲೇಯರ್ಸ್ ಇಂದು ಸೆಣಸಾಟ ನಡೆಸಲಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿರುವ ಸಾಯಿ ಕೃಷ್ಣ ಕ್ರಿಕೆಟ್ ಸ್ಟೇಡಿಯಂನಲ್ಲಿ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಸೌಹಾರ್ದಯುತ ಟಿ20 ಪಂದ್ಯ ನಡೆಯಲಿದೆ. ಟೀಮ್ ಇಂಡಿಯಾದಲ್ಲಿ ಮಾಜಿ ಪ್ಲೇಯರ್ಗಳಾದ ದಿಗ್ಗಜ ಸುನಿಲ್ ಗವಾಸ್ಕರ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ:ಸುಪ್ರೀಂ ಕೋರ್ಟ್ನ ಈ ಉದ್ಯೋಗಗಳಿಗೆ ಇಂದೇ ಅಪ್ಲೇ ಮಾಡಿ.. ಎಷ್ಟು ಹುದ್ದೆಗಳು ಇವೆ?
ಅದರಂತೆ ಎದುರಾಳಿ ಶ್ರೀಲಂಕಾ ತಂಡದಲ್ಲಿ ದಿಗ್ಗಜರಾದ ಅರವಿಂದ ಡಿ ಸಿಲ್ವಾ, ಮುತ್ತಯ್ಯ ಮುರಳೀಧರನ್, ಟಿ.ಎಂ ದಿಲ್ಶಾನ್ ಸೇರಿದಂತೆ ಇನ್ನು ಕೆಲ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಸತ್ಯಸಾಯಿ ಆಶ್ರಮದ ಸದ್ಗುರು ಮಧುಸೂದನ ಸಾಯಿ ನೇತೃತ್ವದಲ್ಲಿ ಪಂದ್ಯ ನಡೆಯುತ್ತಿದೆ. ಶಿಕ್ಷಣ, ಪೌಷ್ಠಿಕತೆ ಹಾಗೂ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸುಲು ಕ್ರಿಕೆಟ್ ಅನ್ನು ಆಯೋಜನೆ ಮಾಡಲಾಗಿದೆ. ಟ್ರೋಫಿಯಲ್ಲಿ ಜಗತ್ತೇ ಒಂದು ಕುಟುಂಬ (ವಸುಧೈವ ಕುಟುಂಬಕಂ) ಎಂದು ಬರೆಯಲಾಗಿದೆ.
ಶ್ರೀಲಂಕಾ ಹಾಗೂ ಭಾರತದ ಮಾಜಿ ಆಟಗಾರರು ಟಿ20 ಪಂದ್ಯ ಆಡುವ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸುನಿಲ್ ಗವಾಸ್ಕರ್ ಅವರ ನೇತೃತ್ವದಲ್ಲಿ ತಂಡ ಮುನ್ನಡೆಯಲಿದ್ದು ಇರ್ಫಾನ್ ಪಠಾಣ್ ಆಲ್ರೌಂಡರ್ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಇನ್ನು ವೆಂಕಟೇಶ್ ಪ್ರಸಾದ್ ಅವರು ಬೌಲಿಂಗ್ ಮಾಡಲು ರೆಡಿಯಾಗಿದ್ದಾರೆ. ಇದರ ಜೊತೆಗೆ ಎದುರಾಳಿ ತಂಡದ ಮುತ್ತಯ್ಯ ಮುರುಳೀಧರನ್ ತಮ್ಮ ಸ್ಪಿನ್ ಕೈಚಳಕ ತೋರಲು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ