ಅಪ್ಪುಗೆಗೊಂದು ರೇಟು, ಮುತ್ತಿಗೆ ಮತ್ತೊಂದು ರೇಟು; ಹೊಸ ಟ್ರೆಂಡ್​ ಸೃಷ್ಟಿಸಿದ ಚೀನಾ ಹುಡುಗಿಯರು

author-image
Gopal Kulkarni
Updated On
ಅಪ್ಪುಗೆಗೊಂದು ರೇಟು, ಮುತ್ತಿಗೆ ಮತ್ತೊಂದು ರೇಟು; ಹೊಸ ಟ್ರೆಂಡ್​ ಸೃಷ್ಟಿಸಿದ ಚೀನಾ ಹುಡುಗಿಯರು
Advertisment
  • ಚೀನಾದಲ್ಲಿ ಮಾರ್ಕೆಟ್​ನಲ್ಲಿ ಬಿಕರಿಯಾಗುತ್ತಿವೆ ಚುಂಬನ ಮತ್ತು ಅಪ್ಪುಗೆ
  • ಮುತ್ತಿಟ್ಟರೆ ಇಷ್ಟು ಕೊಡಬೇಕು. ಅಪ್ಪಿಕೊಂಡರೆ ಮತ್ತಷ್ಟು ಕೊಡಬೇಕು
  • ಕೊಟ್ಟು ತೆಗೆದುಕೊಳ್ಳುವ ಆಟಕ್ಕೆ ಪರ ವಿರೋಧದ ಅಭಿಪ್ರಾಯಗಳು

ಬೀಜಿಂಗ್: ನಿತ್ಯ ಹೆಚ್ಚಾಗುತ್ತಿರುವ ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಚೀನಾ ಯುವ ಸಮುದಾಯವನ್ನು ಬೇರೆ ದಿಕ್ಕಿನೆಡೆಗೆ ಕರೆದುಕೊಂಡು ಹೋಗುತ್ತಿವೆ. ಯುವಕರಲ್ಲಿ ಬೇರೆಯದ್ದೆ ಟ್ರೆಂಡ್​ ಸೃಷ್ಟಿ ಮಾಡುತ್ತಿದೆ. ಅವರು ಕಂಡುಕೊಂಡ ಹೊಸ ಟ್ರೆಂಡ್ ಈಗ ದೊಡ್ಡ ಸದ್ದು ಮಾಡುತ್ತಿದೆ. ಅಪ್ಪುಗೆ ಮತ್ತು ಕಿಸ್​ಗಾಗಿ ಇಷ್ಟಿಷ್ಟು ರೇಟ್​ ಫಿಕ್ಸ್ ಮಾಡಿಕೊಂಡು ಹುಡುಗಿಯರು ಬೋರ್ಡ್ ಹಿಡಿದುಕೊಂಡು ರಸ್ತೆಗಳಲ್ಲಿ ನಿಲ್ಲುತ್ತಿದ್ದಾರೆ. ಅದನ್ನು ಈಗ ಸ್ಟ್ರೀಟ್ ಗರ್ಲ್​ಫ್ರೆಂಡ್ ಎಂದೇ ಕರೆಯಲಾಗುತ್ತಿದೆ. ಮೊದಲು ಇದು ಏಪ್ರಿಲ್ 2023ರಂದು ಶುರುವಾಗಿತ್ತು. ಆಗ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸುದ್ದಿ ಮಾಡಿ ಸೈಲೆಂಟ್ ಆಗಿತ್ತು. ಆದ್ರೆ ಅದು ಈಗ ದೊಡ್ಡ ಟ್ರೆಂಡ್ ಆಗಿ ಬದಲಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಅಮೆರಿಕ ಲೇಡಿ ಟಾರ್ಚರ್‌ ಕೇಸ್‌ಗೆ ಟ್ವಿಸ್ಟ್‌.. ಚಿತ್ರಹಿಂಸೆಯ ರಹಸ್ಯ ಬಯಲು; ಏನದು?

ಈಗ ಹುಡಿಗಿಯರ ಈ ಒಂದು ಮಧುರ ಸೇವೆ ದೊಡ್ಡ ಸದ್ದು ಮಾಡುತ್ತಿದೆ ಚೀನಾದ ಅತ್ಯಂತ ಜನಬೀಡ ಪ್ರದೇಶವಾದ ಸೆಂಜ್​ಹೆನ್ ನಲ್ಲಿ ಈಗ ಮುತ್ತು ಮತ್ತು ಅಪ್ಪುಗೆಗಳು ದುಡ್ಡಿಗಾಗಿ ಬಿಕರಿಯಾಗುತ್ತಿವೆ. ಚೀನಾದ ಒಂದು ಯುವನ್​ಗೆ ಒಂದು ಅಪ್ಪುಗೆ 10 ಯುವನ್​ಗೆ ಒಂದು ಕಿಸ್ ಎಂದು ಬೋರ್ಡ್ ಹಿಡಿದುಕೊಂಡು ಹುಡುಗಿಯರು ನಿಲ್ಲುತ್ತಿದ್ದಾರೆ. ಪ್ರೆಡೆಸ್ಟ್ರೀಯನ್ ಸ್ಟ್ರೀಟ್​ನಲ್ಲಿ ಸಾಲಾಗಿ ಅಂಗಡಿಗಳನ್ನೆ ತೆಗೆದಿರುವ ಯುವತಿಯರು ಈ ರೀತಿ ಆಫರ್​ಗಳನ್ನು ಹುಡುಗರಿಗೆ ನೀಡುತ್ತಿದ್ದಾರೆ. ಮನೆ ಕೆಲಸಗಳನ್ನು ಮಾಡುವುದರಿಂದ ಹಿಡಿದು, ಜೊತೆಗೆ ಬಂದು ಬಾರ್​ನಲ್ಲಿ ಕುಡಿಯುವದಕ್ಕೆ ಕಂಪನಿ ಕೊಡಲು ಸಹ ಒಂದು ರೇಟ್ ಫಿಕ್ಸ್ ಆಗಿದೆ. ಮನೆ ಕೆಲಸಕ್ಕೆ 20 ಯುವನ್ ಹಾಗೂ ಜೊತೆಗೆ ಬಂದು ಡ್ರಿಂಕ್ಸ್ ಮಾಡಲು 40 ಯುವನ್ ಎಂದು ದರ ನಿಗದಿಯಾಗಿದೆ. ಇದು ಸದ್ಯ ಯುವಕರ ಟೆನ್ಶನ್ ತಪ್ಪಿಸುವ ಒಂದು ಐಡಿಯಾ ಆಗಿದ್ರೆ, ಸರಳ ಮಾರ್ಗದಲ್ಲಿ ಅಪಾರ ಗಳಿಕೆಗೆ ಹುಡುಗಿಯರಿಗೆ ದೊಡ್ಡ ಮಾರ್ಗವಾಗಿದೆ. ಒಂದು ಹುಡುಗನ ಜೊತೆ ಡೇಟ್ ಹೋದ್ರೆ ಚೀನಾದ ನೂರು ಯುವನ್ ಗಳಿಸುತ್ತಿದ್ದಾರೆ ಹುಡುಗಿಯರು .

publive-image
ಒಂದು ಕಡೆ ಚೀನಾದಲ್ಲಿ ಇದಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ ಮತ್ತೊಂದು ಕಡೆ ವಿರೋಧವು ವ್ಯಕ್ತವಾಗುತ್ತಿದೆ. ಇದರಿಂದ ಹುಡುಗಿಯರ ಸ್ಟ್ರೇಸ್ ರಿಲೀಫ್ ಆಗುತ್ತೆ. ವಿಭಿನ್ನವಾದ ಜನರ ಪರಿಚಯವಾಗುತ್ತೆ ಇದು ಉತ್ತಮ ಬೆಳವಣಿಗೆ ಅಂತ ಕೆಲವುರು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಇದು ತಾತ್ಕಾಲಿಕವಾಗಿ ಸರಿಯಾದರೂ ಮುಂದೆ ಬೇರೆಯದ್ದೇ ರೀತಿಯ ಪರಿಣಾಮಗಳನ್ನು ಬೀರಲಿದೆ. ಹುಡುಗಿಯರ ಸುರಕ್ಷತೆ ದೃಷ್ಟಿಯಿಂದ ನೋಡಿದಾಗ ಇದು ಅಷ್ಟು ಸರಿಯಲ್ಲ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment