/newsfirstlive-kannada/media/post_attachments/wp-content/uploads/2024/09/oNEPLUS-13.jpg)
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಹಾಗಾಗಿ ಒಂದಿಷ್ಟು ಬಳಕೆದಾರರು ಒನ್ ಪ್ಲಸ್ ಪ್ರೊಡಕ್ಟ್ಗಾಗಿ ಕಾಯುತ್ತಲೇ ಇರುತ್ತಾರೆ. ಹೀಗಿರುವಾಗ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸಮಸ್ಯೆ ಒಂದು ಎದುರಾಗಿದೆ. ಈ ಸಮಸ್ಯೆ ಮತ್ಯಾವುದು ಅಲ್ಲ, ಗ್ರೀನ್ ಲೈನ್ ಸಮಸ್ಯೆ.
ಡಿಸ್ಪ್ಲೇ ಮೇಲೆ ಮೂಡುವ ಈ ಸಮಸ್ಯೆಯಿಂದ ಗ್ರಾಹಕರು ಭಾರೀ ತಲೆಕೆಡಿಸಿಕೊಂಡಿದ್ದಾರೆ. ಸದ್ಯ ಒನ್ ಪ್ಲಸ್ ಕಂಪನಿ ಈ ಗ್ರೀನ್ ಲೈನ್ ಸಮಸ್ಯೆ ಎದುರಿಸುವ ಎಲ್ಲರಿಗೂ ಪರಿಹಾರ ಒದಗಿಸಲು ಮುಂದಾಗಿದೆ. ಡಿಸ್ಪ್ಲೇಯನ್ನು ಬದಲಾಯಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.
ಏನಿದು ಸಮಸ್ಯೆ?
ಒನ್ಪ್ಲಸ್ 8 ಮತ್ತು ಒನ್ಪ್ಲಸ್ 9 ಸರಣಿ ಸ್ಮಾರ್ಟ್‌ಫೋನ್ ಬಳಕೆದಾರರು ಡಿಸ್ಪ್ಲೇಯಲ್ಲಿ ಗ್ರೀನ್ ಲೈನ್ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಮಾರ್ಟ್‌ಫೋನ್ ಅಪ್ಡೇಟ್ ಮಾಡಿದಂತೆ ಗ್ರೀನ್ ಲೈನ್ ಕಾಣಿಸಿಕೊಳ್ಳುತ್ತಿದೆ. ಇದರಿಂದ ಬೇಸತ್ತ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲೂ ವರದಿ ಮಾಡಿದ್ದಾರೆ.
ಅನೇಕ ಭಾರತೀಯರು ಗ್ರೀನ್ ಲೈನ್ ಸಮಸ್ಯೆಯಿಂದ ತಲೆಕೆಡಿಸಿಕೊಂಡಿದ್ದು, ಕೊನೆಗೆ ಕಂಪನಿ ಇದನ್ನು ಮದರ್ಬೋರ್ಡ್ಗಳಿಗೆ ಸಂಬಂಧಿಸಿದ ಸಮಸ್ಯೆಯೆಂದು ಗುರುತಿಸಿತು. ಬಳಕೆದಾರರು ಎದುರಿಸುತ್ತಿರುವ ಡಿಸ್ಪ್ಲೇ ಸಮಸ್ಯೆಗಾಗಿ ಬದಲಿ ವ್ಯವಸ್ಥೆಯನ್ನು ಮಾಡಿದೆ.
ನೀವು ಮಾಡಬೇಕಾದ ಕೆಲಸವೇನು?
ಡಿಸ್ಪ್ಲೇ ಸಮಸ್ಯೆ ಎದುರಿಸುತ್ತಿರುವ ಬಳಕೆದಾರರು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಕಂಪನಿ ಸೂಚಿಸಿದೆ. ಯಾವುದೇ ವೆಚ್ಚವಿಲ್ಲದೆ ಗ್ರೀನ್ ಲೈನ್ ಸಮಸ್ಯೆಯನ್ನು ಸರಿಪಡಿಸಿಕೊಡಲಾಗುತ್ತದೆ ಎಂದು ಹೇಳಿದೆ. ಕಂಪನಿಯು ಈಗಾಗಲೇ ಒನ್ಪ್ಲಸ್ 9 ಮತ್ತು 10ನಲ್ಲಿನ ಮದರ್ಬೋರ್ಡ್ ಸಮಸ್ಯೆಯನ್ನು ಪರಿಹರಿಸಿದೆ. ಇದರ ಜೊತೆ ಜೊತೆಗೆ ಕಂಪನಿ ಒನ್ಪ್ಲಸ್ 13 ಸ್ಮಾರ್ಟ್ಫೋನನ್ನ ಬಿಡುಗಡೆ ಮಾಡಲು ಮುಂದಾಗಿದೆ. ಅಧಿಕೃತ ದಿನಾಂಕವನ್ನು ಸಹ ಘೋಷಣೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ