2000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ.. SSLC ಇಂದ ಪದವಿವರೆಗೆ ಓದಿದವರು ಅರ್ಜಿ ಸಲ್ಲಿಸಬಹುದು

author-image
Bheemappa
Updated On
250ಕ್ಕೂ ಹೆಚ್ಚು ಉದ್ಯೋಗಗಳು.. GAIL ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ಯಾವುದು?
Advertisment
  • 10, 12, ಐಟಿಐ ಹಾಗೂ ಪದವೀಧರರಿಗೆ ಉದ್ಯೋಗಾವಕಾಶ ಇದೆ
  • ವೆಬ್​ಸೈಟ್​ ಲಿಂಕ್​ಗೆ ಭೇಟಿ ನೀಡಿ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು
  • ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ

ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ ಇಂಡಿಯಾ ಲಿಮಿಟೆಡ್ (ಒಎನ್​​ಜಿಸಿ)​ ಖಾಲಿ ಇರುವಂತ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ. ಈಗಾಗಲೇ ಈ ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡಿತ್ತು. ಆದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ ಮಾಡಲಾಗಿದೆ.

2 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಕಂಪನಿ ನೇಮಕ ಮಾಡುತ್ತಿದೆ. ಹೀಗಾಗಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ದೇಶದ ವಿವಿಧೆಡೆ ಇರುವ ಕಂಪನಿಯ ವಿಭಾಗಗಳಲ್ಲಿ ಈ ನೇಮಕಾತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಸ್ಥೆಯ ವೆಬ್​ಸೈಟ್​ ಲಿಂಕ್​ಗೆ ಭೇಟಿ ನೀಡಿ. ವೆಬ್​ಸೈಟ್ ಲಿಂಕ್-https://ongcapprentices.ongc.co.in/ongcapp/

ಶೈಕ್ಷಣಿಕ ಅರ್ಹತೆ-

SSLC, PUC, ITI, ಡಿಪ್ಲೋಮಾ, ಬಿಎಸ್​ಸಿ, ಬಿಇ, ಬಿಟೆಕ್, ಬಿಬಿಎ

ವಯಸ್ಸಿನ ಮಿತಿ
18 ರಿಂದ 24 ವರ್ಷದ ಒಳಗಿನವರಿಗೆ ಅವಕಾಶ

ಇದನ್ನೂ ಓದಿ:PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

publive-image

ಒಎನ್​​ಜಿಸಿಯಲ್ಲಿ ಖಾಲಿ ಇರುವ ಹುದ್ದೆಯ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳ ಸಂಖ್ಯೆ- 2,236

ಆಯ್ಕೆ ಪ್ರಕ್ರಿಯೆ

  • ಮೆರಿಟ್ ಲಿಸ್ಟ್
  • ದಾಖಲಾತಿ ಪರಿಶೀಲನೆ

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 10 ನವೆಂಬರ್ 2024

ಸ್ಟೇಫಂಡ್ ಎಷ್ಟು ನೀಡುತ್ತಾರೆ..?

ಕೋರ್ಸ್​ಗೆ ತಕ್ಕಂತೆ ಈ ಹಣ ನೀಡಲಾಗುತ್ತದೆ
₹8050, ₹7700, ₹7000, ₹8050, 9000 ರೂಪಾಯಿಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment