newsfirstkannada.com

×

ONGC; ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.. SSLC, PUC, ಐಟಿಐ ಸೇರಿ ಪದವೀಧರರಿಗೂ ಅವಕಾಶ

Share :

Published October 27, 2024 at 4:29pm

Update October 27, 2024 at 4:30pm

    500 ಅಲ್ಲ, 1,000 ಅಲ್ಲ 2 ಸಾವಿರಕ್ಕೂ ಅಧಿಕ ಉದ್ಯೋಗಳು

    ಡಿಪ್ಲೋಮಾ, ಬಿಟೆಕ್, ಬಿಬಿಎ, BSc, BEದವರಿಗೂ ಅವಕಾಶ

    ಹುದ್ದೆಗೆ ಸಂಬಂಧಿಸಿದಂತೆ ಇನ್ನಿತರ ಮಾಹಿತಿ ಈ ಕೆಳಗೆ ನೀಡಿದೆ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ಒಎನ್​​ಜಿಸಿ)ನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ತೈಲ ಕಂಪನಿಂದಲೇ ನಿಮ್ಮ ವೃತ್ತಿ ಆರಂಭಿಸಬೇಕು ಎನ್ನುವವರು ಈ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 500 ಅಲ್ಲ, 1000 ಅಲ್ಲ 2 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ನಿಮಗೆ ಆಸಕ್ತಿ ಇದ್ದರೆ ಇವುಗಳಿಗೆ ಅಪ್ಲೇ ಮಾಡಬಹುದು. ಈಗಾಗಲೇ ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಲಾಗುತ್ತಿದೆ. ಆದರೆ ಇದೀಗ ಇಲಾಖೆ ಮತ್ತೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ ಮಾಡಿದೆ.

ದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ ಇಂಡಿಯಾ ಲಿಮಿಟೆಡ್​ನಲ್ಲಿ ಕೆಲಸ ಮಾಡಲು ಇದೊಂದು ಅವಕಾಶ ಆಗಿದೆ. ಹೀಗಾಗಿ ಅಭ್ಯರ್ಥಿಗಳು ಇಂತಹ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬಾರದು. ಹೆಚ್ಚು ಜಾಬ್​ಗಳು ಇದ್ದಿದ್ದರಿಂದ ಉದ್ಯೋಗ ಸಿಕ್ಕೆ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ದೇಶದಲ್ಲಿರುವ ಕಂಪನಿಯ ಬಹುತೇಕ ವಿಭಾಗಗಳಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಸಂಸ್ಥೆಯ ವೆಬ್​ಸೈಟ್​ ಲಿಂಕ್​ಗೆ ಭೇಟಿ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ಇದನ್ನೂ ಓದಿ: 5 ಟ್ರೋಫಿ, 11 ಫೈನಲ್​ ಆಡಿದ ಏಕೈಕ ಪ್ಲೇಯರ್ MS ಧೋನಿ.. ಆದ್ರೆ ಆ ತಂಡಕ್ಕೆ ಕಪ್ ಗೆಲ್ಲಿಸಿಕೊಡಲು ಆಗಲಿಲ್ಲ! 

ಮುಂಬೈ ಸೆಕ್ಟರ್‌ನಲ್ಲಿ 310, ನಾರ್ಥರ್ನ್‌ ಸೆಕ್ಟರ್ 161, ಸದರ್ನ್‌ ಸೆಕ್ಟರ್ 335, ವೆಸ್ಟರ್ನ್‌ ಸೆಕ್ಟರ್‌ 547, ಈಸ್ಟರ್ನ್‌ ಸೆಕ್ಟರ್ 583, ಸೆಂಟ್ರಲ್ ಸೆಕ್ಟರ್‌ನಲ್ಲಿ 249 ಹುದ್ದೆಗಳು ಖಾಲಿ ಇವೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, PWBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಪೋಸ್ಟ್ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳು- 2,236

ಶೈಕ್ಷಣಿಕ ಅರ್ಹತೆ-
SSLC, PUC, ITI, ಡಿಪ್ಲೋಮಾ, ಬಿಎಸ್​ಸಿ, ಬಿಇ, ಬಿಟೆಕ್, ಬಿಬಿಎ

ವಯಸ್ಸಿನ ಮಿತಿ
18 ರಿಂದ 24 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ

  • ಮೆರಿಟ್ ಲಿಸ್ಟ್
  • ದಾಖಲಾತಿ ಪರಿಶೀಲನೆ

ಸ್ಟೇಫಂಡ್ ಎಷ್ಟು ನೀಡುತ್ತಾರೆ..?
ಕೋರ್ಸ್​ಗೆ ತಕ್ಕಂತೆ ಈ ಹಣ ನೀಡಲಾಗುತ್ತದೆ
₹8050, ₹7700, ₹7000, ₹8050, 9000 ರೂಪಾಯಿಗಳು

ವೆಬ್​ಸೈಟ್ ಲಿಂಕ್- https://ongcapprentices.ongc.co.in/ongcapp/

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ
10 ನವೆಂಬರ್ 2024 (ಇಲ್ಲಿವರೆಗೆ ಅರ್ಜಿ ವಿಸ್ತರಣೆ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ONGC; ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.. SSLC, PUC, ಐಟಿಐ ಸೇರಿ ಪದವೀಧರರಿಗೂ ಅವಕಾಶ

https://newsfirstlive.com/wp-content/uploads/2024/09/Job-2.jpg

Load More