ಗ್ರಾಹಕರಿಗೆ ಬಿಗ್ ಶಾಕ್​.. ಮಾರ್ಕೆಟ್​ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೆಜಿಗೆ ಎಷ್ಟು ರೂಪಾಯಿ?

author-image
Bheemappa
Updated On
ಗ್ರಾಹಕರಿಗೆ ಬಿಗ್ ಶಾಕ್​.. ಮಾರ್ಕೆಟ್​ನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೆಜಿಗೆ ಎಷ್ಟು ರೂಪಾಯಿ?
Advertisment
  • ಕರ್ನಾಟಕದ ಮಾರ್ಕೆಟ್​ನಲ್ಲಿ ಯಾವ ರಾಜ್ಯದ ಈರುಳ್ಳಿ ಇದೆ?
  • ಎರಡು ರಾಜ್ಯಗಳಲ್ಲಿ ಧಾರಾಕಾರ ಮಳೆಯಿಂದ ಬೆಳ್ಳುಳ್ಳಿ ಬೆಲೆ ಏರಿಕೆ
  • ಈರುಳ್ಳಿ, ಬೆಳ್ಳುಳ್ಳಿ ಬೆಲೆ ಹೆಚ್ಚು ಆಗಲು ಕಾರಣಗಳು ಇಲ್ಲಿವೆ

ಬೆಂಗಳೂರು: ಮಾರ್ಕೆಟ್​ನಲ್ಲಿ ಎಲ್ಲ ತರಕಾರಿಗಳಿಗಿಂತಲೂ ನಮಗೆ ಬೆಲೆ ಜಾಸ್ತಿ ಎನ್ನುತ್ತಿವೆ ಬೆಳ್ಳುಳ್ಳಿ ಹಾಗೂ ಈರುಳ್ಳಿ. ಗ್ರಾಹಕರು ಬೆಳ್ಳುಳ್ಳಿ, ಈರುಳ್ಳಿ ಖರೀದಿ ಮಾಡಲು ಹೋದರೆ ಅವುಗಳ ಬೆಲೆ ಕೇಳಿಯೇ ಸುಮ್ಮನೆ ಹಿಂದಿರುಗುತ್ತಿದ್ದಾರೆ. ಹಲವೆಡೆ ಅತಿಯಾದ ಮಳೆಯಿಂದಾಗಿ ಬೆಳ್ಳುಳ್ಳಿ, ಈರುಳ್ಳಿ ಬೆಲೆ ಗಗನಕ್ಕೇರಿದೆ.

ಇದನ್ನೂ ಓದಿ: ಸಿಲಿಕಾನ್​ ಸಿಟಿ ಮಂದಿಗೆ ಬಿಗ್​ ಶಾಕ್​​.. ತರಕಾರಿ ರೇಟ್​ ಕೇಳಿ ದಂಗಾದ ಜನ!

ಧಾರಾಕಾರ ಮಳೆಯಿಂದಾಗಿ ಕೆಲವೆಡೆ ಬೆಳೆ ನಾಶವಾಗಿದ್ದರಿಂದ ಸದ್ಯ ಬೆಳ್ಳುಳ್ಳಿಯ ಬೆಲೆ ಪ್ರತಿ ಕೆ.ಜಿಗೆ 400 ರೂಪಾಯಿ ಇದೆ. ಜೊತೆಗೆ ನಿರಂತರ ಮಳೆ ಸುರಿದಿದ್ದರಿಂದ ಕೊಳೆ ರೋಗ ಬಂದು ಈರುಳ್ಳಿ ಇಳುವರಿ ಕಡಿಮೆಯಾದ ಪರಿಣಾಮ ಸದ್ಯ ಬೆಲೆ ಹೆಚ್ಚು ಆಗಿದ್ದು ಕೆ.ಜಿಗೆ 60 ರೂಪಾಯಿ ಇದೆ. ಕೊಳೆ ರೋಗದಿಂದಲೇ ಕರ್ನಾಟಕದಲ್ಲಿ ಈರುಳ್ಳಿ ಇಳುವರಿ ಕುಸಿದಿದೆ. ಬೆಲೆ ಹೆಚ್ಚು ಆಗಲು ಇದೇ ಕಾರಣವಾಗಿದೆ. ರಾಜ್ಯದ ಮಾರ್ಕೆಟ್​ಗಳಲ್ಲಿ ಮಹಾರಾಷ್ಟ್ರದ ಈರುಳ್ಳಿಯ ದರ್ಬಾರ್ ಜೋರಾಗಿದೆ.

ಇದನ್ನೂ ಓದಿ:ಯಂಗ್ ಕ್ರಿಕೆಟ್​ ಪ್ಲೇಯರ್ ಹೃದಯಲ್ಲಿ ಹೋಲ್​.. U-19 ವಿಶ್ವಕಪ್ ಗೆದ್ದುಕೊಟ್ಟ ಕ್ಯಾಪ್ಟನ್ ಕಮ್​ಬ್ಯಾಕ್​ ಯಾವಾಗ?

publive-image

ಯಶವಂತಪುರ- ದಾಸನಪುರ ಮಾರ್ಕೆಟ್​ಗೆ 127 ಈರುಳ್ಳಿ ಲಾರಿ ಪೈಕಿ 20 ಮಾತ್ರ ಕರ್ನಾಟಕದ ಲಾರಿಗಳು ಆಗಿವೆ. ಚಿತ್ರದುರ್ಗದ ಕಡಯಿಂದ ಮಾತ್ರ ಇವು ಬರುತ್ತಿವೆ. ಉತ್ತರ ಕರ್ನಾಟಕದ ಈರುಳ್ಳಿ ಮಾರ್ಕೆಟ್​ಗೆ ಬರಲು ಇನ್ನೂ ತಿಂಗಳು ಬೇಕು. ಉತ್ತರ ಕರ್ನಾಟಕದಲ್ಲೂ ಅತಿಯಾದ ಮಳೆ ಹಿನ್ನೆಲೆಯಲ್ಲಿ ಇಳುವರಿ ಕುಸಿತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಮಧ್ಯ ಮಪ್ರದೇಶ ಮತ್ತು ರಾಜಸ್ಥಾನದಲ್ಲಿ ಭಾರೀ ಮಳೆಯಿಂದಾಗಿ ಇಳುವರಿ ಕಡಿಮೆ ಆಗಿದ್ದು ಕರ್ನಾಟಕಕ್ಕೆ ಬರುವ ಬೆಳ್ಳುಳ್ಳಿ ಕಡಿಮೆಯಾಗಿದೆ. ಈಗ 400 ರೂಪಾಯಿ ಇರುವ ಬೆಳ್ಳುಳ್ಳಿ ಬೆಲೆ 500 ರೂಪಾಯಿ ದಾಟುವ ನಿರೀಕ್ಷೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment